ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ- ಖಂಡನೆ

ಲಿಂಗಸೂಗೂರ,ಮಾ.೨೪- ನೀರವ್ ಮೋದಿ, ಲಲಿತ್ ಮೋದಿ, ಈ ತರಹದ ಮೊದಿಗಳು ಭಾತರದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುತ್ತಾರೆಂದು ಸತ್ಯ ಹೇಳಿದ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮುಕದ್ದಮೆ ಹಾಕಿ ಸತ್ಯ ಹೇಳುವವರ ವಿರುದ್ಧ ಇಂತಹ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆಂದು ಪುರಸಭೆ ಸದಸ್ಯ ಪ್ರಮೋದ ಕುಮಾರ ಕುಲಕರ್ಣಿ ಆಗ್ರಹಿಸಿದರು.
ನೀರವ್ ಮೋದಿ ರೂ. ೧೪,೦೦೦ ಕೋಟಿ ಭ್ರಷ್ಟಚಾರ, ಮೆಹಲ್ ಚೌಕ್ಸಿ ರೂ. ೧೩,೫೦೦ ಕೋಟಿ ಭ್ರಷ್ಟಚಾರ ಇಂತಹ ಗಂಭೀರ ವಿಷಯದ ಮೇಲೆ ಸಂಸತ್ತು ಭವನದಲ್ಲಿ ಮಾತನಾಡಲು ಹೋದರೆ ಮೈಕ್‌ಗಳನ್ನು ಆಫ್ ಮಾಡುವುದರ ಮೂಲಕ ಸತ್ಯವನ್ನು ಮುಚ್ಚುತ್ತಿದ್ದಾರೆ. ಕನ್ಯಾ ಕುಮಾರಿಯಿಂದ ಕಾಶ್ಮೀರ ವರೆಗೆ ಸುಮಾರು ೪೦೦೦ ಕಿ.ಮೀ. ಪಾದಯಾತ್ರೆ ಮುಖಾಂತರ, ಭಾರತ್ ಜೋಡ ಅಭಿಯಾನದಿಂದ ಅವರ ಜನಪ್ರೀಯತೆ ದುಪ್ಪಟ್ಟು ಆಗಿರುವುದರಿಂದ ಹತಾಷರಾಗಿ ಬಿಜೆಪಿ ಯವರು ಇಂತಹ ಕೃತ್ಯದಲ್ಲಿ ತೊಡಗಿರುವುದು ಪ್ರಜಾ ಪ್ರಭುತ್ವದ ಕಗ್ಗೋಲೆ ಆಗಿರುತ್ತದೆ.
ಮುಂದಿನ ದಿನಗಳಲ್ಲಿ ಈ ಅನರ್ಹ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಅನರ್ಹ ತೀರ್ಪು ವಜಾಗೊಳುಸುತ್ತಾರೆ ಎಂದು ವಿಶ್ವಾಸ ಹೊಂದಿರುತ್ತೇವೆಂದು ಈ ಮೂಲಕ ಪತ್ರಿಕೆ ಪ್ರಕಟಣೆ ತಿಳಿಸಿದ್ದಾರೆ.