ರಾಷ್ಠ್ರೀಯ ಮೇರಿಟ್ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ರ್ಯಾಂಕ

ಆಳಂದ:ಎ.4: 2020-21ನೇ ಸಾಲಿನ ರಾಷ್ಠ್ರೀಯ ಮೇರಿಟ್ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿಧ್ಯಾರ್ಥಿನಿಯಾದ ಗೀತಾ ನಾಗಣಗೌಡ ಮಾಲಿಪಾಟೀಲ್ ಕಲಬುರಗಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಹಾಗೂ ಇದೇ ಶಾಲೆಯ ವಿಧ್ಯಾರ್ಥಿನಿಯರಾದ ಧಾನೇಶ್ವರಿ ಶರಣಬಸಪ್ಪ ಕುÀಂಭಾರ 3ನೇ ರ್ಯಾಂಕ್ ಮತ್ತು ಈರಮ್ಮ ಮಲ್ಲಿಕಾರ್ಜುನ ದೈಗೊಂಡ 4ನೇ ರ್ಯಾಂಕ್ ಪಡೆದಿದ್ದು, ಒಟ್ಟು 08 ಜನ ವಿಧ್ಯಾರ್ಥಿಗಳು ಉತ್ತಮ ಅಂಕಗಳಿಸಿರುತ್ತಾರೆ. ವಿಧ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಹಾಗೂ ನೂತನ ಗ್ರಾಪಂ ಸದಸ್ಯರಾದ ಚಂದ್ರಕಾಂತ ಮಠಪತಿ ಹರ್ಷ ವ್ಯಕ್ತ ಪಡಿಸಿದ್ದಾರೆ.