ರಾಹುಲ್ ಗಾಂಧಿ ಎಲ್ಲಿ ಪ್ರಚಾರ ಮಾಡುತ್ತಾರೆ ಅಲ್ಲಿ ಬಿಜೆಪಿಗೆ ಗೆಲುವು: ಶ್ರೀರಾಮುಲು


ಸಂಜೆವಾಣಿ ವಾರ್ತೆ
ಗಂಗಾವತಿ, ಏ.29:  ಕಾಂಗ್ರೆಸ್ ಇಂಜಿನ್ ಕೆಟ್ಟು ಹೊಗಿದ್ದು ಚುನಾವಣೆ ನಂತರ ಕಾಂಗ್ರೆಸ್ ಶಾಶ್ವತ ಗುಜಿರಿಗೆ ಹೋಗುತ್ತೆ. ರಾಹುಲ್ ಗಾಂಧಿ ಪ್ರಿಯಾಂಕ್ ಗಾಂಧಿ ಎಲ್ಲಿ ಪ್ರಚಾರ ಮಾಡುತ್ತಾರೆ ಅಲ್ಲಿ ಬಿಜೆಪಿ ಜಯಭೇರಿಯಾಗಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು. ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು‌. ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ ಅದು ನಮಗೆ ಶುಭವಾಗಲಿದೆ. ಯಾಕಂದ್ರೆ ಕಾಂಗ್ರೆಸ್ ಸರ್ಕಸ್ ಕಂಪನಿಯಾಗಿದೆ. ನಾಟಕ ಕಂಪನಿಯಲ್ಲಿ ಜೋಕರ್ ಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಈ ಕಂಪನಿಯನ್ನು ಬಂದ್ ಮಾಡುತ್ತಾರೆ. ಮೋದಿಯವರನ್ನು ಬೈಯುವುದೇ ಒಂದು ಕಾಯಕನ್ನಾಗಿ ಮಾಡಿಕೊಂಡಿದ್ದಾರೆ, ಅವರಿಗೆ ಬೈದರೆ ನಾವು ಬೆಳೆಯುತ್ತವೆ ಹಾಗೂ ಗುರುತಿಸುತ್ತಾರೆ ಎಂದು ತಿಳಿದುಕೊಂಡಿದ್ದಾರೆ ಎಂದರು. ಸ್ನೇಹಕ್ಕಿಂತ ಪಾರ್ಟಿ ಮುಖ್ಯವಾಗಿದೆ.ಗಂಗಾವತಿ ಯಲ್ಲಿ ಬಿಜೆಪಿ ಅಭ್ಯರ್ಥಿಪರ ಪ್ರಚಾರ ಮಾಡುತ್ತೆನೆ‌ ಎಂದರು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯೋಗಿ, ಅಮೀತ್ ಶಾ ಅವರಿಂದ ಪ್ರಚಾರ ಕೈಗೊಂಡು 140 ಸ್ಥಾನ ಗೆಲುವು ಸಾಧಿಸುತ್ತೆವೆ ಎಂದರು. ಈ ವೇಳೆ ಶಾಸಕ ಪರಣ್ಣ ಮುನವಳ್ಳಿ, ದೆಹಲಿ ಶಾಸಕ, ಪ್ರಮೋದ್, ಸಂತೋಷ ಕೆಲೋಜಿ, ಮಾಯತ್ ನಾಯಕ, ಸಿಂಗನಾಳ ವಿರುಪಾಕ್ಷಪ್ಪ, ವೀರಭದ್ರಪ್ಪ ನಾಯಕ ಸೇರಿದಂತೆ ಅನೇಕರು ಇದ್ದರು.