
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.8; ಗುಜರಾತ್ ನ ಸೂರತ್ ನ್ಯಾಯಾಲಯವು ರಾಹುಲಗಾಂಧಿ ಅವರಿಗೆ ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳಲ್ಲಿ ಅವರ ಲೋಕಸಭಾ ಸದಸ್ಯವನ್ನು ರದ್ದು ಮಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರವರು ತೀರ್ಮಾನ ಕೈಗೊಂಡಿದ್ದರು.ಇದೀಗ ಸುಪ್ರೀಂಕೋರ್ಟ್ ಶಿಕ್ಷೆಗೆ ಮಧ್ಯಂತರ ತಡೆ ಆಜ್ಞೆ ನೀಡಿ ಆದೇಶಿಸಿದೆ. ಈಗ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವದ ಮರುಸ್ಥಾಪನೆಗೂ ಸ್ಪೀಕರ್ ಅದೇ ಆತುರ ತೋರಲಿ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿಯವರ ಪ್ರಕರಣದಲ್ಲಿ ಮಧ್ಯಾಂತರ ತಡೆ ನೀಡಿದ ಸುಪ್ರೀಂಕೋರ್ಟ್ ಒಬ್ಬ ಸಂಸದ ಅನಹ್ರ ಗೊಂಡರೆ ಅದು ಕೇವಲ ವ್ಯಕ್ತಿಯ ನಷ್ಟವಲ್ಲ. ಸಂಸದನನ್ನು ಆಯ್ಕೆ ಮಾಡಿದ ಇಡೀ ಕ್ಷೇತ್ರದ ಜನತೆಗೇ ಆಗುವ ನಷ್ಟವಾಗಿದೆ ಎಂದು ನ್ಯಾಯಲಯ ಸ್ಪಷ್ಟಪಡಿಸಿದೆ ಹಾಗಾಗಿ ಜನರ ಆಯ್ಕೆಯ ಹಕ್ಕಿನ ರಕ್ಷಣೆ ಆಗಬೇಕೆಂದು ಅಭಿಪ್ರಾಯ ಪಟ್ಟಿದೆ. ಆದುದರಿಂದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರವರು ಈ ಕೊಡಲೇ ರಾಹುಲ್ ಗಾಂಧಿಯವರಿಗೆ ಲೋಕಸಭಾ ಸದಸ್ಯತ್ವವನ್ನು ಮರು ಸ್ಥಾಪಿಸಲಿ ಎಂದು ಡಿ. ಬಸವರಾಜ ಸ್ಪೀಕರ್ ಅವರನ್ನು ಆಗ್ರಹಿಸಿದ್ದಾರೆ ಸುಳ್ಳು ಸೋತಿದೆ ಸತ್ಯ ಗೆದ್ದಿದೆ. ದ್ವೇಷ ಸೋತಿದೆ ಪ್ರೀತಿ ಗೆದ್ದಿದೆ ಎಂದು ತಿಳಿಸಿದ್ದಾರೆ.