ರಾಷ್ಟ್ರ ಧ್ವಜದ ಮಹತ್ವ ಮಕ್ಕಳಿಗೆ ತಿಳಿಸಿಕೊಡಬೇಕು

 ಚಿತ್ರದುರ್ಗ. ಏ.೨; ಪ್ರಪಂಚದಾದ್ಯಂತ ದೇಶಗಳು ಸ್ವಾತಂತ್ರ ಹೊಂದಿದಾಗ ಅವರದೇ ಆದ ರಾಷ್ಟ್ರಧ್ವಜ, ರಾಷ್ಟ್ರ ಲಾಂಛನಗಳನ್ನು ಕಂಡುಕೊಂಡವು. ಅದೇ ರೀತಿ ಭಾರತವು ಸಹ ವಿಭಿನ್ನವಾಗಿ ಯೋಚಿಸಿ, ಗಾಂಧೀಜಿಯವರ ಚಿಂತನೆಗಳನ್ನು ಅಳವಡಿಸಿ ಚರಕವನ್ನು ಬಳಸಿಕೊಂಡು ರಾಷ್ಟ್ರಧ್ವಜದ ಕರಡುಪ್ರತಿ ತಯಾರಾಯಿತು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆದೇಹಳ್ಳಿ ಅಯೋಜಿಸಿದ್ದ ರಾಷ್ಟ್ರ ಧ್ವಜದ ಕರಡು ನಕ್ಷೆ ತಯಾರಾಗಿ ನೂರು ವರ್ಷದ ನೆನಪಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ರಾಷ್ಟ್ರಧ್ವಜವು ಗ್ರಾಮೀಣ ಜನರ ಕೈಯಲ್ಲಿ ತಯಾರಾಗಿರಬೇಕು, ಚರಕದಿಂದ ಎಂಬ ಕಲ್ಪನೆ ಗಾಂಧೀಜಿಯವರ ಮನಸ್ಸಿನಲ್ಲಿ ಮೂಡಿತ್ತು, ಅದರಂತೆ ನಮ್ಮ ರಾಷ್ಟ್ರಧ್ವಜವು ಗುಡಿಕೈಗಾರಿಕೆಯ ಸಂಕೇತವಾಗಿ, ಗ್ರಾಮೀಣ ಜನರ ಅಭಿ ವೃದ್ಧಿಯ ಸಂಕೇತವಾಗಿ, ಬಡತನ ನಿವಾರಣೆಗಾಗಿ, ಚರಕದಿಂದ ಮಾಡಲ್ಪಟ್ಟಿತು. ಇದರ ಮುಖ್ಯ ಉದ್ದೇಶ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದು, ಅವರ ಏಳಿಗೆಗೋಸ್ಕರ ಶ್ರಮಿಸುವುದು, ಗ್ರಾಮಗಳ ಶೋಷಣೆ ತಪ್ಪಿಸುವುದು, ಅಸಮಾನತೆಯನ್ನು ನಿವಾರಿಸುವುದು ಎಂದರು. ಅಶೋಕ ಚಕ್ರ ಮತ್ತು ಚರಕ ಇವೆರಡರಲ್ಲಿ ಯಾವುದು ಹೆಚ್ಚು ಜನರಿಗೆ ಆತ್ಮೀಯವಾಗಿತ್ತು ಎಂಬುದನ್ನು ಆಚಾರ್ಯ ವಿನೋಬಾ ಭಾವೆ ಅವರು ತಮ್ಮ ಪುಸ್ತಕದಲ್ಲಿ ಪ್ರಸ್ತುತಪಡಿಸುತ್ತಾರೆ, ದಿನನಿತ್ಯ ಬಳಕೆಗೆ, ಅವರ ಬದುಕಿಗೆ ಆಸರೆಯಾಗಿದ್ದ ಚರಕ, ಜನರ ಬಳಿ ಈಗಲೂ ಸಹ ಕೆಲಸ ಮಾಡುತ್ತಿದ್ದು. ಅದನ್ನ ಗಾಂಧೀಜಿಯವರು ಮೆಚ್ಚಿಕೊಂಡು ರಾಷ್ಟçಧ್ವಜದಲ್ಲಿ ಸೇರಿಸಿದ್ದರು. ಈಗಲೂ ಸಹ ಗ್ರಾಮೀಣ ಜನರು ಬಡತನದಲ್ಲೇ ಬಳಲುತ್ತಿದ್ದು, ರಾಷ್ಟçಧ್ವಜ ತಯಾರಿಸುವ ಜನರ ಬದುಕು ಇನ್ನೂ ಅತಂತ್ರವಾಗಿಯೇ ಉಳಿದಿದೆ. ಹಾಗಾಗಿ ಪ್ರತಿಯೊಬ್ಬರು ಸಹ ರಾಷ್ಟçಧ್ವಜದ ನೆನಪಿನಲ್ಲಾದರೂ ನಾವು ಬಡತನ ನಿವಾರಣೆ ಗೋಸ್ಕರ ನಾವು ಶ್ರಮಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಕೊನೆಯ ಭಾಗದಲ್ಲಿ ವಿದ್ಯಾರ್ಥಿಗಳು ಕೈಯಿಂದ ಮಾಡಿದ ಕರವಸ್ತ್ರ ಕೊಂಡು ಖಾದಿಯ ನೆನಪನ್ನ, ರಾಷ್ಟ್ರçಧ್ವಜದ ನೆನಪನ್ನ ಮಾಡಿಕೊಂಡರು.
ಶಿಕ್ಷಕರಾದ ಜಿ. ಎನ್, ಅಜ್ಜಪ್ಪ ಹಾಜರಿದ್ದರು.