ರಾಷ್ಟ್ರೀಯ 28ನೇ ಸೈಕ್ಲಿಂಗ್ ಚಾಂಪಿಯನ್‍ಶಿಪ್: ರಾಜಸ್ಥಾನ ಅಗ್ರ ಸ್ಥಾನ

ವಿಜಯಪುರ, ಜ.10:ನಗರದಲ್ಲಿ ಆರಂಭಗೊಂಡಿರುವÀ 28 ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‍ಶಿಪ್‍ನ ಮೊದಲ ದಿನ ರಾಜಸ್ತಾನದ ಸೈಕ್ಲಿಸ್ಟ್‍ಗಳು ಪಾರಮ್ಯ ಮೆರದರು. ಆದರೆ ಕರ್ನಾಟಕದ ಸೈಕ್ಲಿಸ್ಟ್‍ಗಳು ಸಹ ತೀವ್ರ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು.

ಪುರುಷರ 40 ಕಿ.ಮೀ ವೈಯಕ್ತಿಕ ಟಾಯಮ್ ಟ್ರಯಲ್ ಕರ್ನಾಟಕದ ನವೀನ್ ಜಾನ್ 49ನಿ51:977 ಸೆಕೆಂಡ್ಸ್‍ನಲ್ಲಿ ಗುರಿ ಕ್ರಮಿಸುವ ಮೂಲಕ ಅಗ್ರಸ್ಥಾನ ಬಾಚಿಕೊಂಡು ಕರ್ನಾಟಕ ತಂಡದ ಶುಭಾರಂಭ ಮಾಡಿದರು. 18 ವರ್ಷದೊಳಗಿನ ಬಾಲಕಿಯರ 20 ಕಿ.ಮೀ. ವೈಯುಕ್ತಿಕ ಟೈಂ ಟ್ರಯಲ್ಸ್‍ನಲ್ಲಿ ರಾಜಸ್ತಾನ ಅಗ್ರಸ್ಥಾನ ಪಡೆದರೆ, ಕರ್ನಾಟಕದ ಸೈಕ್ಲಿಸ್ಟಗಳು ಉಳಿದೆರಡು ಸ್ಥಾನ ಬಾಚಿಕೊಂಡರು.

16 ವರ್ಷದೊಳಗಿನ ಬಾಲಕರ 20 ಕಿ.ಮೀ ವೈಯಕ್ತಿಕ ಟೈಂ ಟ್ರಯಲ್, 23 ವರ್ಷದೊಳಗಿನ ಪುರುಷರ 40 ಕಿ.ಮೀ ವೈಯುಕ್ತಿಕ ಟೈಂ ಟ್ರಯಲ್ಸ್‍ನಲ್ಲಿಯೂ ರಾಜಸ್ತಾನ ಸೈಕ್ಲಿಸ್ಟ್‍ಗಳು ಅಗ್ರಸ್ಥಾನ ಪಡೆದುಕೊಂಡರು.


ಫಲಿತಾಂಶ
1} 18 ವರ್ಷದೊಳಗಿನ ಬಾಲಕಿಯರ 20 ಕಿ.ಮೀ ವೈಯಕ್ತಿಕ ಟಾಯಮ್ ಟ್ರಯಲ್

1) ಹರ್ಷಿತಾ ಜಕಾರ ರಾಜಸ್ಥಾನ 29 ನಿ27:210 ಸೆಕೆಂಡ್ಸ

2) ನಂದಾ ಚಿಚಖಂಡಿ ಕರ್ನಾಟಕ 30 ನಿ18:029 ಸೆಕೆಂಡ್ಸ

3) ಅನುಪಮಾ ಗುಳೇಧ ಕರ್ನಾಟಕ 30 ನಿ49:649 ಸೆಕೆಂಡ್ಸ


2} 16 ವರ್ಷದೊಳಗಿನ ಬಾಲಕರ 20 ಕಿ.ಮೀ ವೈಯಕ್ತಿಕ ಟಾಯಮ್ ಟ್ರಯಲ್

1) ಶೌರ್ಯ ಶೇರೋನ್ ರಾಜಸ್ಥಾನ 26ನಿ24:126 ಸೆಕೆಂಡ್ಸ

2) ರಾಧಾಕಿಶನ್ ಹುಡ್ಡಾ ರಾಜಸ್ಥಾನ 26ನಿ51:184 ಸೆಕೆಂಡ್ಸ

3) ಯಲ್ಲೇಶ ಹುಡೇದ ಕರ್ನಾಟಕ 27ನಿ06:420 ಸೆಕೆಂಡ್ಸ


3} 23 ವರ್ಷದೊಳಗಿನ ಪುರುಷರ 40 ಕಿ.ಮೀ ವೈಯಕ್ತಿಕ ಟಾಯಮ್ ಟ್ರಯಲ್

1) ಮಾನವ ಸರ್ದಾ ರಾಜಸ್ಥಾನ 52ನಿ47:356 ಸೆಕೆಂಡ್ಸ

2) ದುಶ್ಯಂತ ಬೇನಿವಾಲ ಚಂಢಿಗಡ 53ನಿ09:840 ಸೆಕೆಂಡ್ಸ

3) ಸಾಹಿಲ್ ಹರಿಯಾಣ 53ನಿ59:070 ಸೆಕೆಂಡ್ಸ


4} ಪುರುಷರ 40 ಕಿ.ಮೀ ವೈಯಕ್ತಿಕ ಟಾಯಮ್ ಟ್ರಯಲ್

1) ನವೀನ್ ಜಾನ್ ಕರ್ನಾಟಕ 49ನಿ51:977 ಸೆಕೆಂಡ್ಸ

2) ದಿನೇಶಕುಮಾರ ಸರ್ವಿಸಸ್ 51ನಿ08:756 ಸೆಕೆಂಡ್ಸ

3) ಜೋಯಲ್ ಸಂತೋಷ ಸುಂದರಂ ಎಸ್. ತಮಿಳುನಾಡು 51ನಿ28:293 ಸೆಕೆಂಡ್ಸ