
ಬೀದರ್:ಮಾ.11: ಕೃಷಿ ಚಟುವಟಿಕೆಗಳಲ್ಲಿ ಅತಿಯಾದ ರಾಸಾಯನಿಕ ಔಷಧಿ ಬಳಕೆಯಿಂದ ಭೂಮಿ ಸತ್ವ ಕ್ಷೀಣಿಸುತ್ತಿದೆ ಎಂದು ಕಲಬುರಗಿಯ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಜಶೇಖರ ಬಸನೆ ಹೇಳಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ವತಿಯಿಂದ ಬೀದರ್ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ಮಹಾದೇವ ನಾಗೂರೆ ಅವರ ಹೊಲದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಹಾಗೂ ಗೋ ಕೃಪಾಮೃತ ಕುರಿತ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಸಾಯನಿಕ ಔಷಧಿಗಳು ಭೂಮಿ ಬಂಜರು ಆಗಲು ಹಾಗೂ ಹೊಸ ಹೊಸ ರೋಗಗಳ ಸೃಷ್ಟಿಗೂ ಕಾರಣವಾಗುತ್ತಿವೆ ಎಂದು ತಿಳಿಸಿದರು.
ಭೂಮಿ ಫಲವತ್ತತೆ ಕಾಯ್ದುಕೊಳ್ಳಲು ಹಾಗೂ ಗುಣಮಟ್ಟದ ಆಹಾರ ಉತ್ಪಾದಿಸಲು ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು. ಗೋವುಗಳ ಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಗೋ ಆಧಾರಿತ ಕೃಷಿ ರೈತರಿಗೆ ಅನುಕೂಲಕರವಾಗಿದೆ. ಕೃಷಿ ಚಟುವಟಿಕೆಯಲ್ಲಿ ಗೋ ಕೃಪಾಮೃತ ಬಳಕೆಯಿಂದ ಆರೋಗ್ಯಪೂರ್ಣ ಬೆಳೆ ಬರುತ್ತದೆ. ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಮಲ್ಲಿನಾಥ ಹಿಮ್ಮಡಿ ತಿಳಿಸಿದರು.
ಕೃಷಿಯಲ್ಲಿ ರೈತರ ಆದಾಯ ವೃದ್ಧಿ ಹಾಗೂ ವಿಷಮುಕ್ತ ಆಹಾರ ಉತ್ಪಾದನೆಗಾಗಿ ಸಂಘದಿಂದ ರೈತರಿಗೆ ಸಾವಯವ ಕೃಷಿ, ಸಮಗ್ರ ಕೃಷಿ, ಗೋ ಕೃಪಾಮೃತ ಸೇರಿದಂತೆ ವಿವಿಧ ವಿಷಯಗಳ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ರೈತರ ಏಳಿಗೆಯೊಂದಿಗೆ ಕಲ್ಯಾಣ ಕರ್ನಾಟಕದ ವಿಕಾಸವೇ ಸಂಘದ ಧ್ಯೇಯವಾಗಿದೆ ಎಂದು ಕಾರ್ಯಾಗಾರ ಉದ್ಘಾಟಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಹೇಳಿದರು.
ರೈತರಿಗೆ ಸಮಗ್ರ ಕೃಷಿ ಚಟುವಟಿಕೆ ಸಾಹಿತ್ಯ ಹಾಗೂ ಗೋಕೃಪಾಮೃತ ಉಚಿತವಾಗಿ ವಿತರಿಸಲಾಯಿತು.
ಕೆಕೆಎ???ಆ???ಎಸಿಎ???ನ ರೇವಣಸಿದ್ದ ಜಾಡರ್ ಸ್ವಾಗತಿಸಿದರು. ಗಣೇಶ ಹಡಪದ ನಿರೂಪಿಸಿದರು. ಸಚಿನ್ ನಾಗೂರೆ ವಂದಿಸಿದರು. ಜಿಲ್ಲೆಯ ವಿವಿಧೆಡೆಯ 400 ರೈತರು ಪಾಲ್ಗೊಂಡಿದ್ದರು.