ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ

ಧಾರವಾಡ, ಸೆ6: ಕೆಎಲ್‍ಎಸ್ ವಿಡಿಐಟಿ ಹಳಿಯಾಳದ ವಿದ್ಯಾರ್ಥಿಗಳ ಪ್ರಾಜೆಕ್ಟ್ ರಾಷ್ಟ್ರೀಯ ಮಟ್ಟದ ಪ್ರದರ್ಶನ ಸ್ಪರ್ಧೆಗೆ ಆಯ್ಕೆಯಾಗಿದೆ. ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳಾದ ಕು. ಆಶಿಶ್ ಜಿ , ಕುಮಾರಿ. ಕೀರ್ತಿ ಎಸ್, ಕುಮಾರಿ. ಶಾಂಭವಿ ಪಿ ಮತ್ತು ಕುಮಾರಿ. ಅಮೃತಾ ಇವರುಗಳು ಪೆÇ್ರ. ವಿಜಯಲಕ್ಷ್ಮಿ ಕಲಾಲ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿರುವ “ಸ್ಮಾರ್ಟ್ ಗ್ರೀನ್ ಹೌಸ್ ಫಾರ್ಮಿಂಗ್” ಪ್ರಾಜೆಕ್ಟ್ ಬೆಂಗಳೂರಿನ ಕ್ವೆಸ್ಟ್ ಗ್ಲೋಬಲ್ ಸರ್ವಿಸ್ ಪ್ರೈ. ಲಿ. ಅವರು ಆಯೋಜಿಸಿರುವ ಪ್ರಾಜೆಕ್ಟ್ ಪ್ರದರ್ಶನ ಸ್ಪರ್ಧೆ ” ಇಂಗೆನಿಯಂ -2023″ ಆಯ್ಕೆಗೊಂಡಿದೆ.
ದೇಶದಾದ್ಯಂತ 1300 ಹೆಚ್ಚು ಪ್ರಾಜೆಕ್ಟ್ ಗಳಲ್ಲಿ ಅತ್ಯುತ್ತಮ 10 ಪ್ರಾಜೆಕ್ಟ್ ಪ್ರದರ್ಶನಗೊಳ್ಳಲಿದ್ದು, ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಇದರಲ್ಲೊಂದಾಗಿದೆ.
ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಾಜೆಕ್ಟ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಹರ್ಷ ತಂದಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಲೋಕುರ್ ಹೇಳಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ಯೋಜನಾ ಕಾರ್ಯವು ಮನ್ನಣೆ ಗಳಿಸಿರುವುದಕ್ಕೆ ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಡಾ. ಮಹೇಂದ್ರ ದೀಕ್ಷಿತ್, ಪೆÇ್ರ ರಜತ್ ಆಚಾರ್ಯ ಮತ್ತು ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿ, ಸ್ಪರ್ಧೆಯಲ್ಲಿ ವಿಜಯಶಾಲಿಯಾಗಲಿ ಎಂದು ಶುಭ ಹಾರೈಸಿದ್ದಾರೆ.