
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.25: ನಮಗೆ ಕಾಂಗ್ರೆಸ್ ಪಕ್ಷದೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆಯಾದರೂ, ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವ ಸಂಸದೀಯ ಸಚಿವಾಲಯದ ನಡೆಯು ಅತ್ಯಂತ ಅಪ್ರಜಾತಾಂತ್ರಿಕ, ಅನಾಗರಿಕ ಮತ್ತು ಸೇಡಿನ ಕ್ರಮವಾಗಿದ್ದು ಅದನ್ನು ಖಂಡಿಸುತ್ತೇವೆಂದು ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರವಾಶ್ ಘೋಷ್ ಪತ್ರಿಕಾ ಹೇಳಿಕೆ ನೀಡಿದ್ದಾರೆ
ಸಂಸದೀಯ ಸಚಿವಾಲಯದ ಈ ತರಾತುರಿಯನ್ನು ನೋಡಿದರೆ, ಅದು ಸೂರತ್ ನ್ಯಾಯಾಲಯದ ತೀರ್ಪಿಗೆ ಕಾಯುತ್ತಿದ್ದಂತೆ ಕಾಣುತ್ತದೆ ಎಂದಿದ್ದಾರೆ.