
ಕೋಲಾರ,ಏ,೩- ರಾಹುಲ್ ಗಾಂಧಿ ಅವರನ್ನು ಬಿಜೆಪಿ ಲೋಕಸಭೆಯಿಂದ ಅನರ್ಹ ಮಾಡಿ ಪ್ರಜಾಪ್ರಭುತ್ವ ಕೊಲೆ ಮಾಡಿದೆ ನೀರವ್ ಮೋದಿ, ಲಲಿತ್ ಮೋದಿ,ಲಕ್ಷ ಲಕ್ಷ ಕೋಟಿ ತೆಗೆದುಕೊಂಡು ಎಲ್ಲಾರೂ ಓಡಿ ಹೋದರು ಅದರೆ ಹಮರಾ ದೇಶಕಾ ಚೌಕಿದಾರ್ ಎಂದು ಸ್ವಯಂ ಘೋಷಿತ ಮೋದಿಯವರು ದೇಶದ ಸಂಪತ್ತು ಉಳಿಸಲು ಮುಂದಾಗದೆ ದೆಹಲಿ ಕುಳಿತು ನೋಡುತ್ತಿದ್ದರು ಇದರ ಬಗ್ಗೆ ಮಾತನಾಡುವುದು, ರಾಹುಲ್ ಗಾಂಧಿ ಅವರು ಪ್ರಶ್ನಿಸಿದ್ದು ತಪ್ಪಾ ? ಎಂದು ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಸುರ್ಜಿತ್‌ವಾಲ ಪ್ರಶ್ನಿಸಿದರು.
ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ಕೆ.ಪಿ.ಸಿ.ಸಿ.ವತಿಯಿಂದ ಆಯೋಜಿಸಿದ್ದ ರಾಹುಲ್ ಗಾಂಧಿಯವರು ಏ ೯ರಂದು ಅಗಮಿಸುವ ಸತ್ಯ ಮೇವಾ ಜಯತೆ ಹೋರಾಟ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ಕಳ್ಳನನ್ನು ಕಳ್ಳ ಎಂದು ಕರೆದರೆ ತಪ್ಪಾ ?
ಕಳ್ಳ ಎಂದರೆ ನೀವೇಕೆ ಭುಜ ಮುಟ್ಟಿ ಕೊಳ್ಳುತ್ತಿದ್ದೀರಿ ಅದಾನಿಗೂ ಮೋದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಕ್ಕೆ ನೀವೇಕೆ ಭೀತಿ ಗೊಂಡು ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದೀರಿ ಎಂದರು,
ನಮ್ಮ ದೇಶದ ಬ್ಯಾಂಕ್‌ಗಳಿಂದ ತೆಗೆದುಕೊಂಡಿರುವ ಹಣ ಯಾರದು ? ನಮ್ಮೆಲ್ಲರದು ಅಲ್ಲವೇ ಇದರ ಬಗ್ಗೆ ಪ್ರಶ್ನೆ ಮಾಡುವುದು ಬೇಡವಾ ? ಎಂದು ಪ್ರಶ್ನಿಸಿದ ದೇಶ ಬಿಟ್ಟು ಓಡಿ ಹೋದಾಗ ನಮ್ಮ ದೇಶದ ಚೌಕಿದಾರ ಏನು ಮಾಡುತ್ತಿದ್ದರು ? ಎಂದು ಪ್ರಶ್ನಿಸಿದರು
ರಾಹುಲ್ ಗಾಂಧಿ ಇದರ ಬಗ್ಗೆ ಕೋಲಾರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿ ಮಾತನಾಡಿರುವುದನ್ನೆ ನೆಪ ಮಾಡಿ ಇದೊಂದು ದೊಡ್ಡ ಅಪರಾಧ ಎಂಬಂತೆ ರಾಹುಲ್ ಗಾಂಧಿ ಅವರ ಮೇಲೆ ಗುಜರಾತ್ ನ್ಯಾಯಲಯದಲ್ಲಿ ಪ್ರಕರಣ ದಾಖಲು ಮಾಡಿ ೨ ವರ್ಷ ಶಿಕ್ಷೆ ಘೋಷಿಸಿ ಸಂಸತ್ ಸ್ಥಾನ ಅನರ್ಹ ಮಾಡಿದ್ದಾರೆ ಇದು ಯಾವ ನ್ಯಾಯ ? ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಇದರ ಬಗ್ಗೆ ಹೋರಾಟ ಆರಂಭಿಸಿದ್ದಾರೆ.ಇದಕ್ಕೆ ನಾವೆಲ್ಲಾ ಕೈ ಜೋಡಿಸಬೇಕಾಗಿದೆ.ಇದಕ್ಕೆ ನಾವೆಲ್ಲಾ ಕೈ ಜೋಡಿಸದಿದ್ದರೆ ಭಾರತ ಮತ್ತು ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಟಿಕೆಟ್ ಘೋಷಿಸ ಬೇಕೆಂದು ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು ನಿಮ್ಮ ಭಾವನೆಗಳು ನಮಗೆ ಅರ್ಥವಾಗುತ್ತೆ. ಪಕ್ಷ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೆ ಕಾರ್ಯಕರ್ತರು ಸಮಾಧಾನಗೊಳ್ಳಬೇಕು ಎಂದು ಮನವಿ ಮಾಡಿದರು.
ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಂ ಆಹಮದ್ ಮಾತನಾಡಿ ಏ,೯ರಂದು ಸತ್ಯಮೇವಾ ಜಯತೆ ಸಮಾವೇಶದ ಬದಲಾಗಿ ಜಯಭಾರತ ಬೃಹತ್ ಪ್ರತಿಭಟನಾ ಸಮವೇಶವನ್ನಾಗಿ ಪರಿವರ್ತಿಸಲಾಗಿದೆ ಎಂದರು.
ರಾಜ್ಯದಲ್ಲಿ ಶೇ ೪೦ ರಷ್ಟು ಸರ್ಕಾರಕ್ಕೆ ಕೇಂದ್ರ ಸರ್ಕಾರವು ಶ್ರೀರಕ್ಷೆಯಾಗಿ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ದಿಗಳು ಇದೇನಾ ? ನಾಚಿಕೆಯಾಗುವುದಿಲ್ಲ ಎಂದು ಪ್ರಶ್ನೆಸಿದರು,
ನರೇಂದ್ರ ಮೋಧಿ ಮತ್ತು ಅಮಿತ್ ಷಾ ರಾಜ್ಯಕ್ಕೆ ೧೦೦ ಸಾರಿ ಭೇಟಿ ನೀಡಿದರೂ ಕರ್ನಾಟಕದಲ್ಲಿ ಮುಂದೆ ಕಾಂಗ್ರೇಸ್ ಪಕ್ಷವೆ ಅಧಿಕಾರಕ್ಕೆ ಬರುವುದು, ಈ ಸರ್ಕಾರದ ಆಯುಸ್ಸು ಇನ್ನು ೧೦೦ ದಿನಗಳು ಮಾತ್ರ ಎಂದ ಅವರು ಬಿಜೆಪಿಯವರು ಇಂದಿರಾಗಾಂಧಿಯವರನ್ನು, ರಾಜೀವ್ ಗಾಂಧಿಯವರನ್ನು ಟೀಕೆ ಮಾಡಿದಾಗ ನಾವು ಇದೇ ರೀತಿ ಪ್ರಕರಣಗಳನ್ನು ದಾಖಲು ಮಾಡಿದೇವಾ? ಅಧಿಕಾರಕ್ಕಾಗಿ ನಾವು ಭಾರತವನ್ನು ಜಾತಿಯತೆಗೆ ದೊಡಲಿಲ್ಲ.ಸರ್ವಾಜನಾಂಗದ ಪರವಾಗಿ ಹೋರಾಟವನ್ನು ಮಾಡಿದೇವು ಸಮಾಜದ ಕಟ್ಟ ಕಡೆಯ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿದೇವು ಎಂದರು.