ರಾಷ್ಟ್ರೀಯ ಸ್ವಯಂ ಸೇವಕರಿಂದ ಪಥ ಸಂಚಲನ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.27: ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಾಖಾ ವಾರ್ಷಿಕೋತ್ಸವ ಮತ್ತು ಯುಗಾದಿ ಉತ್ಸವದ ಅಂಗವಾಗಿ ಸ್ವಯಂ ಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು.
ನಗರದ ಸಿಬಿಎಸ್ ವೃತ್ತದಿಂದ ಆರಂಭವಾದ ಪಥ ಸಂಚಲನ ಪ್ರಮುಖ ವೃತ್ತದ ಮೂಲಕ ಸರಕಾರಿ ಜ್ಯೂನಿಯರ್ ಕಾಲೇಜ್ ಮೈದಾನವದಲ್ಲಿ ಸಮಾರೂಪಗೊಂಡಿತು. ಪಥ ಸಂಚಲನ ವೇಳೆ ದಾರಿಯೂದ್ಧಕ್ಕೂ ಸಾರ್ವಜನಿಕರು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿ ಜಯಘೋಷಗಳನ್ನು ಕೂಗಿದರು.
ನಂತರ ವಿಜಯನಗರ ಜಿಲ್ಲೆಯ ಸ್ವಯಂ ಸೇವಕ ಸಂಘ ಸಂಸ್ಕ್ರತ ಭಾರತಿ ಕಾರ್ಯದರ್ಶಿ ಕುಮಾರ ಮಾತನಾಡಿ, ನಮ್ಮ ಸಂಘಟನೆಯಿಂದ ದೇಶ ಪ್ರೇಮ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಜನರಿಗೆ ಅನುಕೂಲ ಹಾಗೂ ಸಮಾಜಮುಖಿ ಕೆಲಸ ಇಟ್ಟುಕೊಂಡು ದೇಶ ಕಟ್ಟುವ ಕೆಲಸ ಮಾಡುತ್ತಿದೆ ಎಂದರು. 
ಈ ವೇಳೆ ಶಾಸಕ ಪರಣ್ಣ ಮುನವಳ್ಳಿ, ನೆಕ್ಕಂಟಿ ಸೂರಿಬಾಬು, ನಾಗರಾಜ ಗುತ್ತೇದಾರ, ಅಯ್ಯನಗೌಡ ಹೇರೂರು, ಸಂತೋಷ್ ಕೇಲೋಜಿ, ಉಮೇಶ ಸಿಂಗನಾಳ, ಶ್ರೀಕಾಂತ ಹೋಸಕೇರಿ, ನಾಗರಾಜ ಚಳ್ಳಗೇರಿ, ಯಮನೂರ ಚೌಡ್ಕಿ ಸೇರಿದಂತೆ ಅನೇಕರು ಇದ್ದರು.