ರಾಷ್ಟ್ರೀಯ ಸ್ವಯಂ ಸೇವಕ ಸಂಘದವತಿಯಿಂದ ಪರಿಸರ ದಿನಾಚರಣೆ

ಸಿರುಗುಪ್ಪ ಜೂ 10 : ತಾಲೂಕಿನ ಹಚ್ಚೋಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವತಿಯಿಂದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಿಜೆಪಿ ತಾಲೂಕು ಯುವ ಮೋರ್ಚ ಘಟಕದ ತಾಲೂಕು ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಅವರು ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸಿದರು.
ಇದೇ ಗ್ರಾಮ ಅಭಿವೃದ್ದಿ ಅಧಿಕಾರಿ ಮಂಜುಳ, ಮುಖಂಡರಾದ ಶರಣಬಸವ ಸಾಹುಕಾರ, ಮುದುಕಪ್ಪ, ಶಿವರಾಮೇಗೌಡ, ರಾಮಕೃಷ್ಣ, ವೀರೇಂದ್ರ ಸಾಹುಕಾರ ಇದ್ದರು.