ರಾಸಲೀಲೆ ಸ್ಥಳ ಮಹಜರು

ಬೆಂಗಳೂರು,ಏ.೧-ಕಳೆದ ಎರಡು ದಿನಗಳಿಂದ ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಯುವತಿಯನ್ನು ಕರೆದೊಯ್ದ ವಿಶೇಷ ತನಿಖಾ ತಂಡ(ಎಸ್ ಐಟಿ) ಅಧಿಕಾರಿಗಳು ಮೂರು ಕಡೆಗಳಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.
ಯುವತಿಯು ಸೂಚಿಸುವ ಸ್ಥಳ, ಆಕೆಯ ಮಾಹಿತಿ ಮೇರೆಗೆ ಆಕೆ ವಾಸಿಸುತ್ತಿದ್ದ ಆರ್ ಟಿ ನಗರದ ಪಿಜಿ ವಸತಿಗೃಹ ಮಲ್ಲೇಶ್ವರದ ಮಂತ್ರಿ ಗ್ರಿನ್ ಅಪಾರ್ಟ್ ಮೆಂಟ್ ನಲ್ಲಿನ ಮಾಜಿ ಸಚಿವರ ಮನೆ ಸೇರಿ ಮೂರು ಕಡೆಗಳಲ್ಲಿ ಸ್ಥಳ ಮಹಜರು ನಡೆಸಿದ ಅಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ.
ತನಿಖಾಧಿಕಾರಿ ಎಸಿಪಿ ಕವಿತಾ ನೇತೃತ್ವದಲ್ಲಿ ಅಧಿಕಾರಿಗಳು ಮೂರು ಕಡೆಗಳಲ್ಲಿ ಸ್ಥಳ ಮಹಜರು ನಡೆಸಿ ಕೃತ್ಯ ನಡೆದ ಸಂದರ್ಭದಲ್ಲಿ ಬಳಸಿದ ಬಟ್ಟೆ , ಹಾಸಿಗೆ, ಹೊದಿಕೆಗಳನ್ನು ಪರೀಕ್ಷೆ ನಡೆಸಿ ಅವುಗಳ ಜೈವಿಕ ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದಾರೆ.
ಮಾಲೀಕರ ವಿಚಾರಣೆ:
ಆರ್ ಟಿನಗರದ ಪಿಜಿಯ ಮಾಲೀಕರು ಯುವತಿ ಸ್ಥಳೀಯ ಮೂವರು ಸೇರಿ ಐವರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಾಗಿದೆ.ಮಾಲೀಕರಿಂದ ಯುವತಿಯು ಎಷ್ಟು ದಿನಗಳ ಕಾಲ ಪಿಜಿಯಲ್ಲಿ ಉಳಿದುಕೊಂಡಿದ್ದರು ಯಾವ ಸಮಯಕ್ಕೆ ಹೊರ ಹೋಗಿ ವಾಪಾಸು ಆಗುತ್ತಿದ್ದದ್ದು ಯಾವಾಗ ಸೇರಿ ಹಲವು ಪ್ರಶ್ನೆಗಳಿಗೆ ಉತ್ತರ ದಾಖಲಿಸಿಕೊಂಡರು.
ಇದೇ ವೇಳೆ ಯುವತಿಯು ಪಿಜಿಯಿಂದ ಮಾಜಿ ಸಚಿವರಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ಮಾಹಿತು ನೀಡಿದ್ದು ಮೊಬೈಲ್ ವಶಕ್ಕೆ ತನಿಖಾಕಾರಿಗಳು ಮುಂದಾದಾಗ ಯುವತಿಯೇ ಮೊಬೈಲ್ ನ್ನು ಒಪ್ಪಿಸಿದ್ದಾರೆ.
ಸಿಮ್ ಕಾರ್ಡ್ ವಶ:
ವಿಡಿಯೋ ಕಾಲ್ ಮೂಲಕ ಮಾತನಾಡುವ ವೇ ಯಾವ ಸಿಮ್ ಕಾರ್ಡ್ ಬಳಸಿದ್ದು ಎನ್ನುವ ಪ್ರಶ್ನೆಗಳಿಗೆ ಆಕೆ ಸಿಮ್ ಕಾರ್ಡ್ ನೀಡಿ ಸಮರ್ಪಕವಾದ ಮಾಹಿತಿಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಜರು ವೇಳೆ ರಕ್ತ, ಕೂದಲು, ವೀರ್ಯ, ಲಾಲಾರಸ ಇವುಗಳು ಜೈವಿಕ ಸಾಕ್ಷ್ಯಗಳಾಗಿ ಪರಿಗಣಿಸಲಾಗುತ್ತಿದ್ದು ಘಟನೆ ನಡೆದು ಬಹಳ ದಿನಗಳು ಕಳೆದಿರುವುದರಿಂದ ಇಂತಹ ಸಾಕ್ಷ್ಯಾಧಾರಗಳು ದೊರೆತಿಲ್ಲ ಎನ್ನಲಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಘಟನೆ ನಡೆದಿರುವುದಾಗಿ ಯುವತಿಯು ಹೇಳಿಕೆ ನೀಡಿದ ಕಡೆಗಳಲ್ಲಿ ದೈಹಿಕ ಸಂಪರ್ಕ ನಡೆದ ಜಾಗದ ಸ್ಥಳ ಮಹಜರು ನಡೆಸಿದ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಅತ್ಯಾಚಾರ ಆರೋಪ:
ಕೆಲಸ ಕೊಡಿಸುವುದಾಗಿ ಹೇಳಿ ಅಪಾರ್ಟ್?ಮೆಂಟ್?ಗೆ ಕರೆಯಿಸಿಕೊಂಡು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದರಿಂದ ಮೂರು ಸ್ಥಳಗಳಲ್ಲಿತನಿಖಾಧಿಕಾರಿಗಳು ಯುವತಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ತಾಂತ್ರಿಕ ಅಂಶಗಳಷ್ಟೇ ಈ ಪ್ರಕರಣದ ಜೀವಾಳವಾಗಿದೆ. ಅಂದರೆ ಪೋನ್ ಕರೆ , ವಾಟ್ಸ್??ಆ?ಯಪ್? ಚಾಟ್, ಟವರ್ ಡಂಪ್ ಇವುಗಳು ಸಾಕ್ಷ್ಯಾಧಾರಗಳಾಗಿವೆ. ಅಲ್ಲದೇ ಅಪಾರ್ಟಮೆಂಟ್??ನಲ್ಲಿನ ಸಿಬ್ಬಂದಿ, ಸೆಕ್ಯೂರಿಟಿಗಳ ಹೇಳಿಕೆಯನ್ನು ಎಸ್?ಐಟಿ ದಾಖಲಿಸಿದೆ.
ಅಲ್ಲಿ ಸೆರೆಯಾಗಿರುವ ಸಿಸಿಟಿವಿ ಕ್ಯಾಮರದ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು. ಕೃತ್ಯ ನಡೆದ ವೇಳೆ ಯುವತಿ ಹಾಗೂ ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿ ಒಂದೇ ಸ್ಥಳದಲ್ಲಿ ಇದ್ದಾರಾ ಎಂಬುವುದರ ಬಗ್ಗೆ ಟವರ್ ಲೊಕೇಷನ್? ಪರಿಶೀಲನೆ ನಡೆಸಿ ತನಿಖೆಯನ್ನು ಮುಂದುವರೆಸಿದ್ದಾರೆ.
ರಮೇಶ್ ಗೆ ಸಂಕಷ್ಟ:
ಯುವತಿಯ ದೂರು ಆನಂತರ ನ್ಯಾಯಾಧೀಶರ ಮುಂದೆ ಹೇಳಿಕೆ ವೈದ್ಯಕೀಯ ಪರೀಕ್ಷೆ ಅಲ್ಲದೇ ಎಸ್ ಐಟಿ ಅಧಿಕಾರಿಗಳ ಮುಂದೆ ಸಿಆರ್ ಪಿಸಿ ೧೬೧ಅನ್ವಯ ಹೇಳಿಕೆ ದಾಖಲಿಸಿರುವುದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಂಕಷ್ಟ ಎದುರಿಸುವಂತಾಗಿದೆ.
ನ್ಯಾಯಾಧೀಶರ ಮುಂದೆ ಸೆಕ್ಷನ್ ೧೬೪ ಅನ್ವಯ ಹೇಳಿಕೆ ದಾಖಲಿಸಿರುವುದು ಹಾಗೂ ಸಿಆರ್ ಪಿಸಿ ೧೬೧ಅನ್ವಯ ಯುವತಿಯು ಹೇಳಿಕೆ ನೀಡಿರುವುದರಿಂದ ರಮೇಶ್ ಜಾರಕಿಹೊಳಿಯನ್ನು ಬಂಧಿಸುವುದು ಎಸ್ ಐಟಿ ಅಧಿಕಾರಿಗಳಿಗೆ ಅನಿವಾರ್ಯವಾಗಿದೆ.