ರಾಷ್ಟ್ರ್ರಧ್ವಜವನ್ನು ಪ್ರತಿಯೊಬ್ಬ ಭಾರತೀಯ ಗೌರವಿಸಬೇಕು

ಕೋಲಾರ ಜ,೧೩- ರಾಷ್ಟ್ರ್ರಧ್ವಜಕ್ಕೆ ಸಲ್ಲಬೇಕಾದ ಗೌರವವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ನೀಡಲೇಬೇಕು ಇದು ನಮ್ಮ ದೇಶಪ್ರೇಮ ದೇಶಭಕ್ತಿಯ ಸಂಕೇತವಾಗಿದೆ ಎಂದು ಜಿಲ್ಲಾ ಭಾರತ ಸೇವಾದಳ ಉಪಾಧ್ಯಕ್ಷ ತಿಳಿಸಿದರು.
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಜಿಲ್ಲಾ ಭಾರತ ಸೇವಾದಳ ಶತಮಾನೋತ್ಸವ ಸವಿನೆನಪಿಗಾಗಿ ಏರ್ಪಡಿಸಿದ್ದ ರಾಷ್ರಗೀತೆ ರಾಷ್ರ್ಟ್ರ ಧ್ವಜ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತ ದೇಶದ ರಾಷ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನ, ರಾಷ್ಟ್ರ, ಭಾಷೆ, ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕರು ಗೌರವಿಸಬೇಕು. ರಾಷ್ರ.ಭಕ್ತಿ ಮತ್ತು ರಾಷ್ಟ್ರ್ಟ್ರಪ್ರೇಮ ನಮ್ಮ ಹಕ್ಕು ಆಗಿದೆ ಎಂದರು.
ರಾಷ್ರಧ್ವಜವನ್ನು ಹಾರಿಸುವ ಮಡಿಚುವ ಗೌರವಿಸುವ ಹಾಗೂ ಸಂಗ್ರಹಿಸಿಡುವ ಪದ್ಧತಿ, ಆರೋಹಣ, ಅವರೋಹಣ ಆಗ ರಾಷ್ಟ್ರ್ರಭಕ್ತಿ ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರೀಯ ಭ್ರಾತೃತ್ವ ಮೂಡುತ್ತದೆ ಎಂದರು.
ಈಗಾಗಲೇದೇಶಭಕ್ತಿ ದೇಶಪ್ರೇಮದ ಬಗ್ಗೆ ಗಾಯನ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದರು.
ಜಿಲ್ಲಾ ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ. ದಾನೇಶ್ ಮಾತನಾಡಿ ಶತಮಾನೋತ್ಸವದ ಅಂಗವಾಗಿ ಪ್ರತಿ ಶಾಲೆಯನ್ನು ವಿದ್ಯಾರ್ಥಿಗಳಲ್ಲಿ ರಾಷ್ರಧ್ವಜ, ರಾಷ್ರಗೀತೆಯ ಮಾಹಿತಿಯನ್ನು ನೀಡುತ್ತಾ ರಾಷ್ಟ್ರ ಪ್ರೇಮವನ್ನು ಉಂಟುಮಾಡುವ ಪ್ರಾಮಾಣಿಕ ಪ್ರಯತ್ನ ಇದಾಗಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು
ವಿದ್ಯಾರ್ಥಿಗಳು ಪ್ರತ್ಯಕ್ಷತೆಯಲ್ಲಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಮಹಾ ಶಿಕ್ಷಕರಾದ ಪಿ.ಎನ್. ಗೋವಿಂದಪ್ಪ, ಸೊನ್ನೇಗೌಡ, ಮೀನಾ, ಮಮತಾ ಮತ್ತಿತರರು ಉಪಸ್ಥಿತರಿದ್ದರು.