ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜತೆ ಶ್ರೀದೇವಿ ಆಸ್ಪತ್ರೆ ಒಡಂಬಡಿಕೆ

ತುಮಕೂರು, ಜೂ. ೮- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಅಪಘಾತವಾದ ರೋಗಿಗಳಿಗೆ ಉಚಿತವಾಗಿ ಸುಮಾರು ೩೦ ಸಾವಿರದಷ್ಟು ಉಚಿತ ಚಿಕಿತ್ಸೆ ಗೆ ನೆರವಾಗುವಂತೆ ಅನುಕೂಲ ಕಲ್ಪಿಸಲಾಗಿದೆ ಎಂದು ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್ ಹೇಳಿದರು.
ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ವತಿಯಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಜತೆ ಒಡಂಬಡಿಕೆಗೆ ಸಹಿ ಹಾಕುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಎಂ.ಎಸ್.ಪಾಟೀಲ್ ಮಾತನಾಡಿ, ಶ್ರೀದೇವಿ ಆಸ್ಪತ್ರೆಯಲ್ಲಿ ಮೆಡಿಸಿನ್, ಸರ್ಜರಿ, ಕೀಲು ಮತ್ತು ಮೂಳೆ ವಿಭಾಗ, ನವಜಾತ ಶಿಶು, ಟಿ.ಬಿ. ಮತ್ತು ಕ್ಷಯರೋಗ, ಎದೆರೋಗ, ಚರ್ಮರೋಗ, ಮಾನಸಿಕ ರೋಗ ಚಿಕಿತ್ಸಾ ವಿಭಾಗ ಮತ್ತು ಮಕ್ಕಳ ಚಿಕಿತ್ಸೆ, ನೇತ್ರ ಚಿಕಿತ್ಸೆ ವಿಭಾಗ, ಮೂಗು ಕಿವಿ ಮತ್ತು ಗಂಟಲು (ಇ.ಎನ್.ಟಿ.) ವಿಭಾಗ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ ಇನ್ನೂ ಮುಂತಾದ ವಿಭಾಗಗಳನ್ನು ಎಂದಿನಂತೆ ರೋಗಿಗಳ ಸೇವೆಗೆ ಲಭ್ಯವಿದೆ ಎಂದರು.
ಶ್ರೀದೇವಿ ಆಸ್ಪತ್ರೆಯಲ್ಲಿ ದಿನದ ೨೪ ಗಂಟೆಯೂ ವೈದ್ಯರುಗಳು ಲಭ್ಯವಿದ್ದು, ರೋಗಿಗಳಿಗೆ ಅತ್ಯುತ್ತಮ ವಿಶ್ವದರ್ಜೆ ಚಿಕಿತ್ಸೆ ನೀಡಲಾಗುತ್ತದೆ. ಶ್ರೀದೇವಿ ಆಸ್ಪತ್ರೆಯಲ್ಲಿ ಆರ್ಥೋಸ್ಕೋಪಿಕ್ಸ್ ಶಸ್ತ್ರಚಿಕಿತ್ಸೆ, ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಕೊಲೊನೋಸ್ಕೋಪಿ ಸೇರಿದಂತೆ ಇನ್ನೂ ಮುಂತಾದ ಚಿಕಿತ್ಸಾ ಕೇಂದ್ರಗಳನ್ನು ಒಳಗೊಂಡಿದೆ. ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಉಪಕರಣಗಳೊಂದಿಗೆ ನವೀನ ರೀತಿಯ ಸರ್ಜರಿಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶ್ರೀದೇವಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಮೋಹನ್‌ಕುಮಾರ್ ಮಾತನಾಡಿ, ರೋಗಿಗಳು ಅತ್ಯುತ್ತಮ ಸೇವೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅತ್ಯುತ್ತಮ ನಿರ್ಣಯ ಮಾಡಿದ್ದಾರೆ. ಅಪಘಾತಕ್ಕೊಳಗಾದ ಸುಮಾರು ೪೮ ಗಂಟೆಗಳ ಕಾಲ ಚಿಕಿತ್ಸೆಗೆ ರೋಗಿಗಳಿಗೆ ಯಾವುದೇ ಇನ್ಯೂರೆನ್ಸ್ ಇಲ್ಲದಿದ್ದರೂ ಸಹ ಈ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದರು.
ಶ್ರೀದೇವಿ ವೈದ್ಯಕೀಯ ಉಪ ಅಧೀಕ್ಷಕರಾದ ಡಾ.ಚೆನ್ನಮಲ್ಲಯ್ಯ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾದರೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಂಪೂರ್ಣವಾಗಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.
ಶ್ರೀದೇವಿ ಆಸ್ಪತ್ರೆಯಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಉಪಕರಣಗಳೊಂದಿಗೆ ನವೀನ ರೀತಿಯ ಸರ್ಜರಿಗಳನ್ನು ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಅತ್ಯುತ್ತಮವಾದ ಐ.ಸಿ.ಯು ಮತ್ತು ಅತ್ಯಾಧುನಿಕ ಸ್ಕ್ಯಾನಿಂಗ್ ತಂತ್ರಜ್ಞಾನ, ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕ ಸುಸಜ್ಜಿತ ಅಪರೇಷನ್ ಥಿಯೇಟರ್, ಅಂಬ್ಯುಲೆನ್ಸ್, ರಕ್ತನಿಧಿ, ಔಷಧಾಲಯಗಳು, ಪ್ರಯೋಗಾಲಯಗಳು, ರೇಡಿಯಾಲಜಿ ವಿಭಾಗ, ಕ್ಯಾಥ್ ಲ್ಯಾಬ್, ೧೬ ಸ್ಲೈಸ್ ಸಿ.ಟಿ. ಸ್ಕ್ಯಾನಿಂಗ್, ಎಕ್ಸ್ ರೇ ೩.೦ ಟೆಸ್ಲಾ. ಎಂ.ಆರ್.ಐ. ಇನ್ನೂ ಮುಂತಾದ ಸೇವೆಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ೦೮೧೬-೨೨೧೧೯೯೯ ರವರನ್ನು ಸಂಪರ್ಕಿಸುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತುಮಕೂರು ಜಿಲ್ಲಾ ಕೋ-ಅಡಿನೇಟರ್ರಾದ ಸಿ.ವಸಂತನಾಯ್ಕ, ಶ್ರೀದೇವಿ ಆಸ್ಪತ್ರೆಯ ನರರೋಗ ತಜ್ಞರಾದ ಡಾ.ಸಂಪತ್, ಈ ಸಂದರ್ಭದಲ್ಲಿ ಶ್ರೀದೇವಿ ಆಸ್ಪತ್ರೆಯ ಆಥೋಪೆಡಿಕ್ ವಿಭಾಗದ ಮುಖ್ಯಸ್ಥರಾದ ಡಾ.ಎನ್.ಎಸ್.ಗುಡಿ, ಡಾ.ಅಮಿತ್, ಶ್ರೀದೇವಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಟಿ.ಜಿ.ದೀಪಕ್, ಡಾ.ಈಶ್ವರಪ್ಪ ಹಾಗೂ ಶ್ರೀದೇವಿ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಉಪಅಧೀಕ್ಷಕರಾದ ನರಸಪ್ಪ ಮತ್ತಿತರರು ಉಪಸ್ಥಿತರಿದ್ದರು.