ರಾಸುಗಳ ಹಾಲು ಕರೆಯುವ ಸ್ಪರ್ಧೆ

ಹುಳಿಯಾರು, ಜು. ೧೬- ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಶು ಇಲಾಖೆ ವತಿಯಿಂದ ಕೆಂಕೆರೆ ಗ್ರಾಮದಲ್ಲಿ ಹಾಲು ಕರೆಯುವ ಸ್ಪರ್ಧೆ ಹಾಗೂ ಕರುಗಳ ಪ್ರದರ್ಶನ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಹಾಲು ಕರೆಯುವ ಸ್ಪರ್ಧೆಯಲ್ಲಿ ಜಯಮ್ಮ ಪ್ರಥಮ ಬಹುಮಾನ ಪಡೆದರೆ, ಚನ್ನಬಸವಯ್ಯ ದ್ವಿತೀಯ ಬಹುಮಾನ ಪಡೆದರು. ಕೆ.ಸಿ.ಮಧು ತೃತೀಯ ಬಹುಮಾನ ಪಡೆದರು. ಕೆ.ಸಿ.ಶಿವಕುಮಾರ್, ಬಸವರಾಜು, ಕೆ.ಎಂ.ಈಶ್ವರಯ್ಯ, ಕೆ.ಪಿ.ಯೋಗೀಶ್, ಟಿ.ನಟರಾಜು ಸಮಾಧಾನಕರ ಬಹುಮಾನ ಪಡೆದರು.
೩ ತಿಂಗಳೊಳಗಿನ ಕರುಗಳ ಪ್ರದರ್ಶನದಲ್ಲಿ ಬಸವರಾಜು (ಪ್ರ), ಜಯಮ್ಮ (ದ್ವಿ), ಆರ್.ಉಮೇಶ್ (ತೃ), ಮಂಜುನಾಥ್ ಮತ್ತು ಆರ್.ಉಮೇಶ್ ಸಮಾಧನಕರ ಬಹುಮಾನ ಪಡೆದರು.
೩ ರಿಂದ ೬ ತಿಂಗಳೊಳಗಿನ ಕರುಗಳ ಪ್ರದರ್ಶನದಲ್ಲಿ ನವೀನ್ (ಪ್ರ), ರಾಜಶೇಖರ್ (ದ್ವಿ), ಜಯಣ್ಣ (ತೃ), ರವಿ ಮತ್ತು ಗಂಗಾಧರಯ್ಯ ಸಮಾಧಾನಕರ ಬಹುಮಾನ ಪಡೆದರು.
೬ ರಿಂದ ೧ ವರ್ಷ ಒಳಗಿನ ಕರುಗಳ ಪ್ರದರ್ಶನದಲ್ಲಿ ಎಚ್.ಎಸ್.ನಾಗರಾಜು (ಪ್ರ), ಕೊಟ್ರೇಶ್ (ದ್ವಿ), ಭದ್ರೇಶ್ (ತೃ), ಮರುಗಳಯ್ಯ ಮತ್ತು ರೇಣುಕಮ್ಮ ಸಮಾಧಾನಕರ ಬಹುಮಾನ ಪಡೆದರು.
ಈ ಸಂದರ್ಭದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ, ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ, ಕೆಂಕೆರೆ ಗ್ರಾ.ಪಂ. ಅಧ್ಯಕ್ಷ ಕೆ.ಸಿ.ವಿಕಾಸ್, ತಾ.ಪಂ. ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಪಶು ಇಲಾಖೆಯ ಅಪರ ನಿರ್ದೇಶಕ ಡಾ.ಎಚ್.ಎಸ್.ಜಯಣ್ಣ, ಉಪನಿರ್ದೆಶಕ ಡಾ.ಜಿ.ವಿ.ಜಯಣ್ಣ, ತಾಲ್ಲೂಕು ಸಹಾಯಕ ನಿರ್ದೇಶಕ ನಾಗಭೂಷಣ್ ಉಪಸ್ಥಿತರಿದ್ದರು.