ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಕಲಬುರಗಿ:ಜ.24: ನಗರದ ಜಿಲ್ಲಾ ಜಿಮ್ಸ್ ಆಸ್ಪತ್ರೆಯ , ಮಕ್ಕಳ ವಿಭಾಗದ ವಾರ್ಡ್‌ ನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಈ ದಿನ ಹೆಣ್ಣು ಮಗು ಹೆರಿಗೆಯಾದ ತಾಯಂದಿರಿಗೆ ಹಣ್ಣುಗಳು ಕೊಡುವುದರ ಮೂಲಕ ಕಲ್ಬುರ್ಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜೀಮ್ಸ್ ಆಸ್ಪತ್ರೆಯಲ್ಲಿ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರು ಡಾ. ಅಂಬಾರಾಯ ರುದ್ರವಾಡಿ , ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ವಿವೇಕಾನಂದ ರೆಡ್ಡಿ , ಓಬಿಜಿ ಹೆಚ್ ಓ ಡಿ ಡಾ.ಉಷಾ ದೊಡ್ಡಮನಿ , ಜಿಲ್ಲಾ ಮಕ್ಕಳ ಘಟಕ ವಿಭಾಗದ ನೋಡಲ್ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರು ಡಾ. ರೇವಣಸಿದ್ದಪ್ಪ ಭೊಸ್ಗಿ . ಹಾಗೂ ಓಬಿಜಿ ವಿಭಾಗದ ಎಲ್ಲ ವೈದ್ಯರು , ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಯಂದಿರು ಉಪಸ್ಥಿತರಿದ್ದರು