ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವು ಪ್ರತಿಭೆಗಳನ್ನು ಹೊರಹಾಕಲು ಸೂಕ್ತ ವೇದಿಕೆ : ದೇವನಗೌಡ

ಕಲಬುರಗಿ:ಏ.15: ಕೋಟನೂರು (ಡಿ) ಮಠದಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಎಮ್.ಎಸ್. ಇರಾಣಿ ಪದವಿ ಮಹಾವಿದ್ಯಾಲಯ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮವನ್ನು ಸಿದ್ಧಶ್ರೀ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಅಮೃತಾ ಕೋರಳ್ಳಿ ಉದ್ಘಾಟಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದಕಬೇಕೆಂದು ಹೇಳಿದರು.
ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಪ್ರಾಚಾರ್ಯ ದೇವನಗೌಡ ಮಾತನಾಡುತ್ತಾ ಶಿಬಿರದಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿ ಓದುವುದರ ಜೊತೆಗೆ ಮತ್ತು ಪತ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ವಿಶೇಷ ಪ್ರತಿಭೆಗಳನ್ನು ಹೊರ ಹಾಕಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಸೂಕ್ತವಾದ ವೇದಿಕೆಯಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜಶೇಖರ ಬೀರನಳ್ಳಿ ವಹಿಸಿ ಮಾತನಾಡಿ ಎಲ್ಲಾ ಶಿಬಿರಾರ್ಥಿಗಳು ಈ ಒಂದು ವಾರದ ವಿಶೇಷ ಶಿಬಿರದ ಮಹತ್ವವನ್ನು ತಿಳಿದು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕ ವರ್ಗದವರಾದ ಶರಣಕುಮಾರ ಮಾಶಾಳ, ಡಾ. ನೀಲಕಂಠ ವಾಲಿ, ಡಾ. ಜಯಶ್ರೀ ಬಡಿಗೇರ್, ಡಾ. ಶ್ರೀದೇವಿ ಸರಡಗಿ, ಸುಮಂಗಲಾ ಪಾಟೀಲ, ಬಿ.ಓ.ಬೊಮ್ಮಪ್ಪ ಭಾಗವಹಿಸಿದರು.
ಕಾರ್ಯಕ್ರಮದ ನಿರೂಪಣೆ ಡಾ.ಮೈತ್ರಾದೇವಿ ಹಳೆಮನಿ ನೆರವೇರಿಸಿದರು. ರಾ.ಸೇ.ಯೋ. ಗೀತೆಯನ್ನು ರಾಹುಲ, ಭವಾನಿ, ಹಣಮಂತ, ಗಿರಿಜಾರಾಣಿ ಹಾಡಿದರು. ಸ್ವಾಗತವನ್ನು ಡಾ. ಶಂಕ್ರಪ್ಪ ಕೆ, ಎನ್.ಎಸ್.ಎಸ್. ‘ಬ’ ಘಟಕದ ಕಾರ್ಯಕ್ರಮಾಧಿಕಾರಿಗಳು ಮಾಡಿದರು. ವಂದನಾರ್ಪಣೆಯನ್ನು ಡಾ. ಪ್ರಾಣೇಶ ಎಸ್, ಎನ್.ಎಸ್.ಎಸ್. ‘ಅ’ ಘಟಕದ ಕಾರ್ಯಕ್ರಮಾಧಿಕಾರಿಗಳು ನೆರವೇರಿಸಿದರು.