ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಶಿಕ್ಷಕರ ತರಬೇತಿ ಕಾರ್ಯಕ್ರಮ

ಸಿರವಾರ,ಸೆ.೦೨- ಪಟ್ಟಣದ ಶಾಂತಿನಿಕೇತನ ಶಾಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ನ ಪ್ರಶಿಕ್ಷಣ ಭಾರತಿ ಅಡಿಯಲ್ಲಿ ಶಿಕ್ಷಕರ ಪ್ರಶಿಕ್ಷಣ ಪ್ರಕಲ್ಪ ೨ ದಿನಗಳ ಶಿಕ್ಷಕರ ತರಬೇತಿ ಕಾರ್ಯಕ್ರಮ ಶನಿವಾರ ಆರಂಭವಾಯಿತು.
ಭಾರತೀಯ ಜೀವನ ಮೌಲ್ಯಗಳನ್ನು ಜನಮನದಲ್ಲಿ ಬೇರೂರುವಂತೆ ಮಾಡುವುದು, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಸಂಸ್ಕಾರಯುಕ್ತ, ರಾಷ್ಟ್ರನಿಷ್ಠ ಶಿಕ್ಷಣ ನೀಡುವುದು, ಯೋಗ,ಆರೋಗ್ಯ, ಸೇವಾ ಪೂರಕ ಚಟುವಟಿಕೆಗಳಿಗೆ ಆದ್ಯತೆ ನೀಡುವುದು ರಾಷ್ಟ್ರೋತ್ಥಾನ ನ ಧ್ಯೇಯವಾಗಿದೆ ಎಂದು
ನಿವೃತ್ತ ಮುಖ್ಯೋಪಾಧ್ಯಾಯ ಹಾಗು ಅನುದಾನಿತ ಶಾಲೆಗಳ ರಾಜ್ಯ ಉಪಾಧ್ಯಕ್ಷ ಕೊಟ್ರಪ್ಪ ಗುರೂಜಿ ಹೇಳಿದರು.
ಈ ವೇಳೆ ಶಾಂತಿನಿಕೇತನ ಶಾಲೆಯ ಮುಖ್ಯಸ್ಥ ಅರಿಕೇರಿ ಬಸವಲಿಂಗಪ್ಪ, ವಿದ್ಯಾವಾಹಿನಿ ಶಾಲೆಯ ಮುಖಸ್ಥರಾದ ಟಿ.ಬಸವರಾಜ, ಶಾಂತಿನಿಕೇತನ ಶಾಲೆಯ ಪ್ರಾಚಾರ್ಯೆ ಅನುರಾಧಾ ಯು, ಸಂದೀಪನ ಶಾಲೆಯ ಫಕ್ರುದ್ದೀನ್, ಜ್ಞಾನ ಗಂಗಾ ಶಾಲೆಯ ವೆಂಕಟರಡ್ಡಿ ಬಲಕಲ್, ಹಾಗು ಪಟ್ಟಣದ ಬಸವೇಶ್ವರ ಶಾಲೆ, ಶಾಂತಿನಿಕೇತನ ಶಾಲೆ, ಸಜ್ಜಲಶ್ರೀ ಶಾಲೆ, ಚೈತನ್ಯ ಶಾಲೆ, ಬಾಪೂಜಿ ಶಾಲೆ, ಜ್ಞಾನಗಂಗಾ ಶಾಲೆಯ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು.