ರಾಸುಗಳನ್ನು ರೋಗದಿಂದ ರಕ್ಷಿಸಬೇಕು: ಡಿಗ್ಗಿ

ವಾಡಿ:ಮಾ.23: ಪಶುಗಳಿಗೆ ಹರಡುವ ಮಾರಕ ರೋಗದಿಂದ ಜಾಗೃತಿ ವಹಿಸಬೇಕು, ಭಯಾನಕ ರೋಗಗಳಿಗೆ ತುತ್ತಾಗುವ ರಾಶುಗಳಿಗೆ ಸರಕಾರ ಚಿಕ್ಸಿತಾ ಸೌಲಭ್ಯ ಕಲ್ಪಿಸಿಕೊಟ್ಟಿದ್ದು, ರೈತರು ಲಾಭ ಪಡೆದುಕೊಳ್ಳಬೇಕು ಎಂದು ಚಿತ್ತಾಪೂರ ಪಶು ಇಲಾಖೆಯ ಸಹಾಯಕ ನಿರ್ದೇಶಕ ಬಸಲಿಂಗಪ್ಪ ಡಿಗ್ಗಿ ಹೇಳಿದರು.
ಸಮೀಪದ ಆಲೂರ ಗ್ರಾಮದಲ್ಲಿ ಇತ್ತೀಚಿಗೆ, ವಾಡಿ ಪಶು ಇಲಾಖೆಯಿಂದ ಆಯೋಜಿಸಲಾದ ವಿಸ್ತರಣಾ ಚಟುವಟಿಕೆಗಳ ಯೋಜನೆಡಿಯಲ್ಲಿ ಪಶುಗಳಿಗೆ ಚಿಕಿತ್ಸಾ ಶಿಬಿರ ಸಭೆ ಉದ್ದೇಶಿಸಿ ಮಾತನಾಡಿದರು. ಪಶುಗಳಿಗೆ ಹರಡುವ ಮಾರಾಕ ರೋಗಗಳಿಂದ ರೈತರು ಎಚ್ಚರ ವಹಿಸಬೇಕು, ರೋಗಗಳ ಲಕ್ಷಣ ಕಂಡು ಬಂದರೆ ಪಶು ವೈದ್ಯರ ಸಲಹೆ ಪಡೆಯಬೇಕು.
ಗ್ರಾಪಂ ಅಧ್ಯಕ್ಷೆ ಸರೋಜಿನಿ ದೇಶಮುಖ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಅಯ್ಯಪ್ಪ ಎಂ, ಶಹಾಬಾದ ಪಶು ಇಲಾಖೆಯ ಸಹಾಯಕ ನಿರ್ದೇಶಕ ನೀಲಪ್ಪ ಪಾಟೀಲ, ವಾಡಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂಗಮೇಶ ಬಿರಾದಾರ, ನ್ಯಾಯವಾದಿ ಶರಣಗೌಡ ಮಾಲಿ ಪಾಟೀಲ, ಮುಖಂಡರಾದ ಬಸರಾಜಗೌಡ ದೇಶಮುಖ, ಸಿದ್ದಣ್ಣ ಪೂಜಾರಿ, ಶೇಖಪ್ಪ ಬಡಿಗೇರ, ಮಾಲಿಕಯ್ಯ ಗುತ್ತೇದಾರ ಸೇರಿದಂತೆ ಇನ್ನಿತರರು ಇದ್ದರು.