ರಾಷ್ಟ್ರ ಲಾಂಛನಕ್ಕೆ ಅವಮಾನ! ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ವಿಜಯಪುರ: ಎ.12:ಜಿಲ್ಲಾ ಕೇಂದ್ರ ಕಾರಾಗೃಹ ವಿಜಯಪುರ ಇಲ್ಲಿನ ಕಾರಾಗೃಹದ ಕಚೇರಿಯ ಆವರಣದಲ್ಲಿ ರಾಷ್ಟ್ರ ಲಾಂಛನದ ಪ್ರತಿಮೆಯನ್ನು ಅವಮಾನ ರೀತಿಯಲ್ಲಿ ಸ್ಥಾಪಿಸಿದಕ್ಕೆ ಆಗ್ರಹಿಸಿ ಮಾನ್ಯ ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರ್ನಾಟಕ ಯುವಗರ್ಜನೆಯಿಂದ ಮನವಿ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಸವರಾಜ ಎಂ. ಖಂಡೇಕರ ರವರು ಮಾತನಾಡಿ ನಮ್ಮ ವಿಜಯಪುರ ನಗರದ ಜಿಲ್ಲಾ ಕೇಂದ್ರ ಕಾರಾಗೃಹದ ಬಾಗಿಲಿನ ಎದುರುಗಡೆ ಇರುವ ರಾಷ್ಟ್ರ ಲಾಂಛನವು ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ಸ್ಥಾಪಿಸಿದ್ದು, ನಿಯಮಾನುಸಾರ ರಾಷ್ಟ್ರ ಲಾಂಛನದಲ್ಲಿ ನಾಲ್ಕು ಮುಖದ ಸಿಂಹಗಳಿರಬೇಕು ಹಾಗೂ ಓಡುತ್ತಿರುವ ಕುದುರೆ, ಎತ್ತು, ಆನೆ, ಸಿಂಹ ಹಾಗೂ ಅಶೋಕ ಚಕ್ರ ಇರಬೇಕು ಹಾಗೂ ರಾಷ್ಟ್ರ ಲಾಂಛನವನ್ನು ಯಾವ ದಿಕ್ಕಿನಿಂದ ನೋಡಿದರು ಅದು 3 ಮುಖ ಮಾತ್ರ ಕಾಣಿಸಬೇಕು, ಆದರೆ ಅಲ್ಲಿ ಸ್ಥಾಪಿಸಿದ ರಾಷ್ಟ್ರ ಲಾಂಛನವು ಕೇವಲು 3 ಮುಖದ ಸಿಂಹಗಳನ್ನು ಹೊಂದಿರುತ್ತದೆ. ಸದರಿ ಲಾಂಛನದಲ್ಲಿ ಮುಂದುಗಡೆ, ಎಡಗಡೆ, ಬಲಗಡೆ ಮಾತ್ರ ಸಿಂಹದ ಮುಖಗಳಿರುತ್ತವೆ, ಹಿಂದುಗಡೆ ಯಾವುದೇ ರೀತಿಯ ಸಿಂಹ ಇರುವುದಿಲ್ಲ. ಅದಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕುಲಂಕುಶವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ರಾಷ್ಟ್ರ ಲಾಂಛನಕ್ಕಾದ ಅವಮಾನಕ್ಕೆ ನ್ಯಾಯ ದೊರಕಿಸಬೇಕೆಂದು ಹೇಳಿದರು, ಬಳಿಕ ಮಾತನಾಡಿದ ಸಂಘಟನೆ ರಾಜ್ಯ ಗೌರವಾಧ್ಯಕ್ಷರಾದ ಪ್ರಕಾಶ ಮಿರ್ಜಿಯವರು ಈ ರಾಷ್ಟ್ರ ಲಾಂಛನಕ್ಕಾದ ಅವಮಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಅದನ್ನು ಕುಲಂಕುಶವಾಗಿ ಸ್ಥಳ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ, ನಮಗೆ ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣವಾದ ನಂಬಿಕೆ ಇದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮಾಳು ದೊಡಮನಿ, ಮಹಾದೇವ ಪವಾರ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.