
ಔರಾದ :ಆ.1: ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ರವಿವಾರ ಸೋಯಾಬೀನ್ ಬೆಳೆಗೆ ಕೀಟನಾಶಕ ಹೋಡೆಯುವಾಗ ಪೆÇೀದೆಯೂಂದರಲ್ಲಿ ರಾಷ್ಟ್ರೀಯ ಪಕ್ಷಿ ನವಿಲನ್ನು ನರಳುವುದನ್ನು ಕಂಡ ಸಹೋದರ ಫಯಾಜ್ ಪರಿಸರ ಪ್ರೇಮಿ ರಿಯಾಜಪಾಶಾ ಕೊಳ್ಳೂರ ಅವರಿಗೆ ತೋರಿಸಿದ್ದು ತಕ್ಷಣ ನವಿಲನ್ನು ನೋಡಿ ಹಿಡಿದು ಹಾರಕ್ಕಾಗದೆ ಒದ್ದಾಡುತಿತ್ತು ಇದನ್ನು ಮನಗಂಡು
ತಕ್ಷಣ ಚಿಕಿತ್ಸೆಗೆಂದು ಔರಾದ್ ಪಶು ಆಸ್ಪತ್ರೆಗೆ ತೆರಳಿದರೆ ರವಿವಾರದ ಕಾರಣ ಮದ್ಯಾಹ್ನ ವೈದ್ಯರು ಇರಲಿಲ್ಲ ಅಲ್ಲಿಂದ ನೇರವಾಗಿ ಬೀದರನ ಕಮಠಾಟಪಣದ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ನವಿಲಿಗೆ ಸಕಾಲಕ್ಕೆ ಪ್ರಧಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಸಂತಪೂರ ಒಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.