ರಾಷ್ಟ್ರೀಯ ಹೆದ್ದಾರಿ ಮಾದರಿ ನೆಡುತೋಪಿಗೆ ಅರಣ್ಯ ಇಲಾಖೆ ದಿಟ್ಟ ಹೆಜ್ಜೆ

ಆಳಂದ:ಮೇ.28: ಪ್ರಸಕ್ತ ಮುಂಗಾರು ಹಂಗಾಮಿಗೆ ಪ್ರಾದೇಶಿಕ ಅರಣ್ಯ ಇಲಾಖೆಯು ಹೊಸ ಅಲೋಚನೆ ಮುಂದಿಟ್ಟು ರಾಜ್ಯ ಹೆದ್ದಾರಿಗೆ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಗಿಡಮರ ಬೆಳೆಸುವ ದಾಖಲಾರ್ಯ ಕಾರ್ಯಕ್ಕೆ ದಿಟ್ಟ ಹೆಜ್ಜೆಯನಿಟ್ಟು ಕಾರ್ಯಪ್ರವರ್ತವಾಗಿದೆ.
ಆಳಂದನಿಂದ ಕಲಬುರಗಿ ಮತ್ತು ಆಳಂದನಿಂದ ಖಜೂರಿ ಗಡಿ ಸರಹದ್ದಿನವರೆಗಿನ ಇರುವ 55 ಕಿ.ಮೀ ರಾಜ್ಯ ಹೆದ್ದಾರಿಗ ಹೊಸದಾಗಿ ಎರಡೂ ಬದಿಗೆ ಅರಣ್ಯ ಕೃಷಿಯ ಮೂಲಕ ನೆಡುತೋಪ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ವಾಗ್ದರಿ ರಿಬ್ಬನಪಲ್ಲಿ ಹೆದ್ದಾರಿ ಮಾರ್ಗ ಮಧ್ಯದ ಆಳಂದನಿಂದ ಕಲಬುರಗಿ ವರೆಗಿನ ಅಂತರರಾಜ್ಯ ಹೆದ್ದಾಯೂ ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡುವ ಹಿನ್ನೆಲೆಯಲ್ಲಿ ಹಾಗೂ ಆಳಂದನಿಂದ ಖಜೂರಿವರೆಗಿನ ರಾಜ್ಯ ಹೆದ್ದಾರಿಗೆ ಮಂದಾಲೋಚನೆಯಿಟ್ಟಿರು ಪ್ರಾದೇಶಿಕ ಅರಣ್ಯ ಇಲಾಖೆಯೂ ರಾಷ್ಟ್ರೀಯ ಹೆದ್ದಾರಿಗೆ ಅನುಗುಣವಾಗುವ ಅಗಲದ ಅಳತೆಯಲ್ಲಿ ಎರಡೂ ಬದಿ ಗಿಡ, ಮರಗಳನ್ನು ನೆಡುವ (ನೆಡುತೋಪ) ಐತಿಹಾಸಿಕ ಕಾರ್ಯಕ್ಕೆ ಗುಂಡಿತೊಡಲು ಶುರು ಮಾಡಿದೆ.
ಈ ಹಿಂದೆ ಬೀದರ್ ಲೋಕಸಭಾ ಕ್ಷೇತ್ರದ ಸಂಸದರೂ ಆಗಿದ್ದ ಕೇಂದ್ರ ಸಚಿವ ಭಗವಂತ ಖೂಬಾರವರು ಈ ವಾಗ್ದರಿ, ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಂಜೂರಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಮತ್ತು ರಾಜ್ಯದ ಸಿಎಂ ಸಲಹೆಗಾರ ಶಾಸಕ ಬಿ.ಆರ್. ಪಾಟೀಲರು ಸಹ ರಾಷ್ಟ್ರೀಯ ಹೆದ್ದಾರಿಗೆ ಹಿಂದೆ ಒತ್ತಾಯಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಘೋಷಣೆ ಸಾಧ್ಯತೆ ಮನಗಂಡು ಅರಣ್ಯ ಇಲಾಖೆ ಈಗಿನಿಂದಲೇ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಅಳತೆಯ ಅಂತರದಲ್ಲಿ ಗಿಡಮರಗಳನ್ನು ನೆಡಲು ಮುಂದಾಗಿದೆ.
ಕಳೆದ ಕೆಲ ವರ್ಷಗಳ ಹಿಂದೆ ವಾಗ್ದರಿ ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣದ ಅಗಲೀಕರಣ ವೇಳೆ ಅನಿರ್ವಾವಾಗಿ ತೆರವುಗೊಳಿಸಿದ ಸಾವಿರಾರು ಗಿಡಮರಗಳನ್ನು ನಾಶಗೊಂಡಿದ್ದವು. ಈ ಹೆದ್ದಾರಿ ಅಗಲೀಕರಣ ಕಾಮಗಾರಿ ಬಳಿಕ ನೆಡಲಾದ ಗಿಡಮರಗಳು ಬೆಳೆದು ನಿಂತುಕೊಂಡಿವೆ. ಆದರೆ ಭವಿಷ್ಯದಲ್ಲಿ ಹೆದ್ದಾರಿ ಅಗಲೀಕರಣವಾದರೆ ಈ ಮರಗಳು ತೆರವುಗೊಳ್ಳು ಸಾಧ್ಯತೆಯಿಂದಾಗಿ ಪರ್ಯಾಯ ಮರಗಳ ಬೆಳೆಸಲು
ಇಲಾಖೆಯೂ ಈ ರಾಜ್ಯ ಹೆದ್ದಾರಿಗೆ ರಾಷ್ಟ್ರೀಯ ಹೆದ್ದಾರಿಯ ಅಗಲದ ಅಳತೆಯಲ್ಲಿ ಗಿಡಗಳನ್ನು ನೆಡುವ ಕಾರ್ಯ ಆರಂಭಿಸಿದೆ.
ಇದಕ್ಕಾಗಿ ಹೆದ್ದಾರಿ ಒಡೆತನದ ಸಂಬಂಧಿತ ರಾಜ್ಯದ ಲೋಕೋಪಯೋಗಿ ಇಲಾಖೆಯ ಅನುಮತಿ ಮೆರೆಗೆ ಲೋಕೋಪಯೋಗಿ ಅಧಿಕಾರಿಗಳ ನೀಡಿದ ಹೆದ್ದಾರಿಯ ಗಡಿಯ ಅಂತರದ ಲೆಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಗಲುವ ಅಗಲದ ಅಳತೆಯಲ್ಲೇ ಸರ್ಕಾರಿ ನಿಯಮದಡಿ ಬರುವ ಜೂನ್ ತಿಂಗಳಲ್ಲಿ ಸಸಿಗಳನ್ನು ನೆಡಲು ಅರಣ್ಯ ಇಲಾಖೆ ತೆಗ್ಗು ತೋಡಲಾರಂಭಿಸಿದೆ.
ತೆಗ್ಗು ತೋಡುವ ಕಾಮಗಾರಿಗೆ ಅರಣ್ಯ ಅಧಿಕಾರಿಗಳಿಗೆ ಆರಂಭದಲ್ಲಿ ಕೊಂಚ ಅಡೆ, ತಡೆ ಎದುರಾಯಿತ್ತಾದರು ಬಳಿಕ ಎಲ್ಲವನ್ನು ಸರಿದ್ಯೋಗಿಸಿಕೊಂಡಿದ್ದಾರೆ.
ಹೆದ್ದಾರಿ ಬದಿಯ ಕೆಲವಡೆ ಜಮೀನು ಮಾಲೀಕರಾದ ರೈತರು, ಗಿಡ ಮರಗಳ ನೆಟ್ಟರೆ ತಮ್ಮ ಜಮೀನು ಹೋಗುತ್ತದೆ ಎಂದು ತಕರಾರು ಎತ್ತತೊಡಗಿದ್ದರಾದರು ಕೊನೆಗಳಿಗೆಯಲ್ಲಿ ಅರಣ್ಯ ಅಧಿಕಾರಿಗಳು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬದುವಿಗೆ ಗಿಡಮರಗಳಿರಬೇಕು. ಹಸಿರು ಪರಿಸರದೊಂದಿಗೆ ಅನುಕೂಲವಾಗುತ್ತದೆ ಎಂದು ತಿಳಿವಳಿಕೆ ನೀಡಿದ್ದರಿಂದ ಅಡೆ,ತಡೆ ನಿವಾರಣೆಯಾಗಿ ಭರದಿಂದ ಗುಂಡಿ ತೋಡವು ಕಾರ್ಯ ಸಾಗಿದೆ.
ಹೆದ್ದಾರಿ ಬದಿಗೆ ಅರಣ್ಯ ಇಲಾಖೆಯ ಈ ಮಾದರಿಯ ಕಾರ್ಯ ಮತ್ತು ದೂರದೃಷ್ಟಿಯ ಕೆಲಸವನ್ನು ಬರುವ ಜೂನ್ ತಿಂಗಳಲ್ಲಿ ಹೆದ್ದಾರಿ ಬದಿಗೆ ಲಕ್ಷಾಂತರ ಸಸಿಗಳನ್ನು ನೆಡಲು ಮುಂದಾಗಿರುವುದು ನೋಡಿರುವ ಅನೇಕ ಪರಿಸರ ಪ್ರೇಮಿಗಳು ಹರ್ಷವ್ಯಕ್ತಪಡಿಸಿ ಇಲಾಖೆಗೆ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸತೊಡಗಿದ್ದಾರೆ.
ಆಳಂದ ಪಟ್ಟಣದ ಹೊರವಲಯದ ತಾಲೂಕು ಆಡಳಿತ ಸೌಧನಿಂದ ಪಟ್ನಾ ಬಳಿಯ ಟೋಲಗೇಟ್ ವರೆಗೆ ಮತ್ತು ಆಳಂದನಿಂದ ಖಜೂರಿ ಬಾರ್ಡ್‍ವರೆಗಿನ ರಾಜ್ಯ ಹೆದ್ದಾರಿಗೆ ರಾಷ್ಟ್ರೀಯ ಹೆದ್ದಾರಿ ಅಳತೆಯಲ್ಲಿ 6 ಸಾವಿರ ಸಸಿಗಳನ್ನು ಅಳಂದ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ ನೆಡಲು ಮುಂದಾದರೆ, ಇನ್ನೂಳಿದ ಹೆದ್ದಾರಿಯ ಪಟ್ನಾ ಟೋಲಗೇಟ್‍ನಿಂದ ಕಲಬುರಗಿ ಹೊರವಲಯದ ವರೆಗೆ ಕಲಬುರಗಿ ಪ್ರಾದೇಶಿಕ ಅರಣ್ಯ ವಲಯ ಕಲಬುರಗಿ ಇಲಾಖೆಯಿಂದ 2400 ಸಸಿಗಳನ್ನು ನೆಡೆಸುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಇಲಾಖೆಯ ಕಡಗಂಚಿ ಸಸ್ಯ ಸಂರಕ್ಷಣೆ ಕೇಂದ್ರದಲ್ಲಿ ಉತ್ಪಾದಿತ ಸಸಿಗಳನ್ನು ಉಪ ಅರಣ್ಯ ಸಂರಕ್ಷóಣಾಧಿಕಾರಿಗಳು ಪ್ರಾದೇಶಿಕ ಅರಣ್ಯ ವಿಭಾಗ ಕಲಬುರಗಿಯ ಸಮಿತಕುಮಾರ ಪಾಟೀಲ (ಐಎಫ್‍ಎಸ್) ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆದ್ದಾರಿ ಹಸಿರಿಕರಣ:

ಲೋಕೋಪಯೋಗಿ ಇಲಾಖೆಗೆ ಪತ್ರವ್ಯವಹಾರ ನಡೆಸಿ ರಾಜ್ಯ ಹೆದ್ದಾರಿ 10 ಮತ್ತು ರಾಜ್ಯ ಹೆದ್ದಾರಿ 32ರ ಗಡಿ ಅಂತರವನ್ನು ತೆಗೆದು ಸರ್ಕಾರದ ನಿಯಮಾವಳಿಯಂತೆ ಮತ್ತು ರೈತರನ್ನು ಮನವಲಿಸಿ ಬರುವ ಮಳೆಗಾಲಕ್ಕೆ ಹೆದ್ದಾರಿ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಡಲು ಮುಂಗಡ ಗುಂಡಿಗಳು ತೋಡುವ ಕಾರ್ಯವನ್ನು ಪ್ರಾರಂಭಿಸಲಾಗಿದೆ.

ಮಳೆಗಾಲದ ಮಳೆ ಬಿದ್ದ ಬಳಿಕ ಸದರಿ ಗಿಡಗಳು ನೆಡುವ ಕಾರ್ಯವನ್ನು ಪ್ರಾರಂಭಿಸಲಾಗುವುದು. ಹಚ್ಚಿದ ಗಿಡಗಳನ್ನು ಉಳಿಸಿ ಬೆಳೆಸಲು ರೈತರು ಮತ್ತು ಸಾರ್ವಜನಿಕರು ಸಹಕರಿಸಬೇಕು.
ಜಗನಾಥ ಕೋರಳ್ಳಿ
ವಲಯ ಅರಣ್ಯ ಅಧಿಕಾರಿಗಳು ಪ್ರಾದೇಶಿಕ ಅರಣ್ಯ ವಲಯ ಆಳಂದ.