ರಾಷ್ಟ್ರ ಮಟ್ಟದ ಕರಾಟೆಯಲ್ಲಿ ಉತ್ತಮ ಸಾಧನೆ

ತಾಳಿಕೋಟೆ :20:ಪಟ್ಟಣದ ಮೈಲೇಶ್ವರ ಕ್ರಾಸ್‍ನಲ್ಲಿರುವ ಬ್ರಿಲಿಯಂಟ್ ಆಂಗ್ಲ ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಡಿಸೆಂಬರ್ ತಿಂಗಳಿನ ದಿನಾಂಕ 28 ರಿಂದ 31 ರವರೆಗೆ ಗೋವಾ ರಾಜ್ಯದ ಮಡಗಾಂವನ ಮನೋಹರ ಪರಿಕ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 17ನೇ ರಾಷ್ಟ್ರಮಟ್ಟದ ಮಾಟ್ಸೋಗಿ-ಡು ಚಾಂಪಿಯನ್ ಷಿಪ್- 2022ರ ಕರಾಟೆಯಲ್ಲಿ ಉತ್ತಮ ಸಾಧನೆಗೈದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

   ಬಸವಂತ್ರಾಯಗೌಡ ಬಿರಾದಾರÀ(+35 ಕೆಜಿ ಫೈಟ್ ವಿಭಾಗದಲ್ಲಿ ಚಿನ್ನದ ಪದಕ), ಆಕಾಶ ಟಣಕೇದಾರ (54 ಕೆಜಿ ಫೈಟ್ ವಿಭಾಗದಲ್ಲಿ ಬೆಳ್ಳಿ ಪದಕ), ಆಕಾಶ ಅಂಗಡಿ (+38 ಕೆಜಿ ಫೈಟ್ ವಿಭಾಗದಲ್ಲಿ ಕಂಚಿನ ಪದಕ), ಕಥಾ ವಿಭಾಗದಲ್ಲಿ ಸುಮಂತ ನಡುವಿನಮನಿ (64 ಕೆಜಿ ಕಥಾ ವಿಭಾಗದಲ್ಲಿ ಕಂಚಿನ ಪದಕ, ಪ್ರಜ್ವಲ್ ಚಿತ್ತಾಪುರ (42 ಕೆಜಿ ಕಥಾ ವಿಭಾಗದಲ್ಲಿ ಕಂಚಿನ ಪದಕ, ಸಂತೋಷ ಹುಡೇದ (58 ಕೆಜಿ ಕಥಾ ವಿಭಾಗದಲ್ಲಿ ಕಂಚಿನ ಪದಕ) ಪಡೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ.
 ವಿದ್ಯಾರ್ಥಿಗಳ ಸಾಧನೆಗೆ ಶ್ರಮಿಸಿದ ನಮ್ಮ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸ.ವಿಜ್ಞಾನ ಶಿಕ್ಷಕರು ಹಾಗೂ ಕರಾಟೆ ತರಬೇತುದಾರರಾದ ಲಕ್ಷ್ಮಣ ಪಿರಂಗಿ ಗುರುಗಳಿಗೆ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸರ್ವ ಆಡಳಿತ ಮಂಡಳಿ ಮತ್ತು ಬ್ರಿಲಿಯಂಟ್ ಶಾಲೆಯ ಮುಖ್ಯ ಗುರುಗಳು ಹಾಗೂ ಎಲ್ಲಾ ಗುರು ವೃಂದದವರು ಶ್ಲಾಘಿಸಿದ್ದಾರೆ.