ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ವಿಜಯಪುರ ವಿದ್ಯಾರ್ಥಿಗಳ ಸಾಧನೆ

ವಿಜಯಪುರ, ಜು.26-ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು ಪ್ರತಿಭಾವಂತರು, ರಾಷ್ಟ್ರಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿ ರಾಷ್ಟ್ರ ನಿರ್ಮಾತೃದಲ್ಲಿ ನಿಮ್ಮ ಪಾತ್ರ ಅದಮ್ಯ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ನಿರ್ದೇಶಕ ಬಸನಗೌಡ (ರಾಹುಲ) ಪಾಟೀಲ ಅವರು ಹೇಳಿದರು.
ಇಂಟ್ಯಾಚ್ ವಿಜಯಪುರ ಚಾಪ್ಟರ ಮತ್ತು ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಕುಮಾರ ನಿತೀನ್ ಮಿರ್ಜಿ ಸೆಂಟ್ ಜೋಸೆಪ್ ಸ್ಕೂಲ, ವಿಜಯಪುರ ಇತ ಪ್ರಾದೇಶಿಕ ಮಟ್ಟದಲ್ಲಿ ಅಮೃತಮಹೋತ್ಸವದ ಚಿತ್ರ ಮತ್ತು ಅದರ ಬರವಣಿಗೆ ಮೇಲಿಂದ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಇಂಟ್ಯಾಚ್ ನ್ಯೂ ದೆಹಲಿ “ಕೊಡಮಾಡಿದ ಫಲಕ, ಪ್ರಮಾಣ ಪತ್ರ ಮತ್ತು ಪುಸ್ತಕ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ, ಡಾ. ಎಂ.ಎಸ್.ಮದಭಾವಿ, ಪ್ರೊ. ಆಯ್.ಎಸ್.ಕಾಳಪ್ಪನವರ, ಡಾ. ವಿ.ಡಿ.ಐಹೊಳ್ಳಿ, ಪ್ರೊ. ಎ.ಬಿ.ಬೂದಿಹಾಳ, ಕುಮಾರಿ ಚೈತನಾ ಸಂಕೊಂಡ ಉಪಸ್ಥಿತರಿದ್ದರು.