ರಾಸಲೀಲೆ ಸಿಡಿ ಯುವತಿಯ ಅಜ್ಜಿ ಮನೆಗೆ ನೋಟೀಸ್

ವಿಜಯಪುರ, ಮಾ.25-ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಯುವತಿಯ ನಿಡಗುಂದಿಯಲ್ಲಿನ ಅಜ್ಜಿಯ ನಿವಾಸಕ್ಕೆ ಬೆಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್ ಅಂಟಿಸಿ ಹೋಗಿರುವ ಘಟನೆ ನಡೆದಿದೆ.
ಮನೆಯ ಕಂಪೌಂಡ್ ಗೋಡೆಗೆ ಸಿಸಿಬಿ ಪೊಲೀಸರು ನೋಟಿಸ್​ ಅಂಟಿಸಿದ್ದಾರೆ. ಮಾರ್ಚ್ 29ರಂದು ಸಿಸಿಬಿ ಕಚೇರಿಯ ಮಡಿವಾಳ ಇಂಟ್ರಾಗೇಷನ್ ಸೆಂಟರ್​ಗೆ ಬಂದು ಹಾಜರಾಗುವಂತೆ ಯುವತಿಯ ತಂದೆ ಮತ್ತು ಸಹೋದರನ ಹೆಸರಿಗೆ ಸಿಸಿಬಿ ನೋಟಿಸ್​ ಜಾರಿ ಮಾಡಿದೆ.
ಬೆಂಗಳೂರಿನ ಆರ್​.ಟಿ ನಗರ ಠಾಣೆಯಲ್ಲಿನ ಪ್ರಕರಣದ ಕುರಿತು ಹಾಜರಾಗಲು ಯುವತಿ ತಂದೆ ಮತ್ತು ಸಹೋದರಿನಿಗೆ ನೋಟಿಸ್​ ಜಾರಿಯಾಗಿದೆ. ಪ್ರಕರಣದಲ್ಲಿ ತಮ್ಮ ಹೇಳಿಕೆ ಅಗತ್ಯವಾಗಿದೆ ಎಂದು ಯುವತಿಯ ತಂದೆ ಮತ್ತು ಸಹೋದರನಿಗೆ ಸಿಸಿಬಿ ಪೊಲೀಸರು ನೋಟಿಸ್​ನಲ್ಲಿ‌ ನಮೂದು ಮಾಡಿದೆ.
ಕಳೆದ ರಾತ್ರಿ ಸಿಸಿಬಿ ಪೊಲೀಸರು ನೋಟಿಸ್ ಅಂಟಿಸಿರಬಹುದು ಎಂದು ಹೇಳಲಾಗುತ್ತಿದೆ. ಸಿಡಿ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ನಿಡಗುಂದಿಯ ಸಂತ್ರಸ್ತೆ ಅಜ್ಜಿ ಮನೆಗೆ ಬೀಗ ಜಡಿಯಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಕಾರಣ ಕಂಪೌಂಡ್​ ಗೋಡೆಗೆ ಸಿಸಿಬಿ ಪೊಲೀಸರು ನೋಟಿಸ್ ಅಂಟಿಸಿ ಹೋಗಿದ್ದಾರೆ.
ಈ ಹಿಂದೆ ಮಾರ್ಚ್ 14ರಂದು ಸಹ ಬೆಂಗಳೂರಿನ ಕಬ್ಬನಪಾರ್ಕ್ ಠಾಣೆ ಪೊಲೀಸರು ಸಂತ್ರಸ್ತೆ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಇದೇ ಮನೆಗೆ ನೊಟೀಸ್ ಅಂಟಿಸಿದ್ದರು.
ಈಗ ಎರಡನೇ ಬಾರಿಗೆ ಸಂತ್ರಸ್ತೆಯ ಅಜ್ಜಿ ಮನೆಗೆ ನೋಟಿಸ್ ಅಂಟಿಸಿದ ಅಧಿಕಾರಿಗಳು ಆಕೆಯ ತಂದೆ ಮತ್ತು ಸಹೋದರನಿಗೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಉಲ್ಲೇಖಿಸಿದ್ದಾರೆ.