ರಾಸಲೀಲೆ ಮಹತ್ವದ ಸಾಕ್ಷಿಗಳಿವೆ: ರಮೇಶ್

ಬೆಂಗಳೂರು,ಮಾ. ೨೫- ತಮ್ಮ ವಿರುದ್ಧ ಕೇಳಿ ಬಂದಿರುವ ರಾಸಲೀಲೆ ಪ್ರಕರಣದ ಆರೋಪದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಈ ಬಗ್ಗೆ ತಮ್ಮ ಬಳಿ ಮಹತ್ವದ ಸಾಕ್ಷಿಗಳಿವೆ ಎಂದು ಮಾಜಿ ಸಚಿವ ರಮೇಶ್‌ಜಾರಕಿ ಹೊಳಿ ಹೇಳಿಕೆ ನೀಡುವ ಬಳಿಕ ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಷಡ್ಯಂತ್ರದ ಹಿಂದೆ ಇರುವ ಸಾಕ್ಷಿಗಳು ತಮ್ಮ ಕಿಸೆಯಲ್ಲೇ ಇದೆ. ಅದನ್ನು ಕೇಳಿದರೆ ಶಾಕ್ ಆಗುತ್ತೀರಾ ಎಂದು ವಿವಾದದ ಬಾಂಬ್ ಸಿಡಿಸಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ವಿರುದ್ಧ ರೇಪ್ ಪ್ರಕರಣ ದಾಖಲಿಸಬೇಕೆಂಬ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಮಾತು ಕೇಳಿ ನನಗೆ ಶಾಕ್ ಆಗಿದೆ ಎಂದು ಹೇಳಿದರು.
ದೇವರ ಆರ್ಶೀವಾದದಿಂದ ಆರೋಪಮುಕ್ತನಾಗಿ ಹೊರ ಬರುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.