ರಾಷ್ಟ್ರ ಮಟ್ಟದ ಯುವಾನ ಸ್ಕೌಟ್ ನೇರ ಕಾರ್ಯಕ್ರಮಕ್ಕೆ ಆಯ್ಕೆ

ಪುತ್ತೂರು, ಜ.೧೨- ವಿವೇಕಾನಂದರ ಜನ್ಮ ದಿನದ ಅಂಗವಾಗಿ ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಇದರ ವತಿಯಿಂದ ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿರುವ ರಾಷ್ಟೀಯ ಯುವ ದಿನದ ಪ್ರಯುಕ್ತ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯವರು ನಡೆಸಿದ ಯುವಾನ ಸ್ಕೌಟ್ ಚಟುವಟಿಕೆಯಲ್ಲಿ ಯುವ ಟ್ಯಾಲೆಂಟ್ ಹಬ್ ೭ ದಿನಗಳ ಕಾರ್ಯಕ್ರಮದಲ್ಲಿ ರಾಜ್ಯ ಪುರಸ್ಕಾರ ಸ್ಕೌಟ್ ನಿಶ್ಚಲ್. ಕೆ. ಜೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಾನದ ರಾಷ್ಟ್ರ ಮಟ್ಟದ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿರುತ್ತಾರೆ.
ಮಂಗಳವಾರ ನಡೆಯುವ ರಾಷ್ಟ್ರಮಟ್ಟದ ಯುವಾನ ಆನ್ಲೈನ್ ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯುವಾನದ ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಆಯ್ಕೆಯಾದ ೭ ಅತ್ಯುತ್ತಮ ಪ್ರದರ್ಶನಕಾರರಲ್ಲಿ, ಯೋಗ ಪ್ರದರ್ಶನ ವಿಭಾಗದಲ್ಲಿ ನಿಶ್ಚಲ್ .ಕೆ.ಜೆ ಆಯ್ಕೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾಗಿರುತ್ತಾನೆ. ಈತ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ. ಈತ ನೆಹರು ನಗರದಲ್ಲಿ ನಿವಾಸಿ ಜನಾರ್ದನ ಗೌಡ ಹಾಗೂ ಜ್ಯೋತಿಯವರ ಸುಪುತ್ರ. ಸ್ಕೌಟ್ ತರಬೇತಿಯನ್ನು ಮಹೇಶ್ ಬಲ್ಲಾಳ್ ನೀಡಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.