ರಾಸುಗಳ ಸಂತತಿ ಹೆಚ್ಚಳಕ್ಕೆ ಜವಾಬ್ದಾರಿ ಅಗತ್ಯ

ಮಾಲೂರು, ಮಾ ೨೭- ರಾಸುಗಳಿಗೆ ಕೃತಕ ಗರ್ಭದಾರಣೆ ಮಾಡುವ ಕಾರ್ಯಕರ್ತರು ಹೊಸ ತಂತ್ರಾಂಶ ಹಾಗೂ ನೂತನ ಆವಿಷ್ಕಾರಗಳನ್ನು ಬಳಸಿಕೊಂಡು ರಾಸುಗಳ ಸಂತತಿಯನ್ನು ಹೆಚ್ಚಿಸಲು ಹೆಚ್ಚಿನ ಜವಾಭ್ದಾರಿ ವಹಿಸುವಂತೆ ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.
ಪಟ್ಟಣದ ಶಿಬಿರ ಕಚೇರಿಯ ಸಭಾಂಗಣದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೃತಕ ಗರ್ಭಧಾರ ಕಾರ್ಯಕರ್ತರ ಒಂದು ದಿನದ ತಾಂತ್ರಿಕ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಅವಿಭಜಿತ ಜಿಲ್ಲೆಗಳಲ್ಲಿ ರಾಸುಗಳಿಗೆ ಕೃತಕ ಗರ್ಭದಾರಣೆ ಮಾಡುವ ಕಾರ್ಯಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಒಕ್ಕೂಟವು ಸಹ ನಿಮ್ಮ ಬೇಡಿಕೆಗಳಿಗೆ ಸ್ವಂಧಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಎರಡು ಜಿಲ್ಲೆಗಳಲ್ಲಿಯೂ ಹೈನುಗಾರಿಕೆಯನ್ನು ಹೆಚ್ಚಾಗಿ ರೈತರು ಅವಲಂಬಿಸಿಕೊಂಡಿದ್ದಾರೆ. ಲಕ್ಷಾಂತರ ರೂಗಳು ವ್ಯಯಿಸಿ ಹಸುಗಳನ್ನು ತಂದು ಸಾಕಾಣಿಕೆ ಮಾಡುತ್ತಾರೆ. ಹಸುಗಳ ಆರೋಗ್ಯವನ್ನು ಕಾಪಾಡಲು ಹಾಲು ಉತ್ಪಾದಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಕಾರ್ಯಕಾರಿ ಮಂಡಳಿ, ಅಧಿಕಾರಿಗಳು, ನೌಕರರ ಪರಿಶ್ರಮದಿಂದ ಒಕ್ಕೂಟವು ರಾಜ್ಯದಲ್ಲಿಯೇ ಹಾಲು ಉತ್ಪದಾನೆ ಹಾಗೂ ಗುಣಮಟ್ಟದಲ್ಲಿ ೨ನೇ ಸ್ಥಾನವನ್ನು ಪಡೆದಿದೆ.
ಹಾಲು ಉತ್ಪಾದಕರ ಕೇಂದ್ರಗಳು ಹಾಗೂ ಒಕ್ಕೂಟದ ಲಾಭಾಂಶದ ಹಣದಲ್ಲಿ ಎರಡು ಜಿಲ್ಲೆಗಳ ಹಾಲು ಉತ್ಪಾದಕರ ಕೇಂದ್ರಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ೫ ಲಕ್ಷ ಆರ್ಥಿಕ ಸಹಕಾರ ರಾಸುಗಳಿಗೆ ೭೦ ಸಾವಿರ ರೂಗಳ ಜೀವ ವಿಮೆ ಹೆಚ್ಚಳ ಸೇರಿದಂತೆ ಹಲವು ರೀತಿಯ ಸವಲತ್ತುಗಳನ್ನು ಒದಗಿಸಲಾಗಿದೆ. ರಾಸುಗಳ ಸಂತತಿಯನ್ನು ಹೆಚ್ಚಿಸುವ ಸಲುವಾಗಿ ಯುನಾನಿ ನೂತನ ತಂತ್ರಾಂಶವನ್ನು ಅಳವಡಿಸಿಕೊಂಡಿದ್ದು, ಈ ತಂತ್ರಾಂಶದ ಮೂಲಕ ಹೊಸ ಹೊಸ ತಳಿಗಳ ವಿಧಾನಗಳನ್ನು ಬಳಸಿಕೊಂಡು ರಾಸುಗಳಿಗೆ ಕಾರ್ಯಕರ್ತರು ಕೃತಕ ಗರ್ಭದಾರಣೆ ಮಾಡಬೇಕು. ಕಾರ್ಯಕರ್ತರು ಕೆಲವು ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದ್ದು, ೨೫ ರಿಂದ ೩೫ ರೂಗಳಷ್ಟು ಇನ್ಸೆಂಟಿವ್ ಹೆಚ್ಚಿಸಲುಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಒಕ್ಕೂಟದ ನೌಕರರು ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ಕೋಚಿಮುಲ್ ವ್ಯವಸ್ಥಾಪಕ ಡಾ.ತಿಪ್ಪಾರೆಡ್ಡಿ ಮಾತನಾಡಿ ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡಲು ಒಕ್ಕೂಟವು ಯೂನಾನಿ ಎಂಬ ನೂತನ ತಂತ್ರಾಂಶವನ್ನು ಅಳವಡಿಸಿಕೊಂಡಿದ್ದು, ಮೊದಲಲ್ಲಿ ಪ್ರಗತಿ ಕುಂಠಿತವಾಗಿದ್ದರು ಕಾರ್ಯಕರ್ತರ ಛಲ ಹಾಗೂ ಪರಿಶ್ರಮದಿಂದ ಪ್ರಗತಿ ಕಂಡಿತು. ಪ್ರಸ್ತುತ ಕೆ.ಎಂಎಫ್‌ನಲ್ಲಿ ಶ್ರೇ ೯೪ ರಷ್ಟು ಪ್ರಗತಿ ಹೊಂದುವ ಮೂಲಕ ಮೊದಲನೆ ಸ್ಥಾನದಲ್ಲಿದೆ. ಕೃತಕ ಗರ್ಭದಾರಣೆ ವೈಜ್ಞಾನಿಕವಾಗಿ ಹಾಗೂ ಕಾಲ ಕಾಲಕ್ಕೆ ಆವಿಷ್ಕಾರಗಳು ಹೆಚ್ಚುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಹನುಮೇಶ್, ಸಹಕಾರಿ ಯೂನಿಯನ್ ಉಪಾಧ್ಯಕ್ಷ ಗೋರ್ವಧನರೆಡ್ಡಿ, ಮುಖಂಡ ಅಂಜನಿ ಸೊಮಣ್ಣ, ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ಸುನೀಲ್‌ಬದನ್, ಡಾ.ಚೇತನ್, ಡಾ.ಮಾದವ್, ಡಾ.ಶ್ರೀಕಾಂತ್, ಡಾ.ಶ್ರೀಧರ ಮೂರ್ತಿ, ಆಡಳಿತ ವಿಭಾಗದ ವ್ಯವಸ್ಥಾಪಕ ನಾಗೇಶ್, ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಾರೆಡ್ಡಿ, ಡಾ.ಕುಮಾರ್, ವಿಸ್ತರಣಾಧಿಕಾರಿಗಳಾದ, ನಾರಾಯಣಸ್ವಾಮಿ, ಉಲ್ಲೂರಪ್ಪ, ಕರಿಯಪ್ಪ, ನರಸಿಂಹ ರೆಡ್ಡಿ, ವೆಂಕಟೇಶ್, ಶಿವಕುಮಾರ್‌ಹಾಜರಿದ್ದರು.