ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶೀಪ್‍ನಲ್ಲಿ ಆಯಾ ವರ್ಗಗಳಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತಿಯಸ್ಥಾನ ಪಡೆದ ವಿಜೇತರಿಗೆ ಸನ್ಮಾನ

ವಿಜಯಪುರ :ಡಿ.1: ಸ್ಟಾರ್ ಬುಡೊಕಾನ್ ಕರಾಟೆ ಕ್ಲಬ್ಬಿನ ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ಇತ್ತಿಚಿಗೆ ನಡೆದ, 27,28-11-2021 ರಂದು ಸಾಲಿನ 3ನೇ ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶೀಪ್‍ನಲ್ಲಿ ಆಯಾ ವರ್ಗಗಳಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತಿಯಸ್ಥಾನ ಪಡೆದು ವಿಜೇತರಾಗಿದ್ದಾರೆ.
ಕುಮಾರ ಮುತ್ತಪ್ಪ ಎಸ್. ಲಿಂಗದಳ್ಳಿ ವಿಜಯಪುರ ಜಿಲ್ಲೆಯ ಭಾರತ ಮೀಸಲು ಪಡೆ (Iಟಿಜiಚಿ ಖeseಡಿve ಃಚಿಣಣಚಿಟioಟಿ)ಯಲ್ಲಿ ಪೊಲೀಸ್ ಪೆದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ
ಇವರು ಹಾಗೂ ಕುಮಾರ ಉಸ್ಮಾನಗನಿ ಎಮ್. ವಾಲಿಕಾರ ಇವರುಗಳು ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಕುಮಾರಿ ಸ್ವಾಲೇಹಾ ಎಮ್. ವಾಲಿಕಾರ ಎರಡು ಬೆಳ್ಳಿಯ ಪದಕವನ್ನು ಗಿಟ್ಟಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ಕುಮಾರಿ ಸಫೀಯಾ ಎಮ್. ವಾಲಿಕಾರ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆಂದು ತರಬೇತಿದಾರರಾದ ಮುಸ್ತಾಕಅಹ್ಮದ ಎಮ್. ವಾಲಿಕಾರ, ಕುಮಾರ ನಾಸೀರ ಮೊಹಮ್ಮದರಫೀಕ ಇಂಡಿಕರ ಮತ್ತು ಹಾಫೀಜ ಹುಸೇನ್ ಎಮ್. ಚಿಸ್ತಿ ಹರ್ಷವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.