ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದು

ಭಾಲ್ಕಿ :ಡಿ.20:ಮಹಿಳೆಯರಿಗೆ ಗುಣ ಮಟ್ಟದ ಶಿಕ್ಷಣ ಕೋಡುವುದರ ಮುಖಾಂತರ ಆಯಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿ ರಾಷ್ಟ್ರ ಮಟ್ಟದಲ್ಲಿ ಮಹಿಳೆಯ ಪಾತ್ರ ದೊಡ್ಡದು ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯವರಾದ ಅಂಕುಶ ಢೋಲೆ ನುಡಿದರು. ಭಾಲ್ಕಿ ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಸಂಚಾಲಿತ ಅಕ್ಕಮಹಾದೇವಿ ಕನ್ಯಾ ಪದವಿ ಪೂರ್ವ ಕಾಲೇಜು ಭಾಲ್ಕಿಯಲ್ಲಿ ಹಮ್ಮಿಕೊಂಡಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಶಿಕ್ಷಣದಿಂದ ಮಾತ್ರ ಸ್ವಾಲಂಬನೆಯ ಬದುಕು ಪಡೆದು ಕುಟುಂಬ, ಸಮಾಜ ದೇಶ ಅಭಿವೃದ್ಧಿಯಲ್ಲಿ ಅವರ ಪಾತ್ರ ದೊಡ್ಡದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಭಾಲ್ಕಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಜಹರ ಹುಸೇನ ಭಾರತದ ಇತಿಹಾಸದಲ್ಲಿ ಹೆಣ್ಣು ಮಕ್ಕಳಿಗೆ ಗೌರವದ ಸ್ಥಾನ ಇದೆ. ಲೋಕನಾಯಕ ಡಾ: ಶ್ರೀ. ಭೀಮಣ್ಣಾ ಖಂಡ್ರೆಯವರು ಈ ಭಾಗದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲಾ/ ಕಾಲೇಜು ಪ್ರಾರಂಭಿಸಿದುವುದರ ಮುಖಾಂತರ ಹೆಣ್ಣು ಮಕ್ಕಳ ಎಳಿಗೆಯಲ್ಲಿ ಅವರ ಪಾತ್ರ ಬಹಳ ಮಹತ್ವದಾಗಿದೆ ಎಂದು ನುಡಿದರು. ಹಣಮಂತ ಕಾರಾಮುಂಗೆ ಮತ್ತು ದಯಾನಂದ ಬೆಂಬುಳಗೆ ಮಾತನಾಡಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿರುವ ಪ್ರೌಢ ಶಾಲೆಯ ಸಿಬ್ಬಂದಿಯವರಾದ ಸಹದೇವ ಗೌಡಗಾಂವೆ ಸಿ.ಇ.ಒ, ಅರುಣಾಬಾಯಿ ಮುಖ್ಯ ಗುರುಗಳು, ಸುವರ್ಣಾ ಸೋನಕೇರೆ, ಸವಿತಾ ಬಡೂರೆ, ಶಿವನಗೌಡಾ ಜಾಗೀರದಾರ ,ಅಡೆಪ್ಪ ಮಳಚಾಪುರೆ, ಸುನೀಲಕುಮಾರ ಶಿವಶಂಕರ ಪಾಟೀಲ, ಸುಮಿತಕುಮಾರ ಗಾಯಕವಾಡ ಸಂಜೀವ ಪಿ. ಉಪಾಸೆ ಕೃಷ್ಣಕಾಂತ ಪ್ರಕಾಶ ಎಲ್ಲರಿಗೂ ಗೌರವಿಸಲಾಯಿತು. 2023ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಕಾಲೇಜಿಗೆ ಕಿರ್ತಿ ತಂದಂತಹ ವಿದ್ಯಾರ್ಥಿನಿಯರು, ಕಲಾ ವಿಭಾಗದಲ್ಲಿ ಅಂಜಲಿ ತಂದೆ ಬಾಬುರಾವ, ಸೋನಿ ತಂದೆ ಸುಭಾಷ, ಪ್ರತಿಕ್ಷಾ ತಂದೆ ವೆಂಕಟ, ಸಾವಿತ್ರಾ ತಂದೆ ಧೊಂಡಿಬಾ ನಂದಿನಿ ತಂದೆ ರವಿಂದ್ರ, ರಾಧಿಕಾ ತಂದೆ ಶಿವಕುಮಾರ, ಅಶ್ವೀನಿ ತಂದೆ ಮಹಾದೇವ, ಚೈತನ್ಯ ತಂದೆ ವಿಶ್ವನಾಥ ,
ವಾಣಿಜ್ಯ ವಿಭಾಗದಲ್ಲಿ ಜೈಶ್ರೀ ತಂದೆ ಮಹಾದೇವ, ಮಹಾನಂದಾ ತಂದೆ ಗಣಪತರಾವ , ಸಾಧನಾ ತಂದೆ ಉಮಾಕಾಂತ, ಅಂಜಲಿ ತಂದೆ ಸುಭಾಷ, ರೀತಿಕಾ ತಂದೆ ಮಹಾದೇವ, ಆವುಬಾಯಿ ತಂದೆ ಚಂದ್ರಕಾಂತ , ನಂದಿನಿ ತಂದೆ ವೀರಶೆಟ್ಟಿ , ರಾಧಿಕಾ ತಂದೆ ನಿವರ್ತಿ, ಬಬೀತಾ ತಂದೆ ಬಾಲಾಜಿ , ಯೋಗಿತಾ ತಂದೆ ಮಹಾದೇವ , ರಾಧಿಕಾ ತಂದೆ ಮುರ್ಲಿಧರ , ವರ್ಷಾ ತಂದೆ ವೆಂಕಟ ಭವಾನಿ ತಂದೆ ಭಗವಾನ ವಿದ್ಯಾರ್ಥಿನಿಯರಿಗೆ ವಿಶೇಷ ಸತ್ಕರಿಸÀಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಧೊಂಡಿಬಾ ಎಸ್. ಭುಜಂಗೆ ಅದ್ಯಕ್ಷತೆ ವಹಿಸಿ ಮಾತನಾಡಿದರು.. ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಸ್ವಾತಿ ತಂದೆ ವೀರಶೆಟ್ಟಿ ,ಭಾಗ್ಯಶ್ರೀ ತಂದೆ ನರಸಿಂಗ, ಅನೀತಾ ತಂದೆ ಪ್ರಭು ,ಅಂಬಿಕಾ ತಂದೆ ರವಿ, ವಿಜಯಮಾಲಾ ತಂದೆ ಸುಭಾಷ,ಭಾಗ್ಯವಂತಿ ತಂದೆ ವೆಂಕಟ, ಲಕ್ಷ್ಮೀಬಾಯಿ ತಂದೆ ಮಲ್ಲಪ್ಪ , ಶೀತಲ್ ತಂದೆ ಅರ್ಜುನ , ಐಶ್ವರ್ಯಾ ತಂದೆ ರಾಜಕುಮಾರ ,ನಂದಿನಿ ತಂದೆ ಬಾಬುಸಿಂಗ, ಪ್ರತೀಕ್ಷಾ ತಂದೆ ಪ್ರಕಾಶ , ಅಂಜನಾ ತಂದೆ ಸಂಜುಕುಮಾರ, ನವೀನಾ ತಂದೆ ಬಸವರಾಜ , ಸುವರ್ತಾ ತಂದೆ ಕನೀಲ, ಮೋನಿಕಾ ತಂದೆ ಓಂಕಾರÀ, ಸೋನಮ್ಮ ತಂದೆ ಮರಗೆಪ್ಪ, ಪೂಜಾ ತಂದೆ ಮಲ್ಲಿಕಾರ್ಜುನ, ಭವಾನಿ ತಂದೆ ಶಿವಕುಮಾರ ನೇಹಾ ತಂದೆ ರಮೇಶ, ಅಶ್ವೀನಿ ತಂದೆ ಸಂತೋಷ, ಐಶ್ವರ್ಯಾ ತಂದೆ ಪಿರಪ್ಪ , ಸಂಗೀತಾ ತಂದೆ ರತನ,
ಸುಜಾತಾ ತಂದೆ ಬಸಪ್ಪ , ರೇಣುಕಾ ತಂದೆ ದತ್ತು, ನೈನಾ ತಂದೆ ನರಸಿಂಗ, ಶೀಲಾ ತಂದೆ ಚಂದ್ರಕಾಂತ , ರಾಧಿಕಾ ತಂದೆ ಸೂರ್ಯಕಾಂತ, ರಾಜೇಶ್ರೀ ವೆಂಕಟ. ಎಲ್ಲಾ ಕ್ರೀಡಾ ಪಟುಗಳಿಗೂ ಸನ್ಮಾನಿಸಲಾಯಿತು. ಕಾಲೇಜಿನ ಸಿಬ್ಬಂದಿವರ್ಗದವರಾದ ಸಂಜಿವ ಪಿ.ಸೂರ್ಯವಂಶಿ, .ಸಾಬೇರ ಪಟೇಲ ದೀಪಕ ಸಾವರೆ ಶರಣಗೌಡ ಜಿ.ಪಾಟೀಲ , ಅಂಜನಾದೇವಿ ಬೇಲೂರೆ, ಸುಮಿತ್ರಾ ಬಿರಾದಾರ ರಾಜಶೇಖರಯ್ಯಾ ಎಸ್. ಸ್ವಾಮಿ ಅಶ್ವೀನಿ ಸಿ.ಸೀತಾ ಸಂತೋಷಕುಮಾರ ರಾಜಭವನ ಧನರಾಜ ಎಸ್. ಮೆಂಗಾ , ನಾಗಶೆಟ್ಟಿ ಮುಕ್ತಾ , ಉಮಾಕಾಂತ ಗುಬ್ಬೆ , ಸಂಗಮೇಶ್ ಪಾಟೀಲ, ಲತಾ ಹಾಗೂ ಪ್ರೌಢ ಶಾಲೆಯ ಎಲ್ಲಾ ಸಿಬ್ಬಂದಿವರ್ಗದವರ ಭಾಗವಹಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಯಿತು. ಇದಕ್ಕೂ ಮುನ್ನ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಪ್ರಾರ್ಥನೆ ಗೀತೆ ಕು.ಪವಿತ್ರಾ ಹಾಡಿದರು. ಸ್ವಾಗತ ಗೀತೆ ರಾಧಿಕಾ ಮತ್ತು ಜ್ಯೋತಿ ಹಾಡಿದರು. ಉಪನ್ಯಾಸಕರಾದ ಓ.ಕೆ.ಸೂರ್ಯವಂಶಿ ಸ್ವಾಗತ ಮತ್ತು ಪ್ರಸ್ತಾವಿಕ ನುಡಿದರು. ಉಪನ್ಯಾಸಕರಾದ ಭೀಮರಾವ ಗಿರಿ ಇವರು ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕರಾದ ವಿಜಯಕುಮಾರ ವಾರದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಸಂಚಾಲಿತ ಅಕ್ಕಮಹಾದೇವಿ ಕನ್ಯಾ ಪದವಿ ಪೂರ್ವ ಕಾಲೇಜು ಭಾಲ್ಕಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತಾಧಿಕಾರಿಂiÀiವರಾದ ಅಂಕುಶ ಢೋಲೆ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಮಜಹರ ಹುಸೇನ ಮತ್ತು ಮುಂತಾದವರು ಇದ್ದರು.