ರಾಹುಲ್ ಗಾಂಧಿ ಸ್ವರ್ಧಿಸಿದರೂ ಗೆಲ್ಲುವುದು ವರ್ತೂರು ಹುಲಿ- ಎಸ್.ಮುನಿಸ್ವಾಮಿ

ಕೋಲಾರ,ಜ,೨- ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ, ಇಲ್ಲಿ ಸ್ಪರ್ಧಿಸುತ್ತಾರೆ ಎಂಬೆಲ್ಲ ಊಹಾಪೋಹಗಳಿಗೆ ಕಡಿವಾಣಗಳನ್ನು ಹಾಕಿ, ಸಿದ್ದರಾಮಯ್ಯ ಅಲ್ಲ ಸ್ವತಹ ರಾಹುಲ್ ಗಾಂಧಿಯೇ ಇಲ್ಲಿ ಸ್ಪರ್ಧಿಸಿದರೂ ಸರಿ, ಈ ಬಾರಿ ನಮ್ಮ ಬಿಜೆಪಿ ಅಭ್ಯರ್ಥಿ ವರ್ತೂರು ಹುಲಿ ಗೆಲ್ಲುವುದು ಶತಸಿದ್ದ ಎಂದು ಸಂಸದ ಎಸ್.ಮುನಿಸ್ವಾಮಿ ಭವಿಷ್ಯ ನುಡಿದರು.
ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ಆಯೋಜಿಸಿದ್ದ ಬೃಹತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಕಳೆದ ಹತ್ತು ವರ್ಷಗಳ ಕಾಲ ವರ್ತೂರು ಪ್ರಕಾಶ್ ರವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳು ಅವರಿಗೆ ಶ್ರೀರಕ್ಷೆ ಆಗಲಿದ್ದು, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಅವರು ಖಂಡಿತ ಗೆಲುವನ್ನು ಸಾಧಿಸುತ್ತಾರೆ ಎಂದರು.
ಸಿದ್ದರಾಮಯ್ಯ ಸೋಲು ಖಚಿತ-
ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿ ಈಗ ಕೋಲಾರಕ್ಕೆ ಬರುತ್ತಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ದಲಿತ ನಾಯಕರಾದ ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕಿತ್ತು ಅವರನ್ನು ಸೋಲಿಸಿದರು ಮಲ್ಲಿಕಾರ್ಜುನ ಖರ್ಗೆ ರವರನ್ನು ಸೋಲಿಸಿದರು ಎಚ್ ವಿಶ್ವನಾಥ್ ಎಂಟಿಬಿ ನಾಗರಾಜ್ ಇವರನ್ನೆಲ್ಲ ಹಾಳು ಮಾಡಿ ಬರುತ್ತಿರುವ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಕೋಲಾರದ ಜನ ನಿಮ್ಮನ್ನು ಸೋಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರ್ತೂರು ಅಗಮನ ಆನೆಬಲ-
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಅಹಿಂದಪರ ಮತ್ತು ದಲಿತಪರ ಆಡಳಿತ ನೀಡುತ್ತಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಆಗಮನದಿಂದ ಆನೆ ಬಲ ಬಂದಂತಾಗಿದ್ದು ಮುಂಬರುವ ದಿನಗಳಲ್ಲಿ ಕೋಲಾರ ಜಿಲ್ಲೆಯ ೪ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತ ಎಂದು ಅಭಿಪ್ರಾಯಿಸಿದರು.
ಕಾರ್ಯಕರ್ತರು ಪ್ರತಿ ಗ್ರಾಮದ ಮನೆ,ಮನೆಗಳಲ್ಲಿ ಬಿಜೆಪಿಗೆ ಮತ ಹಾಕಿಸ ಬೇಕು, ಚುನಾವಣೆಯಲ್ಲಿ ಗೆದ್ದಿರುವ ಶಾಸಕರಾಗಿರುವರು ಮನೆಯಲ್ಲಿ ಕೊತಿದ್ದಾರೆ.ಸೋತಿರುವವರು ಜನಪರವಾಗಿ ಗ್ರಾಮ,ಗ್ರಾಮದಲ್ಲಿ ಓಡಾಡುತ್ತಿದ್ದಾರೆ ಎಂದು ಹೇಳಿದರು,
೩-೪ ತಲೆ ಮಾರಿಗೆ ಅಗುವಷ್ಟು ಹಣ ಕಾಂಗ್ರೇಸ್ ಮಾಡಿದೆ ಎಂದು ಒಪ್ಪಿದ್ದಾರೆ-
ಈ ಹಿಂದೆ ಸರ್ಕಾರದಿಂದ ೧೦೦ ರೂ ಬಿಡುಗಡೆ ಅದರೆ ೨೦ ರೂ ಮಾತ್ರ ಫಲಾನುಭವಿಗೆ ತಲುಪುತ್ತಿತ್ತು, ಶ್ರೀನಿವಾಸಪುರ ಶಾಸಕರು ಕಾಂಗ್ರೇಸ್ ಆಡಳಿತದಲ್ಲಿ ೩-೪ ತಲೆಮಾರುಗಳಿಗೆ ಅಗುವಷ್ಟು ಹಣ ಮಾಡಿದ್ದೇವೆ ಎಂದು ಒಪ್ಪಿ ಕೊಂಡಿದ್ದಾರೆ ಎಂದು ನೆನಪಿಸಿದರು, ನಮ್ಮ ಮಾಲೂರು ಶಾಸಕರು ಕಲ್ಲು,ಮಣ್ಣು ಹಾಲು, ತುಪ್ಪ, ಮಜ್ಜಿಗೆ ಕೊಡ ಬಿಡುತ್ತಿಲ್ಲ ಇಷ್ಟೆ ಅಲ್ಲದೆ ಒಕ್ಕೂಟದ ಅಧ್ಯಕ್ಷರಾಗಿರುವ ಅವರು ಒಂದು ಕಾರಿಗೆ ಮಾತ್ರ ಡಿಸೇಲ್ ಹಾಕಿಸಿ ಕೊಳ್ಳದೆ ತಮ್ಮ ಮನೆಯಲ್ಲಿನ ಮೂರು ಕಾರುಗಳಿಗೆ ಒಕ್ಕೂಟದ ಹಣದಲ್ಲಿ ಪೆಟ್ರೋಲ್, ಡಿಸೇಲ್ ಹಾಕಿಸಿ ಕೊಳ್ಳುತ್ತಿದ್ದಾರೆ ಎಂದರೆ ಇನ್ನೆನು ತಾನೆ ಜನರಿಗೆ ಬಿಡುತ್ತಾರೆ ನೀವೆ ಹೇಳಿ ?ಎಂದು ಪ್ರಶ್ನಿಸಿದ ಅವರು ಇಂಥವರನೆಲ್ಲಾ ಈ ಭಾರಿ ಮನೆಗೆ ಕಳುಹಿಸುವಂತ ಕೆಲಸವಾಗ ಬೇಕೆಂದು ಜೂತೆಗೆ ಈ ಭಾರಿ ವರ್ತೂರು ಪ್ರಕಾಶ್ ಅವರನ್ನು ಶಾಸಕರನ್ನಾಗಿ ಮಾಡಲೇ ಬೇಕೆಂದು ಕರೆ ನೀಡಿದರು,
ಅಧಿಕಾರದಲ್ಲಿ ಇಲ್ಲವಾದರೂ ೧೦ ಕೋಟಿ ತಂದಿರುವೆ-
ಸಮಾರಂಭದ ಕೇಂದ್ರ ಬಿಂದುವಾಗಿದ್ದ ಮಾಜಿ ಸಚಿವ ಆರ್ ವರ್ತೂರು ಪ್ರಕಾಶ್ ಮಾತನಾಡಿ, ಒಕ್ಕಲೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆಗಬೇಕಾದ ಕೆಲಸಗಳು ಬೇಕಾದಷ್ಟು ಇದ್ದು ಗ್ರಾಮಸ್ಥರು ನನಗೆ ಮನವಿ ನೀಡಿದ್ದು, ನನಗೆ ಅಧಿಕಾರ ಇಲ್ಲದಿದ್ದರೂ ಕೂಡ ಬಸವರಾಜ್ ಬೊಮ್ಮಾಯಿಜಿರವರ ಬಳಿ ೧೦ ಕೋಟಿ ಹಣ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ತಂದಿದ್ದೇನೆ ಹಾಗೂ ಸಂಸದರ ಅನುದಾನದ ಅಡಿಯಲ್ಲಿ ಸುಮಾರು ೧೦ ಲಕ್ಷ ರೂಗಳ ಕಾಮಗಾರಿಯನ್ನು ಮಾಡಿಸಿಕೊಡುತ್ತೇನೆ ಎಂದರು.
ನಾಲ್ಕೂವರೆ ವರ್ಷದಿಂದ ನಯಾಪೈಸೆ ಅಭಿವೃದ್ದಿಯಿಲ್ಲ-
ಈ ಮೊದಲು ನಾನು ಅಧಿಕಾರದಲ್ಲಿದ್ದಾಗ ಮಾಡಿದ ಜನಸೇವೆ ಕಾರ್ಯಗಳು ಈಗಲೂ ನಿಮ್ಮೆಲ್ಲರ ಕಣ್ಣಮುಂದೆ ಇದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಕ್ಷೇತ್ರವು ಯಾವುದೇ ರೀತಿಯ ನಯಾಪೈಸೆ ಅಭಿವೃದ್ಧಿಯಾಗದೆ ಇರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ವಿಷಾಧಿಸಿದರು.
ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ್ತೊಂದು ಬಾರಿ ಆಶೀರ್ವಾದ ಮಾಡಿ ನಿಮಗೆ ಸೇವೆ ಮಾಡಲು ಅವಕಾಶ ಕೊಡಿ ನಾನು ನಿಮ್ಮ ಮನೆ ಮಗನಾಗಿ ನಿಮ್ಮ ಮನೆ ಸೇವಕನಾಗಿ ಹಗಲಿರಳು ದುಡಿಯುತ್ತೇನೆ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ಮಾಲೂರು ಮಂಜುನಾಥಗೌಡ, ಕೆಜಿಎಫ್ ವೈ ಸಂಪಂಗಿ, ಬೆಗ್ಲಿ ಸೂರ್ಯ ಪ್ರಕಾಶ್, ಬಂಕ್ ಮಂಜುನಾಥ್, ಅರುಣ್ ಪ್ರಸಾದ್, ಸಿಡಿರಾಮಚಂದ್ರಗೌಡ. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ . ಪ್ರೇಮಸಾಗರ ಗೌಡ .ಹಾಗೂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಲವರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ವರ್ತೂರ್ ಪ್ರಕಾಶ್ ರವರ ಮೇಲೆ ವಿಶ್ವಾಸವಿಟ್ಟು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ಗ್ರಾಮ ಪಂಚಾಯಿತಿ ಸದಸ್ಯ . ಹಬ್ಬಣ್ಣ. ಶೋಭಾ ಮಂಜುನಾಥ. ಶ್ರೀಪತಿ. ವೇದ ಪ್ರಕಾಶ್. ನಾರಾಯಣಗೌಡ. ಗ್ಯಾಸ್ ಮಂಜುನಾಥ್. ಶ್ರೀಕಾಂತ್. ಆಕಾಶ್. ಮಾರ್ಕೊಂಡಪ್ಪ. ವಿ ಎಂ ಕೆ ರಾಮಚಂದ್ರಪ್ಪ. ಗಗನ್. ವೆಂಕಟಸ್ವಾಮಿ. ಸತೀಶ್ ಯಾದವ್. ಶೆಟ್ಟಿ ಕೊತ್ತನೂರು ಸಂಪಂಗೆಪ್ಪ. ಡಿಶ್ ಮಂಜುನಾಥ್. ಅಭಿ. ಜೈರಾಮ್. ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಪದ್ಮಾವತಮ್ಮ. ಜಾಹಿರ್. ಮುನಿರಾಜು. ಮುನೇಗೌಡ. ಹರಿನಾಥ್ ಯಾದವ್. ಮುನಿನಾರಾಯಣಪ್ಪ. ಹಾಗೂ ಉಪಸ್ಥಿತರಿದ್ದರು