ರಾಷ್ಟ್ರೀಯ ಹ್ಯಾಂಡ್‍ಬಾಲ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾದ ಕಲಬುರಗಿ ಕ್ರೀಡಾಪಟುಗಳು

ಕಲಬುರಗಿ,ಮಾ.18-ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುಲಬರ್ಗಾ ಹ್ಯಾಂಡ್‍ಬಾಲ್ ಅಸೋಶಿಯೇಷನ್ ಅಡಿಯಲ್ಲಿ ತರಬೇತಿ ನಿರತ ಕ್ರೀಡಾಪಟುಗಳು ರಾಷ್ಟ್ರದ ವಿವಿಧೆಡೆ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಪ್ರದೇಶದ ವಿಧಿಶಾದಲ್ಲಿ ಮಾ.23 ರಿಂದ 27 ರವರೆಗೆ ನಡೆಯಲಿರುವ 45ನೇ ಹೆಚ್‍ಎಫ್‍ಐ ಜೂನಿಯರ್ ರಾಷ್ಟ್ರೀಯ ಹ್ಯಾಂಡ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಪ್ರತೀಕ ಕೊಟ್ರಪ್ಪಾ, ರಾಕೇಶ ದೇವಿಂದ್ರಪ್ಪ ಪೂಜಾರಿ ಮತ್ತು ಪೃಥ್ವಿ ವಿಜಯಕುಮಾರ, ಬಿಹಾರ ರಾಜ್ಯದ ಬೇಗುಸುರಾಲ್‍ನಲ್ಲಿ ಮಾ.31 ರಿಂದ ಏ.4 ರವರೆಗೆ ನಡೆಯಲಿರುವ 52ನೇ ಹೆಚ್‍ಎಫ್‍ಐ ಸೀನಿಯರ್ ಪುರುಷರ ರಾಷ್ಟ್ರೀಯ ಹ್ಯಾಂಡ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ದಿನೇಶ್ ಡಿ.ಪವಾರ್, ಕಿರಣ್ ಆರ್.ಸಿ, ಮಯೂರ್ ಎ.ಯು., ಆದಿತ್ಯ ಗಾಯಕವಾಡ, ತಿಲಕರಾಜ (ಕರ್ನಾಟಕ ತಂಡದ ತರಬೇತಿದಾರರು) ಭಾಗವಹಿಸಲಿದ್ದಾರೆ.
ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ನಡೆಯಲಿರುವ ರಾಷ್ಟ್ರೀಯ ಹ್ಯಾಂಡ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ತರಬೇತಿದಾರರಾದ ಸಂಜಯ ಬಾಣದ್, ಪ್ರವೀಣ್ ಪುಣೆ, ದೀಪಕ್ ಜೋಷಿ ಮತ್ತು ಗುಲಬರ್ಗಾ ಹ್ಯಾಂಡ್‍ಬಾಲ್ ಅಸೋಶಿಯೇಷನ್ ಕಾರ್ಯದರ್ಶಿ ದತ್ತಾತ್ರೇಯ ಕೆ.ಜೇವರ್ಗಿ ಶುಭ ಹಾರೈಸಿದ್ದಾರೆ.