ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

ಕಲಬುರಗಿ,ಜು.20- ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ‘ಎ’, ‘ಬಿ’ ಮತ್ತು ಸ್ವ ನಿಧಿ ಘಟಕಗಳ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಕೋಟನೂರ ಗ್ರಾಮದಲ್ಲಿರುವ ಜಿಲ್ಲಾ ಕ್ರಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದು ಐದನೆಯ ದಿನದ ಶಿಬಿರದಲ್ಲಿ ಡಾ..ಪ್ರೇಮಚಂದ ಚವ್ಹಾಣ “ಕಲಿಕೆಯಲ್ಲಿ ತಂತ್ರಜ್ಞಾನ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ವಿದೇಶಗಳಿಗೆ ಹೋಲಿಸಿದರೇ ನಮ್ಮ ದೇಶದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯು ನಿಧಾನಗತಿಯಲ್ಲಿ ಸಾಗಿಬಂದಿದೆ ಎಂದು ಡಾ.ಪ್ರೇಮಚಂದ ಚವ್ಹಾಣ ಹೇಳಿದರು ಅವರು ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾ.ಸೇ.ಯೋ.ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಕರೋನಾ ಕಾಲದಲ್ಲಿ ವಿಶ್ಷವೇ ಮುಚ್ಚಲ್ಪಟ್ಟ ಸಂದರ್ಭದಲ್ಲಿ ಇಡಿ ವಿಶ್ವದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಂದುವರೆದ ರಾಷ್ಟ್ರಗಳಿಗಿಂತಲು ನಮ್ಮ ದೇಶದಲ್ಲಿ ವಿಶೇಷವಾಗಿ ಕಲಿಕೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಯಿತು.ಇದರಿಂದ ಅನೇಕ ಲಾಭದ ಜೊತೆಗೆ ದೋಷಗಳು ಇದ್ದಾವೆ ಆದ್ದರಿಂದ ನಾವುಗಳು ಅದನ್ನು ಮಿತವಾದ ರೀತಿಯಲ್ಲಿ ನಮಗೆ ಬೇಕಾದಷ್ಟನ್ನು ಮಾತ್ರ ಬಳಸಿಕೊಂಡು ಅದನ್ನು ಸದುಪಯೋಗ ಪಡೆಸಿಕೊಳ್ಳೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪೆÇ್ರ.ಉಮಾ ರೇವುರ ವಹಿಸಿಕೊಂಡಿದ್ದರು .ಕಾರ್ಯಕ್ರಮದಲ್ಲಿ ರಾ ಸೇ.ಯೋ.ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಹೇಶ ಗಂವ್ಹಾರ, ಶ್ರೀಮತಿ ಸುಷ್ಮಾ ಕುಲಕರ್ಣಿ, ಡಾ.ರೇಣುಕಾ .ಹೆಚ್.ಭಾಗವಹಿಸಿದ್ದರು . ಕುಮಾರಿ ಸಹನಾ ಯಾಳಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ. ಸುಷ್ಮಾ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿಜಯಲಕ್ಷ್ಮಿ ಗುರುಸಿದ್ದಯ್ಯ ತಂಡದವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.