ರಾಹುಲಗಾಂಧಿ ಅವಹೇಳನ ಖಂಡಿಸಿ ಪ್ರತಿಭಟನೆ

ಕಲಬುರಗಿ,ಅ 7: ಕಾಂಗ್ರೆಸ್ ಪಕ್ಷದ ನಾಯಕ ರಾಹುಲಗಾಂಧಿ ಅವರನ್ನು ರಾವಣನಿಗೆ ಹೋಲಿಸಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಪೆÇೀಸ್ಟರ್ ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ, ಇಂದಿರಾ ಸ್ಮಾರಕ ಭವನದ ಹತ್ತಿರವಿರುವ ಬಾಬು ಜಗಜೀವನರಾಂ ಪುತ್ಥಳಿ ಬಳಿ ಪ್ರತಿಭಟನೆ ನಡೆಸಲಾಯಿತು .
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ,ಶಾಸಕ ಅಲ್ಲಮಪ್ರಭು ಪಾಟೀಲ , ಮುಖಂಡರಾದ ರಾಜಗೋಪಾಲರೆಡ್ಡಿ,ರೇವೂನಾಯಕ ಬೆಳಮಗಿ,ನೀಲಕಂಠರಾವ ಮೂಲಗೆ,ಲಾಲ್ ಅಹ್ಮದ್ ಬಾಂಬೆಸೇಠ್,ಶಿವಾನಂದ ಹೊನಗುಂಟಿ,ಈರಣ್ಣ ಝಳಕಿ,ಅರುಣಭರಣಿ, ಹನುಮಂತ ವಂಟಿ,ಲತಾ ರಾಠೋಡ,ಸವಿತಾ ವಂಟಿ,ವಾಣಿಶ್ರೀ ಸಗರಕರ್ ಅವರು ಸೇರಿದಂತೆ ಹಲವರು ಪಾಲ್ಗೊಂಡರು.