ರಾಷ್ಟ್ರ ಮಟ್ಟದ ಹಾಕಿ ಚಾಂಪಿಯನ್‍ಷಿಪ್ ಗೆ ಆಯ್ಕೆಯಾದಬೆಸ್ಟ್ ಕಾಲೇಜ್ ವಿದ್ಯಾರ್ಥಿ  ಪ್ರದೀಪ್ ಕುಮಾರ್ ನಾಯಕ್.’    


(ಸಂಜೆವಾಣಿ ಪ್ರತಿನಿಧಿಯಿಂದ)
 ಬಳ್ಳಾರಿ, ಮೇ.26:  ಗ್ವಾಲಿಯರ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಹಾಕಿ ಚಾಂಪಿಯನ್‍ಷಿಪ್ ಗೆ ಬಳ್ಳಾರಿ ಜಿಲ್ಲೆಯ ಬೆಸ್ಟ್ ಕಾಲೇಜ್ ವಿದ್ಯಾರ್ಥಿಯಾದ ಪ್ರದೀಪ್‍ಕುಮಾರ್ ನಾಯಕ್ ಆಯ್ಕೆಯಾಗಿದ್ದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರದೀಪ್ ಕುಮಾರ್ ಇವರನ್ನು ಬೆಸ್ಟ್ ಸಂಸ್ಥೆಯ ಅಧ್ಯಕ್ಷರಾದ ಕೊನಂಕಿ ರಾಮಪ್ಪನವರು ಉಪಾದ್ಯಕ್ಷರಾದ ಕೊನಂಕಿ ತಿಲಕ್‍ಕುಮಾರ್‍ರವರು, ಕಾರ್ಯದರ್ಶಿಗಳಾದ  ಮನ್ನೆ ಶ್ರೀನಿವಾಸುಲು, ಕಾಲೇಜಿನ ಪ್ರಾಂಶುಪಾಲರಾದ ಕೆ.ವೆಂಕಟೇಶ್ವರರಾವ್, ಉಪಪ್ರಾಂಶುಪಾಲರಾದ ಜಿ.ಶ್ರೀನಿವಾಸರೆಡ್ಡಿ, ದೈಹಿಕ ಶಿಕ್ಷಣ ಸಿಬ್ಬಂದಿಗಳಾದ ಶಿವಾನಂದ್, ತಿಪ್ಪೇರುದ್ರ, ಶ್ರೀಮತಿ ವೆಂಕಟಲಕ್ಷ್ಮಿ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.