ರಾಷ್ಟ್ರ ಕವಿ ಕುವೆಂಪು ಜನ್ಮ ದಿನ ಆಚರಣೆ

ಕೋಲಾರ,ಡಿ.೩೦: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಕೋಲಾರ ಜಿಲ್ಲಾ ಘಟಕದ ವತಿಯಿಂದ ನಗರದ ಕುವೆಂಪು ಪಾರ್ಕ್‌ನಲ್ಲಿರುವ ಕುವೆಂಪು ರವರ ಪುತ್ಥಳಿಗೆ ಮಲಾರ್ಪಣೆ ಮಾಡುವ ಮೂಲಕ ರಾಷ್ಟ್ರಕವಿ ಕುವೆಂಪು ಅವರ ೧೧೬ ನೇ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ಮಾತನಾಡಿ, ಕುವೆಂಪು ರವರು ವರ್ತಮಾನದ ನಿತ್ಯವನ್ನೂ, ತ್ರಿಕಾಲದ ಭವ್ಯವನ್ನೂ, ಒಂದು ಪೂರ್ಣ ದೃಷ್ಟಿಯಲ್ಲಿ ಒಳಗೊಳ್ಳಲು ಪ್ರಯತ್ನಿಸಿದ ತಪಸ್ವಿಗಳು. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ, ಕನ್ನಡದ ಮಹಾನ್ ಚೇತನ. ಕನ್ನಡ ನಾಡಿನ ಹೆಮ್ಮೆಯ ರಸಕವಿ ಕುವೆಂಪು ಅವರು. ಋಷಿಕವಿ, ರಾಷ್ಟ್ರಕವಿ ಕನ್ನಡದ ಮತ್ತೋರ್ವ ವರಕವಿಗಳಾದ ಬೇಂದ್ರೆಯವರಿಂದಲೇ ಯುಗದ ಕವಿ ಜಗದ ಕವಿ ಎಂದು ಕೆರಸಿಕೊಂಡವರು ಎಂದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ಶಾಂತಿಸಾಗರ್ ಮರೆ ಗೌಡ್ರು, ಕೃಷ್ಣೇಗೌಡ, ತಾಲ್ಲೂಕು ಅಧ್ಯಕ್ಷ ದಿಂಬ ನಾಗರಾಜಗೌಡ, ನಗರ ಗೌರವಾಧ್ಯಕ್ಷ ಅಗರ ಮುನಿಸ್ವಾಮಿ, ಅರಿನಾಗನಹಳ್ಳಿ ರಮೇಶ್, ಕ್ರಾಂತಿ ಯುವ ಮುಖಂಡ ನಡುಪಳ್ಳಿ ಉಲ್ಲಾಸ್, ಸೇನೆ ಜಿಲ್ಲಾ ಅಧ್ಯಕ್ಷ ಮಂಗಸಂದ್ರ ನಾಗೇಶ್, ಶರಣಪ್ಪ ಗಬ್ಬೂರ್, ನಾರಾಯಣಪ್ಪ, ಮದ್ದೇರಿ ಮುನಿರೆಡ್ಡಿ, ಸುಬ್ರಹ್ಮಣ್ಯ ಗೌಡ, ಲೋಕೇಶ್, ಚಲಪತಿ, ಶ್ರೀನಿವಾಸ್, ಸತೀಶ್, ಹಾಗೂ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.