ರಾಷ್ಡ್ರೀಯ ಪೋಷಣ ಅಭಿಯಾನ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

ಬೀದರ:ಎ.7:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬೀದರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶಿಶು ಅಭವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ರಾಷ್ಡ್ರೀಯ ಪೋಷಣ ಅಭಿಯಾನ ಯೋಜನೆಯಡಿ ಮಾಡ್ಯೂಲ್ 11, 12 & 13 ರ ಕುರಿತು ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸದರಿ ತರಬೇತಿ ಕಾರ್ಯಗಾರದ ಉದ್ಘಾಟಕರಾಗಿ ಆಗಮಿಸಿದಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಅಧೀಕ್ಷಕರಾದ ಶ್ರೀ ಜಗನಾಥ ಗಾದಾ ಅವರು ಮಾತನಾಡಿ, ಮೇಲ್ವಿಚಾರಕಿಯರು ಪ್ರತಿಯೊಂದು ಮಾಡ್ಯುಲ್‍ಗಳ ಬಗ್ಗೆ ಚನ್ನಾಗಿ ತಿಳಿದುಕೊಂಡು, ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡುವುದು. ಹಾಗೂ ಸರ್ಕಾರದ ಪ್ರತಿ ಕಾರ್ಯಕ್ರಮವು/ಯೋಜನೆಗಳ ಪೂರ್ಣ ಮಾಹಿತಿ ಒಳಗೊಂಡ ವಲಯವಾರು ದಿನಚರಿ ಕಡ್ಡಾಯವಾಗಿ ನಿರ್ವಹಿಸಬೇಕೆಂದರು ತಿಳಿಸಿದರು.
ಅದೇ ರೀತಿ ಬೀದರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಮಹಾಂತೇಶ ಭಂಜತ್ರಿ ರವರು ಮಾತನಾಡಿ ಕೇಂದ್ರ ಸರ್ಕಾರದ ಪೋಷಣ ಅಭಿಯಾನ ಕಾರ್ಯಕ್ರಮವು ಗುರಿಯಾದರಿತÀ ಕಾರ್ಯಕ್ರಮವಾಗಿದ್ದು, ಒಟ್ಟು 21 ಮಾಡ್ಯುಲ್‍ಗಳನ್ನು ಪ್ರತಿ ತಿಂಗಳು ಒಂದರಂತೆ ತರಬೇತಿ ನೀಡಿ ಗರ್ಭಿಣಿ, ಬಾಣಂತಿ, ಶಿಶುಗಳ ಹಂತ ಹಂತವಾಗಿ ಬೆಳವಣಿಗೆ ಕುರಿತು ಸೂಕ್ತ ಮಾರ್ಗದರ್ಶನ ನೀಡುವುದು. ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆಯನ್ನು ತಕ್ಷಣವೇ ಗುರುತಿಸಿ ಸೂಕ್ತ ವೈದ್ಯಕೀಯ ತಪಾಸಣೆ ಸಲಹೆ ಸೂಚನೆ ನೀಡುವುದು. ಕಡ್ಡಾಯವಾಗಿ ಎಲ್ಲಾ ಮೇಲ್ವಿಚಾರಕಿಯರು ಸದರಿ ಮಾಡ್ಯುಲ್‍ಗಳ ಬಗ್ಗೆ ಗಂಭೀರವಾಗಿ ಕಾರ್ಯನಿರ್ವಹಿಸಲು ಸಲಹೆ ನೀಡಿದರು.
ಸದರಿ ತರಬೇತಿಯಲ್ಲಿ ಬೀದರ ತಾಲೂಕಿನ ಎಲ್ಲಾ ವಲಯ ಮೆಲ್ವೀಚಾರಕಿಯರು, ಪ್ರಥಮ ದರ್ಜೆಯ ಸಹಾಯಕರಾ ಶ್ರೀ. ದೇವೆಂದ್ರಪ್ಪ ಕೆ ನಾಟೆಕರ್ , ಹಾಗೂ ಪೋಷಣ ಅಭಿಯಾನದ ಸಿಬ್ಬಂದಿ ವರ್ಗದವರು ಶ್ರೀಮತಿ. ವಿಜಯಲಕ್ಷ್ಮಿ, ಕುಮಾರಿ. ಭಾಗ್ಯವತಿ ಸಂಯೋಜಕರು ಉಪಸ್ಥಿತರಿದ್ದರು.