
ವಾಡಿ: ನ.19:ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯ ಆಡಳಿತಾಧಿಕಾರಿಗಳು ದೇಶದ ತ್ರೀವರ್ಣ ಭಾವುಟಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ ಪ್ರಸಂಗ ನಡೆದಿದೆ.
ವಿಶ್ವಕಪ್ ಕ್ರೀಕೇಟ್ ಪಂಧ್ಯದ ನೇರ ಪ್ರಸಾರವನ್ನು ವೀಕ್ಷಿಸಲು ಎಸಿಸಿ ವತಿಯಿಂದ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬ ಸಂದೇಶದ ಜತೆಗೆ ಮುದ್ರಿಸಲಾದ ತ್ರೀವರ್ಣ ಭಾವುಟದ ಚಿತ್ರದಲ್ಲಿ ಹಸಿರು ಮೇಲಾಗಿ ಕೇಸರಿ ಕೆಳಗಾಗಿರುವುದನ್ನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನ್ನು ಗಮನಿಸಿದ ಬಿಜೆಪಿ ಮುಖಂಡರು, ಏಕಾಏಕಿ ಎಸಿಸಿ ಕಂಪನಿಯ ಮುಖ್ಯ ದ್ವಾರದಲ್ಲಿ ಜಮಾಯಿಸುವ ಮೂಲಕ ಅದಾನಿ ಗ್ರೂಪ್‍ನ ಎಸಿಸಿ ಆಡಳಿತಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲೂ ರಾಷ್ಟ್ರ ಧ್ವಜವನ್ನು ಕೆಳಮುಖವಾಗಿ ಹಾರಿಸಿ ಎಸಿಸಿಯವರು ಅಪಮಾನ ಮಾಡಿದ್ದರು. ಈಗ ಪುನಃಹ ಅಪಮಾನದ ಕೃತ್ಯ ಎಸಗಿದ್ದಾರೆ. ದೇಶದ ಭಾವುಟ ಹೇಗಿದೆ ಎಂಬುದರ ಕನಿಷ್ಠ ಜ್ಞಾನ ಎಸಿಸಿಯ ಇಂಜಿನೀಯರ್‍ಗಳಿಗೆ ಇಲ್ಲ. ಕಾರ್ಯಕ್ರಮಗಳ ವ್ಯವಸ್ಥೆ ಮಾಡುವ ಎಚ್‍ಆರ್ ವಿಭಾಗದ ಮುಖ್ಯಸ್ಥರಿಗೂ ಕೇಸರಿ ಬಿಳಿ ಹಸಿರು ಬಣ್ಣದ ಮೌಲ್ಯ ಗೊತ್ತಿಲ್ಲ. ರಾಷ್ಟ್ರ ಭಾವುಟಕ್ಕೆ ಇರುವ ಗೌರವದ ಅರಿವು ಇವರಿಗಿಲ್ಲ. ಇಂಥಹ ದೇಶದ್ರೋಹಿಗಳನ್ನು ತಕ್ಷಣ ಬಂಧಿಸಿ ಜೈಲಿಗಟ್ಟಬೇಕು ಎಂದು ಪಟ್ಟು ಹಿಡಿದರು.
ಕಂಪನಿಯ ಮುಖ್ಯದ್ವಾರ ಪ್ರವೇಶಿಸದಂತೆ ತಡೆಯಲಾಗಿದ್ದರಿಂದ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು, ಪದೇಪದೆ ಎಸಿಸಿಯವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸದೇ ಜಾಗ ಬಿಟ್ಟು ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸ್ ಠಾಣೆಗೆ ತೆರಳಿ ಎಸಿಸಿ ಕಂಪನಿಯ ಘಟಕ ವ್ಯವಸ್ಥಾಪಕ, ಎಚ್‍ಆರ್ ಮುಖ್ಯಸ್ಥ ಸೇರಿದಂತೆ ವಿವಿಧ ಅಧಿಕಾರಿಗಳ ವಿರುದ್ಧ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪಿಎಸ್‍ಐ ತಿರುಮಲೇಶ ಕುಂಬಾರ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್‍ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ ದಹಿಹಂಡೆ, ಮುಖಂಡರಾದ ರವಿ ಕಾರಬಾರಿ, ಜಗತಸಿಂಗ್ ರಾಠೋಡ, ಹೀರಾ ನಾಯಕ, ಅಭಿಷೇಕ ರಾಠೋಡ, ಸಿದ್ಧೇಶ್ವರ ಚೋಪಡೆ, ಬಾಬು ಕುಡಿ, ಭರತ್ ರಾಠೋಡ, ವಿಶ್ವ ತಳವಾರ, ಬಾಬು ಗುತ್ತೇದಾರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.