ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೨; ಕೇಂದ್ರ ಬಿಜೆಪಿ ಸರ್ಕಾರ ನ್ಯಾಯಾಂಗ ವ್ಯವಸ್ಥೆ ಬಳಸಿಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಜಿಲ್ಲಾಧ್ಯಕ್ಷರಾದ ಎಚ್ ಬಿ ಮಂಜಪ್ಪ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಎಚ್ ಬಿ ಮಂಜಪ್ಪ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾಂಗ್ರೆಸ್ ನ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುವುದರ ಜೊತೆಗೆ ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದು ರಾಜಕೀಯ ಪ್ರಭಾವದಿಂದ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವದಿಂದ ಕೆಳಗಿಳಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಾ ಬರುತ್ತಿದ್ದು. ಇಂದು ದೇಶಾದ್ಯಂತ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿಗೆ ಬೆಂಬಲ ನೀಡುತ್ತಿದ್ದು ಬಿಜೆಪಿ ಸರ್ಕಾರ ಹಾಗೂ ಮೋದಿ ಯ ವಿರುದ್ಧ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ದಾವಣಗೆರೆಯಲ್ಲಿಯೂ ಸಹ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿಯವರು ಹೇಳುವುದು ಒಂದು ಮಾಡುವುದು ಒಂದು ಎಂಬಂತಾಗಿದೆ ದೇಶದ ಜನತೆಗೆ ಸಾಕಷ್ಟು ಆಶ್ವಾಸನೆಯನ್ನು ನೀಡಿದ್ದು ನಮಗೆ 100 ದಿನಗಳ ಕಾಲ ಅವಕಾಶವನ್ನು ನೀಡಿದರೆ ದೇಶದ ಚಿತ್ರಣವನ್ನೇ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು ಆದರೆ ಯಾವುದೇ ರೀತಿಯಾದಂತಹ ಬದಲಾವಣೆಯಾಗಿಲ್ಲ ದೇಶದಲ್ಲಿರುವಂತಹ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲಾಗಿಲ್ಲ ವಿದೇಶದಲ್ಲಿ ಇರುವಂತಹ ಕಪ್ಪು ಹಣವನ್ನು ತಂದು ದೇಶದಲ್ಲಿರುವಂತ ಪ್ರತಿಯೊಬ್ಬ ಪ್ರಜೆಗೆ ಹಣವನ್ನು ಸಂದಾಯ ಮಾಡುತ್ತೇವೆ ಎಂದು ತಿಳಿಸಿದರು. ಬಿಜೆಪಿ ಸರ್ಕಾರವು ನೀಡಿದಂತಹ ಯಾವುದೇ ಆಶ್ವಾಸನೆಯನ್ನು ಈಡೇರಿಸಿಲ್ಲ . ರಾಹುಲ್ ಗಾಂಧಿ ಮೇಲಿರುವ ದ್ವೇಷ ರಾಜಕಾರಣವನ್ನು ಬಿಡಬೇಕು ಎಂದರು.ಮೌನ ಪ್ರತಿಭಟನೆಯಲ್ಲಿ ದಾವಣಗೆರೆಯ ಪಾಲಿಕೆಯ ಮೇಯರ್ ವಿನಾಯಕ್ ಪೈಲ್ವಾನ್. ಕೆಜಿ ಶಿವಕುಮಾರ್. ಮುದ್ದೇಗೌಡರ ಗಿರೀಶ್. ಅಯೂಬ್ ಪೈಲ್ವಾನ್. ನಾಗರಾಜ್. ಇನ್ನು ಮುಂತಾದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.