
ದಾವಣಗೆರೆ. ಮಾ.೨೪; ಮೈಸೂರಿನಲ್ಲಿ ನಡೆದ 36ನೇ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಮಧು ಎ.ಜಿ. ಮಾಸ್ಟರ್ ವಿಭಾಗದಲ್ಲಿ ಭಾಗವಹಿಸಿ 1 ಚಿನ್ನ ಮತ್ತು 1 ಬೆಳ್ಳಿಯ ಪದಕ ಪಡೆದು ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾರೆ. ಮಧು ಎ.ಜಿ. ಇದೇ ತಿಂಗಳು 31 ರಿಂದ ಏಪ್ರಿಲ್ 10 ರವರೆಗೆ ಚಂಡೀಘಡದ ಮೊಹಾಲಿಯಲ್ಲಿ ನಡೆಯಲಿರುವ 58ನೇ ರಾಷ್ಟ್ರಮಟ್ಟದ ಚಾಂಪಿಯನ್ಶಿಪ್ಗೆ ರಾಜ್ಯದಿಂದ ಪ್ರತಿನಿಧಿಸುತ್ತಿರುವ ಮಧು ಎ.ಜಿ. ಇವರಿಗೆ ನ್ಯೂ ದಾವಣಗೆರೆ ಜಿಲ್ಲೆ ರೋಲರ್ ಸ್ಕೇಟಿಂಗ್ ಅಸೋಸಿಯೆಷನ್ನ ಪ್ರಧಾನ ಕಾರ್ಯದರ್ಶಿ ಮತ್ತು ಕೋಚ್ ನಿರಂಜನ ಬಾಬು ಅಸೋಸಿಯೆಷನ್ನ ಪರವಾಗಿ ಶುಭಕೋರಿದ್ದಾರೆ.