ರಾಹುಲ್ ಅನರ್ಹತೆ, ಶಿಕ್ಷೆ ವಿಲಕ್ಷಣ

ನವದೆಹಲಿ,ಮಾ.೨೪- ಪ್ರಧಾನಿ ನರೇಂದ್ರ ಮೋದಿ ಉಪನಾಮದ ಟೀಕೆಯ ಹಿನ್ನೆಲೆಯಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸ್ವಯಂಪ್ರೇರಿತವಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡರೆ, ಶಿಕ್ಷೆಯೇ “ವಿಲಕ್ಷಣ” ಎಂದು ಕಾನೂನು ದಿಗ್ಗಜ ಮತ್ತು ಮಾಜಿ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ನ್ಯಾಯಾಲಯ ಶಿಕ್ಷೆಯನ್ನು ಅಮಾನತುಗೊಳಿಸಿದರೆ ಸಾಕಾಗುವುದಿಲ್ಲ. ಅಮಾನತು ಅಥವಾ ಶಿಕ್ಷೆಗೆ ತಡೆ ನೀಡಬೇಕು. ದೋಷಾರೋಪಣೆಗೆ ತಡೆ ನೀಡಿದರೆ ಮಾತ್ರ ರಾಹುಲ್ ಗಾಂಧಿ ಸಂಸತ್ ಸದಸ್ಯರಾಗಿ ಉಳಿಯಬಹುದು” ಇಲ್ಲವೆ ಅವರ ಸಂಸದ ಸ್ಥಾನ ರದ್ದುಗೊಳ್ಳಲಿದೆ ಎಂದಿದ್ಧಾರೆ. ಸೂರತ್ ನ್ಯಾಯಾಲಯದ ತೀರ್ಪನ್ನು “ವಿಲಕ್ಷಣ”ವಾದುದು,”ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗೆ, ಅವರನ್ನು ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸುವುದು ನ್ಯಾಯಸಮ್ಮತವಲ್ಲ. ಎಂದು ಕಳೆದ ವರ್ಷ ಮೇನಲ್ಲಿ ಹೆಚ್ಚಿನ ಕಹಿಗಳ ಕಾಂಗ್ರೆಸ್ ತೊರೆದು ಹೊಸ ವೇದಿಕೆ ಪ್ರಾರಂಭಿಸಿದ ಕಪಿಲ್ ಸಿಬಲ್ ಸಿಬಲ್ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆ ಜಾತಿ ಮತ್ತು ಸಮುದಾಯಕ್ಕೆ ವಿರುದ್ಧವಾಗಿದೆ ಎಂಬ ಬಿಜೆಪಿ ನಿಲುವಿನ ಬಗ್ಗೆ ಕೇಳಿದಾಗ, “ಯಾವ ಸಮುದಾಯ ಅದು ವ್ಯಕ್ತಿಯ ವಿರುದ್ಧ. ಅವರು ಏನು ಬೇಕಾದರೂ ಹೇಳಬಹುದು, ಆದರೆ ನಾನು ನಿಮಗೆ ಹೇಳುತ್ತಿದ್ದೇನೆ ಅದು ವ್ಯಕ್ತಿಯ ವಿರುದ್ಧವಾಗಿತ್ತು” ಎಂದು ತಿರುಗೇಟು ನೀಡಿದ್ದಾರೆ.
ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ “ಸುಪ್ರೀಂಕೋರ್ಟ್ ಎಚ್ಚರಿಸಿದೆ ಮತ್ತು ಸಲಹೆ ನೀಡಿದೆ ಎನ್ನುವ ವಿಷಯ ಉಲ್ಲೇಖಿಸಿದೆ. ಎನ್ನುವ ಕುರಿತು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ಯಾವುದೇ ಅಪರಾಧದಲ್ಲಿ ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದರೆ ಆ ಸ್ಥಾನ ಖಾಲಿ ಇರುತ್ತದೆ ಎಂದು ಕಾನೂನು ಹೇಳುತ್ತದೆ.”ಕಾನೂನಿಗೆ ಅದು ಅಗತ್ಯವಾಗಿರುತ್ತದೆ ಮತ್ತು ಸ್ವಾಭಾವಿಕವಾಗಿ ಸ್ಪೀಕರ್ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ ಎಂದಿದ್ದಾರೆ. ೨೦೧೩ ರಲ್ಲಿ ಲಿಲಿ ಥಾಮಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, “ಯಾವುದೇ ಸಂಸದ, ಶಾಸಕ, ವಿಧಾನಪರಿಷತ್ ಸದಸ್ಯ ಅಪರಾಧದಲ್ಲಿ ತಪ್ಪಿತಸ್ಥ ಮತ್ತು ಕನಿಷ್ಠ ೨ ವರ್ಷಗಳ ಜೈಲು ಶಿಕ್ಷೆ ಪಡೆದರೆ ತಕ್ಷಣವೇ ಜಾರಿಗೆ ಬರುವಂತೆ ಸದನದ ಸದಸ್ಯತ್ವ ಕಳೆದುಕೊಳ್ಳುತ್ತಾರೆ” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ನ್ಯಾಯಾಲಯ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ ೮(೪) ಅನ್ನು ರದ್ದುಗೊಳಿಸಿದೆ, ಇದು ಚುನಾಯಿತ ಪ್ರತಿನಿಧಿಗಳು ತಮ್ಮ ಅಪರಾಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳು ಅವಕಾಶ ಮಾಡಿಕೊಟ್ಟಿತು ಮತ್ತು ಅದನ್ನು “ಅಸಂವಿಧಾನಿಕ” ಎಂದು ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಗುಜರಾತ್‌ನ ನ್ಯಾಯಾಲಯ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಅವರಿಗೆ ಜಾಮೀನು ಸಿಕ್ಕಿದ್ದು, ಮೇಲ್ಮನವಿ ಸಲ್ಲಿಸಲು ೩೦ ದಿನಗಳ ಕಾಲಾವಕಾಶ ನೀಡಲಾಗಿದೆ.