
ಕಲಬುರಗಿ: ಜು.15: ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ‘ಎ’, ‘ಬಿ’ ಮತ್ತು ಸ್ವ ನಿಧಿ ಘಟಕಗಳ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಕೋಟನೂರ ಗ್ರಾಮದಲ್ಲಿರುವ ಜಿಲ್ಲಾ ಕ್ರಷಿ ತರಬೇತಿ ಕೇಂದ್ರದಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವು ಕುಮಾರಿ. ವಿಂದ್ಯಶ್ರಿ ಅವರ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಗೊಂಡಿತು. ಶಿಬಿರಾರ್ಥಿಗಳಾದ ಕುಮಾರಿ. ಶ್ವೇತಾ, ಕುಮಾರಿ. ಸಹನಾ.ಯಾಳಗಿ, ತ್ರಿವೇಣಿ ಮತ್ತು ಸ್ರಷ್ಠಿ ಅವರು ರಾಷ್ಟ್ರೀಯ ಸೇವಾ ಯೋಜನೆಯ ಗೀತೆಯನ್ನು ಹಾಡಿದರು. ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ 2022-23ನೆ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೋಂಡ ಎಲ್ಲರನ್ನು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ ‘ಬಿ’ ಕಾರ್ಯಕ್ರಮಾಧಿಕಾರಿಗಳಾದ ಡಾ. ಮಹೇಶಕುಮಾರ ಗಂವ್ಹಾರ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಮಹಾತ್ಮ ಗಾಂಧೀಜಿ ಅವರು ಹೇಳಿರುವ “ನಿಮ್ಮನ್ನು ನೀವು ಕಂಡುಕೊಳ್ಳುವ ಬಗೆ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ” ಮತ್ತು ” ಜೀವನದ ಸಾರ್ಥಕತೆ ಸೇವೆಯಲ್ಲಡಗಿದೆ” ಎಂದು ಹೇಳತ್ತಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ಕ್ರಷಿ ತರಬೇತಿ ಕೇಂದ್ರದ ಮುಖ್ಯಸ್ಥರು ಹಾಗೂ ಸಹಾಯಕ ನಿರ್ದೇಶಕರಾದ ಡಾ. ಅನೀಲಕುಮಾರ ರಾಠೋಡ ಅವರು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮುಖಾಂತರ ಉದ್ಘಾಟಿಸಿ ಎಲ್ಲಾ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಸೇವಾ ಯೋಜನೆಯ ಕುರಿತಾಗಿ ಮಾತನಾಡುತ್ತಾ ಇದು ಒಂದು ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಶಿಕ್ಷಣ ಸಂಸ್ಥೆ. ಇದರ ಮುಖ್ಯ ಉದ್ದೇಶ ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ದಿಗೊಳಿಸುವುದಾಗಿದೆ. ಇದರ ಮೂಲ ತತ್ವ ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವವನ್ನು ನೀಡುವುದು ಹಾಗೂ ಇದರೊಂದಿಗೆ ರಾಷ್ಟ್ರ ಪ್ರೇಮ ಮತ್ತು ಸೇವಾಭಾವನೆಗಳನ್ನು ಬೆಳೆಸುವುದಾಗಿದೆ. ರಾಷ್ಟ್ರೀಯ ಸೇವಾ ಯೋಜನೆ (ಎನ್. ಎಸ್. ಎಸ್) ಒಂದು ಅನುಭವ, ಇದರ ಧ್ಯೇಯ ವಾಕ್ಯ “ನನಗಲ್ಲ, ನಿನಗೆ” ಎಂದು ರಾಷ್ಟ್ರೀಯ ಸೇವಾ ಯೋಜನೆಯ ಕುರಿತಾಗಿ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿ, ಕಲಬುರಗಿಯ ವಿಶೇಷಾಧಿಕಾರಿಗಳಾದ ಡಾ. ರಾಘವೇಂದ್ರ ಗುಡುಗುಂಟಿ ಅವರು ಮಾತನಾಡುತ್ತಾ ಈಗ ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ಪುರೂಷನಷ್ಟೇ ಸರಿಸಮಾನವಾಗಿ ಬೆಳೆದು ನಿಂತಿದ್ದಾಳೆ ಮತ್ತು ಸಶಕ್ತ ಮಹಿಳೆ ದೇಶದ ಹೆಮ್ಮೆ ಅಲ್ಲ ದೇಶದ ಶಕ್ತಿ, ದೇಶದ ಅಭಿವ್ರದ್ದಿ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ. ಶ್ವೇತಾ ದಿನೇಶ ದೊಡ್ಡಮನಿ ಅವರು ಮಾತನಾಡಿ ಹೆಣ್ಣು ಅಬಲೆ ಅಲ್ಲ ಸಬಲೆ, ತೊಟ್ಟಿಲು ತೂಗುವ ಕೆÉೈ ಜಗತ್ತನ್ನೆ ತೂಗಬಲ್ಲದು, ಹೆಣ್ಣು ಯಾರಿಗೂ ಏನೂ ಕಮ್ಮಿ ಇಲ್ಲ ಹಾಗೂ ಮಹಿಳೆ ತನ್ನ ಪ್ರತಿಭೆಯಿಂದ ಗುರುತಿಸಿಕೊಳ್ಳಬೇಕು ವಿನಃಹ ಅನುಕಂಪದಿಂದ್ದಲ್ಲ ಎಂದು ಶಿಬಿರಾರ್ಥಿಗಳಿಗೆ ಹುರಿದುಂಬಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಶರಣ ಬಸ್ಸಪ್ಪಾ ಹರವಾಳ ಅವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ನ್ಯಾಕ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಾಗೇಂದ್ರ ಮಸೂತಿ, ಡಾ. ಶಿವರಾಜ ಮೂಲಗೆ, ಡಾ. ಚಂದ್ರಕಲಾ ಪಾಟೀಲ, ಡಾ. ಶರಣಮ್ಮ್ ಕುಪ್ಪಿ, ಡಾ. ಪಾರ್ವತಿ ಪಾಟೀಲ, ಡಾ.ಪರವಿನ ರಾಜೇಸಾಬ,ಡಾ. ಪ್ರೇಮಚಂದ ಚವ್ಹಾಣ, ಶ್ರಿಮತಿ. ಉಮಾ ರೇವೂರ, ಶ್ರಿಮತಿ. ಉಮಾ ಮುತ್ತಗಿ, ಸಿದ್ಧಲಿಂಗ ಬಾಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ‘ಎ’ ಯ ಕಾರ್ಯಕ್ರಮಾಧಿಕಾರಿಗಳಾದ ಡಾ.ರೇಣುಕಾ ಹಾಗರಗುಂಡಗಿ, ರಾಷ್ಟ್ರೀಯ ಸೇವಾ ಯೋಜನೆ ಸ್ವ ನಿಧಿ ಘಟಕದÀ ಕಾರ್ಯಕ್ರಮಾಧಿಕಾರಿಗಳಾದ ಶ್ರಿಮತಿ.ಸುಷ್ಮಾ ಕುಲಕರ್ಣಿ, ಮತ್ತು ‘ಎ’, ‘ಬಿ’ ಮತ್ತು ಸ್ವ ನಿಧಿ ಘಟಕಗಳ ಸ್ವಯಂ ಸೇವಕಿಯರು ಉಪಸ್ಥಿತರಿದ್ದರು. ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ‘ಎ’, ‘ಬಿ’ ಮತ್ತು ಸ್ವ ನಿಧಿ ಗಳ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಪ್ರೊ. ಶಿವಲೀಲಾ ಧೋತ್ರೆ ಅಚ್ಚುಕಟ್ಟಾಗಿ ನಿರೂಪಿಸಿ ಯಶಸ್ವಿಗೊಳಿಸಿದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.