ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ

ಗದಗ,ನ28 : ಕಳೆದ ಒಂದು ದಶಕಗಳಿಂದ ವಿಶ್ವವಿದ್ಯಾಲಯಗಳಿಂದ ಹಮ್ಮಿಕೊಳ್ಳುತ್ತಿರುವ ರಾಷ್ಟೀಯ ಸೇವಾ ಯೋಜನೆಗಳಿಗೆ ಗ್ರಾಮಗಳಿಂದ ಹಾಗೂ ಗ್ರಾಮಸ್ಥರಿಂದ ಉತ್ಸಾಹ ಕಡಿಮೆಯಾಗುತ್ತಿರುವುದು ವಿಪರ್ಯಾಸವಾಗಿದೆ.ಆದ್ದರಿಂದ ವಿಶ್ವವಿದ್ಯಾಲಯ ಮಟ್ಟದಲ್ಲಿ ಗ್ರಾಮಗಳಿಗೆ ಹಾಗೂ ಶಿಬಿರಾರ್ಥಿಗಳಿಗೆ ಅನುಕೂಲವಾಗುವ ವಿಷಯಗಳ ಕುರಿತು ಚಿಂತನೆ ನಡೆಯಬೇಕಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಬಾಲ ನ್ಯಾಯ ಮಂಡಳಿಯ ಸದಸ್ಯ ಜಿ.ಸಿ. ರೇಶ್ಮಿ ಹೇಳಿದರು.

ಸಮೀಪದ ಹಾತಲಗೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹುಬ್ಬಳ್ಳಿ ಹಾಗೂ ಕೆ.ಎಲ್.ಇ ಸಂಸ್ಥೆಯ ಎಸ್.ಎ.ಮಾನ್ವಿ ಕಾನೂನು ಮಹಾವಿದ್ಯಾಲಯ ಮತ್ತು ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಡೆದ 2ನೇದಿನದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಬಿರಾರ್ಥಿಗಳಿಗೆ ಪೆÇ್ರೀತ್ಸಾಹ ನೀಡುವ ಮೂಲಕ ಕಾನೂನು ಮತ್ತು ಗ್ರಾಮದಲ್ಲಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುಲು ಮುಂದಾಗಬೇಕಿದೆ. ಈ ವಿಶೇಷ ಶಿಬಿರದಲ್ಲಿ ಕಾನೂನು ವಿದ್ಯಾರ್ಥಿಗಳು ಇರುವುದರಿಂದ ಕಾನೂನಿನ ಬಗ್ಗೆ ಗ್ರಾಮಸ್ಥರು ತಿಳಿಯಲು ಸಾಕಷ್ಟು ಅನುಕೂಲವಾಗುತ್ತದೆ.ಆದ್ದರಿಂದ ಗ್ರಾಮದ ಪ್ರತಿಯೊಬ್ಬ ನಾಗರಿಕರು ಶಿಬಿರಾರ್ಥಿಗಳಿಂದ ಕಾನೂನಿನ ಅರಿವುವನ್ನು ಪಡೆದುಕೊಳ್ಳಬೇಕಿದೆ. ಗ್ರಾಮದಲ್ಲಿ ಈಗಾಗಲೇ ರೈತರು ಮತ್ತು ಬಡ ವರ್ಗದ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವದು ಸರ್ವೆ ಸಾಮಾನ್ಯವಾಗಿದೆ.ಇದಕ್ಕಾಗಿ ಇಂತಹ ಶಿಬಿರಗಳಲ್ಲಿ ಗ್ರಾಮಸ್ಥರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಸಂಯೋಜನಾಧಿಕಾರಿ ಸುರೇಶ ಲಮಾಣಿ ಮಾತನಾಡಿ, ಪರಿಸರದಲ್ಲಿ ವಾಯುಗುಣದ ಬದಲಾವಣೆ ಮತ್ತು ವಿಪತ್ತು ನಿರ್ವಹಣೆಗಳ ಬಗ್ಗೆ ನಾವು ಈಗಾಗಲೇ ಕೋವಿಡ್ 19ರಲ್ಲಿ ಸಾಕಷ್ಟು ನೋವು ನಲಿವುಗಳನ್ನು ಅನುಭವನ್ನು ಪಡೆದುಕೊಂಡಿದ್ದೇವೆ. ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಸರಿಯಾಗಿ ಮಳೆ ಇಲ್ಲದೆ ರೈತರು ಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ನಾಗರಿಕರು ಬದಲಾವಣೆ ಮತ್ತು ವಿಪತ್ತುಗಳಿಗೆ ಅನುಗುಣವಾಗಿ ಕೃಷಿ ಕಾರ್ಯಗಳ ಮೂಲಕ ಆರ್ಥಿಕ ಅಭಿವೃದ್ಧಿ ಕಡೆ ಸಾಗಬೇಕಿದೆ. ಮನುಷ್ಯನ ದುರಾಸೆಗಳಿಂದ ಪರಿಸರದಲ್ಲಿ ಬದಲಾವಣೆಯನ್ನು ಕಾಣುತ್ತೇವೆ. ಇದರಿಂದ ಮಾನವನ ದೈಹಿಕ ಹಾಗೂ ಮಾನಸಿಕವಾಗಿ ತೊಂದರೆಯನ್ನು ಎದುರಿಸುವ ಪ್ರಸಂಗ ಎದುರಾಗಿದೆ ಎಂದರು.

ಗ್ರಾ.ಪಂ ಸದಸ್ಯೆ ಮಲ್ಲವ್ವ ಮಾಲ್ದಾರ, ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಎಸ್. ಅಸುಂಡಿ, ಮುಖ್ಯಶಿಕ್ಷಕ ಎನ್.ಹೆಚ್.ಕಂಬಳಿ, ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ಸಿ.ಬಿ.ರಣಗಟ್ಟಿಮಠ ಸೇರಿದಂತೆ ಇತರರಿದ್ದರು. ವಿಧ್ಯಾರ್ಥಿ ಬಸವರಾಜ್ ಅಪ್ಪಾಜಿ ಸ್ವಾಗತಿಸಿದರು. ಭಾಗ್ಯ ಮತ್ತು ಶೀಲಾ ಪ್ರಾರ್ಥಿಸಿದರು.
ಬಸಯ್ಯ ವೀರಾಪುರಮಠ ನಿರೂಪಿಸಿದರು. ಕೆ.ವಿನೋದ್ ವಂದಿಸಿದರು.