ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಸ್ಥಾನಕ್ಕೆ ಮಿಂಚಿದ ಪ್ರಾಪ್ತಿ ಅರಳಿ

ಬೀದರ:ನ.2:ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು.ಪ್ರಾಪ್ತಿ ತಂದೆ ಡಾ.ಗೌತಮ ಅರಳಿ ಅವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತನ್ನ ರೇಂಜರಿಂಗ್‍ಗೆ ನೂರು ವರ್ಷ ಪೆÇರೈಸಿ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ‘ನನ್ನ ಕನಸು ನನ್ನ ಯೋಜನೆ’ ವಿಷಯದ ವಿಡಿಯೋ ಭಾಷಣದಲ್ಲಿ ರಾಷ್ಟ್ರಕ್ಕೆ ನಾಲ್ಕನೇ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬೀದರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇತ್ತಿಚೀಗೆ ನೀಟ್ ಪರಿಕ್ಷೆಯಾಗಿ ಇಲ್ಲಿಯ ಶಾಹಿನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ ರೆಡ್ಡಿ ರಾಷ್ಟ್ರಮಟ್ಟದಲ್ಲಿ 9ನೇ ರ್ಯಾಂಕ್ ಪಡೆದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಸಹ ನಮಗೆ ಅತ್ಯಂತ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್‍ನ ಜಿಲ್ಲಾ ಮುಖ್ಯ ಆಯುಕ್ತೆ ಗುರಮ್ಮ ಸಿದ್ದಾರೆಡ್ಡಿ ಪ್ರಶಂಸಿದ್ದಾರೆ.

ಕಾರ್ತಿಕ ರೆಡ್ಡಿ ಸಹ ಭಾರತ ಸ್ಕೌಟ್ಸ್ ಮತ್ತು ಗೈಡ್‍ನ ವಿದ್ಯಾರ್ಥಿ. ಹೀಗಾಗಿ ಈ ಎರಡು ಮುತ್ತುಗಳು ಜಿಲ್ಲೆಯ ಕೀರಿಟ, ಅದರಲ್ಲೂ ಸ್ಕೌಟ್ಸ್ ಮತ್ತು ಗೈಡ್‍ನ ಕೀರ್ತಿ ಹೆಚ್ಚಿಸಿದ್ದಕ್ಕೆ ಮನಪೂರ್ತಿ ಅಭಿನಂದಿಸುವುದಾಗಿ ಸಿದ್ದಾರೆಡ್ಡಿ ಅಭಿಪ್ರಾಯ ಪಟ್ಟಿರುವರು.

ಅಂಕಗಳ ಬೆನ್ನು ಬಿದ್ದ ಪಾಲಕರು ಮಕ್ಕಳನ್ನು ನರ್ಸರಿಯಿಂದಲೇ ಒತ್ತಡ ತಂದು ಅವರ ಸುಂದರ ಬಾಲ್ಯವನ್ನು ಹಾಳು ಮಾಡುತ್ತಿದ್ದಾರೆ. ಮಾನವೀಯ ಮೌಲ್ಯಗಳನ್ನು ಬಿತ್ತುವ ಸ್ಕೌಟ್ಸ್ ಮತ್ತು ಗೈಡ್ಸ್ ದಳದಲ್ಲಿ ಪ್ರತಿ ಮಗುವಿಗೆ ತರಬೇತಿ ಕೊಡಿಸಿದರೆ ಮುಂದೆ ಅವರು ಪರಿಪೂರ್ಣ ವ್ಯಕ್ತಿಗಳಾಗಿ ದೇಶದ ಸಂಪತ್ತು ಆಗುತ್ತಾರೆ. ‘ಸ್ಕೌಟನಲ್ಲಿ ಸೇರುವುದರಿಂದ ಸಮಯ ವ್ಯರ್ಥವಾಗಿ ಅಂಕಗಳು ಕಡಿಮೆ ಬರುತ್ತದೆ’ ಎಂಬ ಪಾಲಕರ ಮತ್ತು ಶಿಕ್ಷಣ ಸಂಸ್ಥೆಗಳ ಮನೋಭಾವನೆಯನ್ನು ಈ ಇಬ್ಬರು ವಿದ್ಯಾರ್ಥಿಗಳು ಸುಳ್ಳು ಮಾಡಿ ತೋರಿಸಿದ್ದಾರೆ. ಇವರಿಬ್ಬರು ಪ್ರಾಥಮಿಕ ಹಂತದಿಂದಲೇ ಸ್ಕೌಟ್ ಗೈಡ್ಸಗಳಾಗಿದ್ದು ಜೀವನದ ಸಂಪೂರ್ಣ ಬಾಲ್ಯವನ್ನು ಆನಂದಿಸಿ, ಅನುಭವಿಸಿ ಈಗ ತನ್ನ ಮನೆ, ಶಾಲೆ, ಜಿಲ್ಲೆ ,ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು.

213 ರಾಷ್ಟ್ರಗಳಲ್ಲಿ ವ್ಯಾಪಿಸಿರುವ ಸ್ಕೌಟ್ಸ್ ಗೈಡ್ಸ ಸಂಸ್ಥೆ ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಲು 18 ವರ್ಷ ದಾಟಿದವರಿಗೆ ರೇಂಜರ್ಸ್ ವಿಭಾಗ ಪ್ರಾರಂಭಿಸಿ ನೂರು ವರ್ಷ ಪೂರೈಸಿದ ನೆನಪಿಗಾಗಿ ‘ನನ್ನ ಕನಸು ನನ್ನ ಯೋಜನೆ’ ಎಂಬ ವಿಡಿಯೋ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ ಬೀದರ್ ಜಿಲ್ಲೆಯ ವಿದ್ಯಾರ್ಥಿನಿ ಪ್ರಾಪ್ತಿ ಅರಳಿ ವಿವಿಧ ರಾಜ್ಯಗಳ 1000 ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ದಿಸಿ, ಕೊನೆಯ ಸುತ್ತಿನ ಸ್ಪರ್ಧೆಯಲ್ಲಿ ರಾಷ್ಟ್ರಕ್ಕೆ ನಾಲ್ಕನೆ ಸ್ಥಾನ ಗಿಟ್ಟಿಸಿದ್ದಕ್ಕಾಗಿ ಪದವಿಪೂರ್ವ ಕಾಲೇಜಿನ ಉಪನಿರ್ದೇಶಕ ರಮೇಶ್ ಬೇಜಗಂ, ಜ್ಞಾನಸುಧಾ ವಿದ್ಯಾಲಯ ಅಧ್ಯಕ್ಷೆ ಪೆÇ್ರ. ಪೂರ್ಣಿಮಾ ಜಾರ್ಜ್, ಸ್ಕೌಟ್ ಆಯುಕ್ತ ಶಿವಕುಮಾರ ಸ್ವಾಮಿ, ಗೈಡ್ ಆಯುಕ್ತೆ ಲೀಲಾವತಿ ಚಕೋತೆ, ಕಾರ್ಯದರ್ಶಿ ಡಾ. ಭರಶೆಟ್ಟಿ ಜಿಲ್ಲಾ ಸಂಘಟಕರಾದ ರಾಚಯ್ಯ ನಾಸಿ, ಕೆ.ಎಸ್ ಚಳಕಾಪುರೆ ಈ ಎರಡು ರತ್ನಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.