
ರಾಯಚೂರು,ಏ.೨೨- ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿನ ರಾಯಚೂರು ಲ್ಯಾಬೋರೇಟರಿ ಘಟಕದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು ಬೆಂಕಿ ಕೆನ್ನಾಲಿಗೆ ಹೊತ್ತಿ ಉರಿದ ಲಕ್ಷಾಂತರ ರೂ.ಕೆಮಿಕಲ್ ಹೊತ್ತಿ ಉರಿಯಿತು.ರಾಯಚೂರು ತಾಲೂಕಿನ ವಡ್ಲೂರು ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇರುವಂತಹ ಕೆಮಿಕಲ್ ಕ್ಟರಿಯಲ್ಲಿನ ಕೆಮಿಕಲ್ ಸಂಗ್ರಹಿಸಿಟ್ಟೆ ಉಗ್ರಾಣಕ್ಕೆ ಬೆಂಕಿ ಹೊತ್ತಿದ್ದರಿಂದ ಸುತ್ತಲೂ ಆವರಿಸಿದ ದಟ್ಟವಾದ ಹೊಗೆ. ಬೆಂಕಿ ನಂದಿಸಲು ಈಗಾಗಲೇ ಅಗ್ನಿಶಾಮಕ ದಳದ ೭ ವಾಹನಗಳು ತೆರಳಿದ್ದು ಸಿಬ್ಬಂದಿಗಳು ಪರದಾಡುತ್ತಿದ್ದಾರೆ.ಕ್ಷಣ ಕ್ಷಣಕ್ಕೆ ಹೆಚ್ಚುತ್ತಿರುವ ಬೆಂಕಿಯ ಕಿನ್ನಾಲಿಗೆ ಪಕ್ಕದಲ್ಲಿ ಇರುವ ಇತರೆ ಕೆಮಿಕಲ್ ಕಂಪನಿಗೂ ಬೆಂಕಿ ಆವರಿಸುವ ಆತಂಕ ಹೆಚ್ಚುತ್ತಿದೆ.ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಕಿ ಅವಘಡ ಜರುಗಿದೆ ಸ್ಥಳಕ್ಕೆ ಆಗಮಿಸಿದ ಶಕ್ತಿ ನಗರ ಪೊಲೀಸ್ ತನಿಖೆ ಆರಂಭಿಸಿದ್ದಾರೆ.