ರಾಸಲೀಲೆ ಯುವತಿಗೆ 4ನೇ ದಿನವೂ ಎಸ್‌ಐಟಿ ವಿಚಾರಣೆ

ಬೆಂಗಳೂರು, ಏ.೩-ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಯುವತಿಯು ಇಂದು ಮತ್ತೆ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿ ಮಾಹಿತಿಯನ್ನು ನೀಡಿದ್ದಾರೆ.
ಸಂತ್ರಸ್ಥ ಯುವತಿಯು ಇಂದು ಬೆಳಗ್ಗೆ ೧೦ ಗಂಟೆಗೆ ಆಡುಗೋಡಿ ಟೆಕ್ನಿಕಲ್ ಸೆಲ್‌ಗೆ ಹಾಜರಾಗಿ ಅಧಿಕಾರಿಗಳ ವಿಚಾರಣೆ ಎದುರಿಸಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಕಳೆದ ಮೂರು ದಿನಗಳಿಂದ ಸಿಡಿ ಸಂತ್ರಸ್ತ ಯುವತಿಯ ವಿಚಾರಣೆ ನಡೆಯುತ್ತಿದ್ದು, ಇಂದು ಆಡುಗೋಡಿ ಟೆಕ್ನಿಕಲ್ ಸೆಲ್?ಗೆ ಹಾಜರಾಗಲು ಅಧಿಕಾರಿಗಳು ನೊಟೀಸ್ ನೀಡಿದ್ದರು.
ಅದರಂತೆ ವಿಚಾರಣೆಗೆ ಹಾಜರಾದ ಯುವತಿಯನ್ನು ಮೊಬೈಲ್ ಕರೆಗಳು ವಿಡಿಯೋ ಕಾಲ್ ಪರಿಶೀಲನೆ ಸ್ಥಳ ಮಹಜರು ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿಗೆ ಅಧಿಕಾರಿಗಳು ಸ್ಪಷ್ಟನೆ ದಾಖಲಿಸಿ ಕೊಂಡಿದ್ದಾರೆ.
ಎಸ್?ಐಟಿ ಅಧಿಕಾರಿಗಳು ಇಂದು ಹಲವು ಪ್ರಶ್ನೆಗಳಿಗೆ ಉತ್ತರ ದಾಖಲಿಸಿ ಬಹುತೇಕ ಯುವತಿಯ ವಿಚಾರಣೆ ಅಂತ್ಯಗೊಳಿಸುವ ಸಾಧ್ಯತೆಯಿದೆ.
ಸಿಡಿ ಬಿಡುಗಡೆ ಮಾಡಿರುವ ವ್ಯಕ್ತಿಗಳ ಕುರಿತಾಗಿ ನಿನ್ನೆ ತೀವ್ರ ವಿಚಾರಣೆ ನಡೆಸಲಾಗಿದೆ. ಯುವತಿಗೆ ಸಿಡಿ ಗ್ಯಾಂಗ್‌ನವರು ಹೇಗೆ ಪರಿಚಯ, ಸಿಡಿ ಬಿಡುಗಡೆ ಮಾಡೋಕೆ ನೀವೆ ಹೇಳಿದ್ದಿರಾ? ನಿಮ್ಮ ಗಮನಕ್ಕೆ ಬರದ ಹಾಗೆಯೇ ಸಿಡಿ ಬಿಡುಗಡೆ ಆಯ್ತಾ ಸಿಡಿ ಗ್ಯಾಂಗ್‌ನಲ್ಲಿ ಇರುವವರಿಗೆ ಯಾರಿಗಾದರೂ ಸಿಡಿಯನ್ನು ಕೊಟ್ಟಿದ್ದರಾ? ಹೀಗೆ ಹಲವಾರು ಪ್ರಶ್ನೆಗಳನ್ನು ಎಸ್?ಐಟಿಯವರು ನಿನ್ನೆ ಯುವತಿಗೆ ಕೇಳಿದ್ದರು.
ಸಿಡಿ ಗ್ಯಾಂಗ್‌ನ ನಾಯಕ ಅನಿಸಿಕೊಂಡಾತನಿಗೆ ಸಿಡಿ ಕೊಟ್ಟಿದ್ದಾಗಿ ಯುವತಿ ಹೇಳಿಕೆ ನೀಡಿದ್ದರು. ಮಾನಸಿಕವಾಗಿ ರಮೇಶ್ ಜಾರಕಿಹೊಳಿ ಹಿಂಸೆ ನೀಡಿದ್ದರಿಂದ ನಾನೇ ವಿಡಿಯೋ ಮಾಡಿದ್ದಾಗಿ ಯುವತಿ ಹೇಳಿದ್ದರು. ಅವರಿಗೆ ಬ್ಲಾಕ್ ಮೇಲ್ ಮಾಡಬೇಕು ಎನ್ನುವ ಯಾವುದೇ ಯೋಚನೆ ನನಗೆ ಇಲ್ಲ, ಹಿಂದೆಯೂ ಇರಲಿಲ್ಲ ಎಂದು ಯುವತಿ ಹೇಳಿದ್ದರು.
ನಾನಂತೂ ಅವರಿಗೆ ಬ್ಲಾಕ್‌ಮೇಲ್ ಮಾಡಿಲ್ಲ. ಆದರೆ, ಬೇರೆ ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ ನನಗೆ ಗೊತ್ತಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳ ಮುಂದೆ ಸಂತ್ರಸ್ತೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. . ಯುವತಿಯಿಂದ ಸಿಡಿ ಪಡೆದು ಬ್ಲಾಕ್ ಮೇಲ್ ಕೆಲಸ ನಡೆದಿತ್ತಾ ಎಂದು ಎಸ್ ಐ ಟಿ ವಿಚಾರಣೆ ವೇಳೆ ತನಿಖಾಧಿಕಾರಿಗೆ ಅನುಮಾನ ಮೂಡಿದೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿಯಿಂದ ಬೇಸತ್ತು ನಾನು ವಿಡಿಯೋ ಮಾಡಿದ್ದೆ ಎಂದು ಯುವತಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಕೆಲಸ ಕೊಡಿಸದೆ ಲೈಂಗಿಕವಾಗಿ ಬಳಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಅತ್ಯಾಚಾರ ಮಾಡಿದ್ದಾರೆ ಎನ್ನುವುದಕ್ಕೆ ಸೂಕ್ತವಾದ ದಾಖಲೆ ಇಲ್ಲದಿದ್ರೆ ಕಷ್ಟ ಎಂದು ಪತ್ರಕರ್ತ ಹೇಳಿದ್ದ. ಹೀಗಾಗಿ, ಆತನ ಮಾತಿನಂತೆ ಯುವತಿ ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿದ್ದರು. ವಿಡಿಯೋ ಚಿತ್ರೀಕರಿಸಿ ಪತ್ರಕರ್ತನಿಗೆ ನೀಡಿದ್ದಾಗಿ ಯುವತಿ ವಿಚಾರಣೆ ವೇಳೆ ಹೇಳಿದ್ದಾರೆ.
ಆದರೆ, ಆ ವಿಡಿಯೋ ವೈರಲ್ ಮಾಡಿದ್ದು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಟಿವಿಯಲ್ಲಿ ಬಂದಾಗಲೇ ನನಗೆ ವಿಡಿಯೋ ಬಿಡುಗಡೆ ಆಗಿರುವುದು ಗೊತ್ತಾಗಿದೆ ಎಂದು ಯುವತಿ ಹೇಳಿದ್ದಾರೆ.
ಯುವತಿಯ ಹೇಳಿಕೆ ಬಳಿಕ ಮತ್ತೆ ಸಿಡಿ ಗ್ಯಾಂಗ್ ಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ. ಸಿಡಿ ಬಿಡುಗಡೆ ಬಳಿಕ ಯಾರೊಬ್ಬರ ಜೊತೆಯೂ ನನಗೆ ಸಂಪರ್ಕ ನನಗಿಲ್ಲ. ಯಾರು ಎಲ್ಲಿದಾರೆ ಎನ್ನುವುದೇ ನನಗೆ ಗೊತ್ತಿಲ್ಲ ಎಂದು ಯುವತಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿಗೆ ಆರೋಗ್ಯ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಇನ್ನೆರೆಡು ದಿನ ಎಸ್ ಐ ಟಿ ಮುಂದೆ ಜಾರಕಿಹೋಳಿ ಹಾಜರಾಗುವುದು ಅನುಮಾನವಾಗಿದೆ.
ರಮೇಶ್ ಅವರ ಕೊರೋನಾ ಪರೀಕ್ಷೆ ನಡೆಸಲಾಗಿದ್ದು ಒಂದು ವೇಳೆ ಕೊರೋನಾ ಇರುವುದು ದೃಢವಾದರೆ ಇನ್ನೂ ಹದಿನೈದು ದಿನ ಜಾರಕಿಹೊಳಿಯನ್ನು ಬಂಧಿಸುವ ಸಾಧ್ಯತೆಯಿಲ್ಲ.