ರಾಹುಲ್ ಎಂಪಿ ಸದಸ್ಯತ್ವ ರದ್ದು
 ಕಾಂಗ್ರೆಸ್ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.26: ನಗರದ ಮರ್ಚೆಡ್ ರೆಸಿಡೆನ್ಸಿ ಯಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಘಟಕದಿಂದ  ಕಾಂಗ್ರೆಸ್ ಪಕ್ಷದ  ‘ಯುವ ನಿಧಿ’ 4ನೇ ಗ್ಯಾರಂಟಿ ಕಾರ್ಡ್ ನ ಬಿಡುಗಡೆ ಮಾಡಲಾಯ್ತು.
ನಂತರ ರಾಹುಲ್ ಗಾಂಧಿಯ  ಸಂಸತ್ ಸದಸ್ಯತ್ವದಿಂದ ಅಮಾನತುಗೊಳಿಸಿದ  ಕೇಂದ್ರ ಸರ್ಕಾರದ ವಿರುದ್ದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಲಾಯ್ತು.
ಪಾಲಿಕೆಯ ಸಭಾ ನಾಯಕ ಪಿ. ಗಾದೆಪ್ಪ, ಮುಖಂಡರುಗಳಾದ  ಜೆ. ಎಸ್ ಆಂಜನೇಯಲು,  ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ರಾವೂರ್ ಸುನೀಲ್  ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು‌