ರಾಸಲೀಲೆ ಸಿಡಿ ಆರೋಪಿಗಳ ಗ್ಯಾಂಗ್ ಪತ್ತೆ ತಂತ್ರಜ್ಞಾನ ಮೊರೆ ಹೋದ ಎಸ್ ಐಟಿ

Many CDs on white background

ಬೆಂಗಳೂರು,ಮಾ.೨೨-ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಶಂಕಿತರು ತಮ್ಮ ಇರುವಿಕೆಯ ಬಗ್ಗೆ ತಾಂತ್ರಿಕವಾಗಿ ಒಂದೇ ಒಂದು ಸುಳಿವು ಸಿಗದಂತೆ ಎಚ್ಚರ ವಹಿಸುತ್ತಿರುವುದು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ ಐಟಿ)ದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ರಾಸಲೀಲೆ ಸಿಡಿ ದೃಶ್ಯಾವಳಿವನ್ನು ರಾಜ್ಯದಲ್ಲಿ ಅಪ್‌ಲೋಡ್ ಮಾಡಿ ರಷ್ಯಾದಲ್ಲಿ ಮಾಡಿರುವುದಾಗಿ ಬಿಂಬಿಸಿದ್ದ ಸಿಡಿ ಗ್ಯಾಂಗ್ ಅದೇ ಮಾದರಿಯಲ್ಲಿ ಟವರ್ ಲೊಕೇಶನ್ ಕೂಡ ಮಿಸ್ ಮ್ಯಾಪಿಂಗ್ ಮಾಡಿದ್ದಾರಾ ಎಂಬ ಸಂಶಯ ವ್ಯಕ್ತಪಡಿಸಿರುವ ಅಧಿಕಾರಿಗಳು ತನಿಖೆ ತೀವ್ರ ಗೊಳಿಸಿದ್ದಾರೆ.
ಸಿಡಿ ಗ್ಯಾಂಗ್ ಎಥಿಕಲ್ ಹ್ಯಾಕರ್ ಹಾಗೂ ಸಂತ್ರಸ್ತೆ ಮೊಬೈಲ್‌ಗೆ ವಿವಿಧ ಸಾಫ್ಟ್‌ವೇರ್ ಇನ್‌ಸ್ಟಾಲ್ ಹಾಗೂ ಟವರ್ ಲೊಕೇಶನ್ ಮಿಸ್ ಮ್ಯಾಚ್ ಸೇರಿ ಹಲವು ಸಾಫ್ಟ್‌ವೇರ್‌ಗಳನ್ನು ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಎರಡು ದಿನಗಳ ಹಿಂದಷ್ಟೇ ಸಿಡಿ ಗ್ಯಾಂಗ್ ಟವರ್ ಲೊಕೇಶನ್ ದೆಹಲಿಯಲ್ಲಿ ಪತ್ತೆಯಾಗಿತ್ತು. ಆ ಸುಳಿವಿನ ಮೆರೆಗೆ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಎಸ್‌ಐಟಿಗೆ ಕೆಲವೇ ಗಂಟೆಗಳಲ್ಲಿ ವಿವಿಧ ಟವರ್ ಲೊಕೇಶನ್ ತೋರಿಸಿದೆ. ಹೀಗಾಗಿ ಎಸ್‌ಐಟಿ ತಾಂತ್ರಿಕ ತಜ್ಞರ ಮೊರೆ ಹೋಗಿದೆ.
ಪ್ರಿಯಕರ ಮಾಹಿತಿ:
ಸಂತ್ರಸ್ತ ಯುವತಿ ನಗರದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ ಕೆಲಸ ಮಾಡುತ್ತಿದ್ದಳು. ತಿಂಗಳಿಗೆ ೪೫ ಸಾವಿರ ವೇತನ ಪಡೆಯುತ್ತಿರುವುದು ಪತ್ತೆಯಾಗಿದೆ.
ಐಶಾರಾಮಿಯಾಗಿ ಜೀವನ ನಡೆಸಬೇಕೆಂಬ ಆಸೆ ಹೊಂದಿದ್ದ ಯುವತಿಯು ಕಂಪೆನಿ ತೊರೆದು ಸಿಡಿ ಗ್ಯಾಂಗ್ ಜೊತೆ ಗುರುತಿಸಿಕೊಂಡಿದ್ದಳು. ಈ ವೇಳೆ ಶಂಕಿತ ಆರೋಪಿ ಶ್ರವಣ್‌ಗೆ ಯುವತಿ ಪರಿಚಯವಾಗಿತ್ತು ಎಂದು ಎಸ್‌ಐಟಿ ವಿಚಾರಣೆ ವೇಳೆ ಯುವತಿ ಪ್ರಿಯಕರ ಮಾಹಿತಿ ನೀಡಿದ್ದಾನೆ .
ಯುವತಿಯಿಂದ ದೂರ :
ಸಿಡಿ ಬಿಡುಗಡೆಯಾದ ದಿನವೇ ಯುವತಿಯ ಪ್ರಿಯಕರನಿಗೆ ಮೂವರು ಗೆಳೆಯರು ವಿಡಿಯೋ ಕಳಿಸಿದ್ದರಂತೆ. ಈ ವೇಳೆ ವಿಡಿಯೋ ನೋಡಿ ಅದು ತನ್ನ ಹುಡುಗಿಯೇ ಎಂದಿದ್ದನು. ಆದರೆ ಈ ವೇಳೆ ಶ್ರವಣ್ ಮತ್ತು ನರೇಶ್ ಇದೆಲ್ಲ ಸುಳ್ಳು, ಬೇರೆ ಯಾರೋ ಮಾರ್ಫ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಯುವತಿ ಒಪ್ಪದಿದ್ದಾಗ ಬೇರೆ ಬೇರೆ ವಿಡಿಯೋ ತೋರಿಸಿ ಶ್ರವಣ್ ಸಮಾಧಾನ ಮಾಡಿದ್ದಾನೆ. ಯುವತಿಯ ಜೀವಕ್ಕೆ ತೊಂದರೆ ಇದೆ, ಹೀಗಾಗಿ ಗೋವಾಗೆ ಹೋಗಿ ಇರಿ ಎಂದು ಕಳಿಸಿದ್ದರು. ನಂತರ ಯುವತಿ ಮತ್ತು ಆಕೆಯ ಬಾಯ್ ಫ್ರೆಂಡ್ ಗೋವಾಕ್ಕೆ ಹೋಗಿದ್ದರು. ಗೋವಾದಲ್ಲಿ ಸತ್ಯ ಅರಿತಿದ್ದ ಆಕೆಯ ಪ್ರಿಯಕರ ಆಕೆಯಿಂದ ದೂರವಾಗಿದ್ದನು.
ಆಕ್ಟಿವ್ ಆಗಿದ್ದ ಸಿಡಿ ಟೀಮ್:
ಜುಲೈನಲ್ಲಿ ನರೇಶ್ ಮತ್ತು ಆತನ ತಂಡಕ್ಕೆ ಯುವತಿ ಸೇರ್ಪಡೆಯಾಗಿದ್ದಳು. ನಂತರ ಯುವತಿಗೆ ಹಣ ಕೊಟ್ಟು ಏನು ಮಾಡಬೇಕು ಎಂದು ಗ್ಯಾಂಗ್ ತರಬೇತಿ ನೀಡಿತ್ತು. ಯಾವುದೇ ಕಾರಣಕ್ಕೂ ವಿಡಿಯೋದಲ್ಲಿ ಮುಖ ಕಾಣುವುದಿಲ್ಲ. ಮುಖಕಾಣದಂತೆ ಮಾಡುತ್ತೀವಿ ಎಂದು ಹೇಳಿದ್ದರಂತೆ. ಯುವತಿ ತನ್ನ ಗುರುತು ಪತ್ತೆ ಆಗುವುದಿಲ್ಲ ಎಂದು ಭಾವಿಸಿದ್ದಳು. ನಂತರದ ದಿನಗಳಲ್ಲಿ ಮುಖದ ಸಹಿತ ವಿಡಿಯೋ ಬಿಡುಗಡೆಆಗಿತ್ತು.
ಮೂರನೇ ಬಾರಿ ನೋಟಿಸ್:
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಶಂಕಿತ ಆರೋಪಿಗಳಿಗೆ ಇಂದು ಹಾಜರಾಗುವಂತೆ ನೋಟಿಸ್ ನೀಡಿದೆ. ಎಸ್‌ಐಟಿಯಿಂದ ಶಂಕಿತರಿಗೆ ಮೂರನೇ ರೌಂಡ್ ವಿಚಾರಣೆ ನಡೆಯಲಿದೆ. ಭವಿತ್, ಲಕ್ಷ್ಮೀಪತಿ, ಆಕಾಶ್ ಮತ್ತು ಟೈಂ ಕ್ರಿಯೆಷನ್ ಹರೀಶ್ ಅವರಿಗೆ ನೋಟಿಸ್ ನೀಡಿದೆ.