ರಾಸಾಯನಿಕ ಗೋದಾಮು ಧಗ ಧಗ: 8 ಮಂದಿಗೆ ಗಾಯ

ಬೆಂಗಳೂರು,ನ.೧೧-ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿನ ರೇಖಾ ರಾಸಾಯನಿಕ ಕಾರ್ಖಾನೆ ಗೋದಾಮಿನ ಬೃಹತ್ ಬೆಂಕಿ ಸಂಪೂರ್ಣವಾಗಿ ನಂದಿಸುವುದು ಸಾಧ್ಯವಾಗದೆ ಇರುವುದರಿಂದ ನೊರೆ ಇನ್ನಿತರ ಪ್ರತಿರೋಧಕ ರಾಸಾಯನಿಕಗಳನ್ನು ಬಳಸಿ ಆಗ್ನಿಶಾಮಕ ದಳದ ಸಿಬ್ಬಂದಿ ಕಂಟ್ರೋಲ್ ಅಂಡ್ ಬರ್ನ್ ಕಾರ್ಯಾಚರಣೆ ಕೈಗೊಂಡಿದೆ.
ಕಳೆದ ೨೪ ಗಂಟೆಯಿಂದ ಬೆಂಕಿ ಧಗ ಧಗನೇ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ನೂರಾರು ಅಗ್ನಿ ಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸುತ್ತಿದ್ದು ಬೆಂಕಿ ನಿಯಂತ್ರಣಕ್ಕೆ ಬಂದಿದ್ದರೂ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಿದ್ದರಿಂದ ನೊರೆ ಇನ್ನಿತರ ಪ್ರತಿರೋಧಕ ರಸಾಯನಿಕಗಳನ್ನು ಬಳಸಿ ನಂದಿಸಲಾಗುತ್ತಿದ್ದು ಸಂಜೆ ವೇಳೆಗೆ ಬೆಂಕಿ ಸಂಪೂರ್ಣ ಶಮನವಾಗಲಿದೆ ಎಂದು ಅಗ್ನಿ ಶಾಮಕದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಿಯಂತ್ರಣಕ್ಕೆ ಬಂದಿದ್ದು, ತಳಹಂತದಲ್ಲಿ ಬೆಂಕಿ ಉರಿಯುತ್ತಿದೆ. ಇನ್ನು ಎರಡು ಮೂರು ಗಂಟೆಗಳ ಕಾಲ ಬೆಂಕಿ ಉರಿಯುವ ಕಂಟ್ರೋಲ್ ಅಂಡ್ ಬರ್ನ್ ಕಾರ್ಯಾಚರಣೆಯಿಂದ ಶಮನವಾಗಲಿದೆ.
ಬೆಂಕಿಯನ್ನು ನಂದಿಸಲು ನಿನ್ನೆ ಮಧ್ಯಾಹ್ನ ದಿಂದ ರಾತ್ರಿಯಿಡೀ ಬೆಂಕಿ ನಂದಿಸ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದು ಬೆಂಕಿ ಅವಘಡದಲ್ಲಿ ೩ ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿಯಿಂದ ೭ ವಾಹನಗಳು, ೨ ವಿದ್ಯುತ್ ಕಂಬಗಳು ಸಂಪೂರ್ಣ ಸುಟ್ಟು ಹೋಗಿದ್ದರೆ ಅಕ್ಕ ಪಕ್ಕದ ಮನೆಗಳಿಗೆ ಹಾನಿ ಸಂಭವಿಸಿದೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಅಜಾಯ್ ಪಾಷ ಎಂಬವರ ದೂರಿನ ಪ್ರಕರಣ ಕೇಸ್ ದಾಖಲಾಗಿದೆ.
ರೇಖಾ ರಾಸಾಯನಿಕ ಕಾರ್ಖಾನೆ ಗೋದಾಮಿನಲ್ಲಿ ನಿನ್ನೆ ಬೆಳಿಗ್ಗೆ ೧೧.೩೦ರ ವೇಳೆ ಕಾಣಿಸಿಕೊಂಡ ಬೆಂಕಿ ಬೃಹತ್ ಪ್ರಮಾಣವಾಗಿ ಆತಂಕ ಸೃಷ್ಟಿಯಾಗಿ ಎಷ್ಟೇ ಪ್ರಯತ್ನಿಸಿದರೂ ಬೆಂಕಿ ನಿಯಂತ್ರಣಕ್ಕೆ ಬರದಿದ್ದರಿಂದ ನೊರೆ ಇನ್ನಿತರ ಪ್ರತಿರೋಧಕ ರಸಾಯನಿಕಗಳನ್ನು ಬಳಸಿ ತಣ್ಣಗಾಗಿಸಲಾಗುತ್ತಿದೆ
ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿರುವುದರಿಂದ ಅಕ್ಕ ಪಕ್ಕದ ಮನೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಅಕ್ಕಪಕ್ಕದ ಮನೆಯವರನ್ನು ಸ್ಥಳಾಂತರಿಸಲು ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದರು. ಇಡೀ ರಸ್ತೆಯಲ್ಲಿ ಎಲ್ಲಿ ನೋಡಿದರೂ ಬೆಂಕಿಮಯವಾಗಿದ್ದು, ಸಂಪೂರ್ಣ ಹೊಗೆ ಆವರಿಸಿಕೊಂಡಿತ್ತು. ಫ್ಯಾಕ್ಟರಿ ಅಕ್ಕ-ಪಕ್ಕ ನಿಲ್ಲಿಸಿದ್ದ ವಾಹನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದವು.
ಸ್ಯಾನಿಟೈಸರ್ ಹಾಗೂ ಥಿನ್ನರ್ ತಯಾರಿಸುತ್ತಿದ್ದ ಕಾರ್ಖಾನೆಗೆ ಬೇಕಾಗುವ ರಾಸಾಯನಿಕ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ಗೋದಾಮಿನಲ್ಲಿ ೧ ಬ್ಯಾರಲ್ ಸ್ಯಾನಿಟೈಸರ್ ಬಿದ್ದು ಅನಾಹುತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಗ್ನಿಶಾಮಕ ಸಿಬ್ಬಂದಿಗೆ ಗಾಯ:
ಬೃಹತ್ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ೮ಮಂದಿ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ತೊಡಗಿರುವ ಎಂಟು ಜನ ಅಗ್ನಿ ಶಾಮಕ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ಇನ್ಸ್ ಪೆಕ್ಟರ್ ಗಳಾದ ರೇವಣ್ಣ ಸಿದ್ದಪ್ಪ (೩೬) ಸಂಪತ್ ರಾಜ್ (೩೫) ಇನ್ಸ್ಪೆಕ್ಟರ್ ಸಿದ್ದೇಗೌಡ (೩೪), ಜಿ. ಕೃಷ್ಣ ಸ್ವಾಮಿ ಹಾಗೂ ಹೆಡ್ ಕಾನ್‌ಸ್ಟೇಬಲ್? ಸೋಮಶೇಖರ್, ಹೆಡ್ ಕಾನ್‌ಸ್ಟೇಬಲ್, ಫೈರ್ ಮ್ಯಾನ್ ಸೋಮನಾಥ್, ಆನಂದ್, ಕೋಟ್ರೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಪಾರಿವಾಳಗಳ ರಕ್ಷಣೆ:
ಅಗ್ನಿ ದುರಂತದಲ್ಲಿ ಪಂಜರದಲ್ಲಿದ್ದ ಪಾರಿವಾಗಳ ಮಾರಣ ಹೋಮವಾಗಿದೆ. ಬೆಂಕಿ ಬಿದ್ದ ಜಾಗದಲ್ಲಿ ಬಿಸಿಯ ಬೇಗೆಗೆ ಪಾರಿವಾಳಗಳು ಬೆಂದು ಹೋಗಿವೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಪಂಜರದಲ್ಲಿದ್ದ ಕೆಲ ಪಾರಿವಾಳಗಳನ್ನ ರಕ್ಷಣೆ ಮಾಡಿದ್ದಾರೆ.
ಇಬ್ಬರ ವಿರುದ್ಧ ಕೇಸ್:
ಬೆಂಕಿ ಅವಘಡದ ಸಂಬಂಧ ರೇಖಾ ರಾಸಾಯನಿಕ ಕಾರ್ಖಾನೆ ಗೋದಾಮಿನ ಮಾಲೀಕರಾದ ಕಮಲ ಮತ್ತು ಸುಜನ್ ರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಗೋದಾಮು ಪಕ್ಕದ ಪ್ಲಾಸ್ಟಿಕ್ ಇಂಡಸ್ಟ್ರಿ ಮಾಲೀಕ ಅಯಾಜ್ ಪಾಷ ಎಂಬುವವರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದು, ರಾಸಾಯನಿಕ ಕಾರ್ಖಾನೆ ಗೋದಾಮಿನ ಬೆಂಕಿ ವ್ಯಾಪಿಸಿ ೪೫ ಲಕ್ಷ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ.
ದೂರಿನನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ೩೩೮, ೨೮೫, ೪೨೭ ಅಡಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ